ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಗಲಿ ತಗಲದೆ ಈ ಜಗದೊಳು ಜೀವಿಸೊ ಕಮಲ ಪತ್ರದಲ್ಲಿಹ ಜಲದ ಕಣಗಳಂತೆ ಪ ತಗಲುತ ನಿರತ ಸುಖವನೀವ ಕರ್ಮಕ್ಕೆ ತಗಲದೆ ಭವದಲಿ ಬಿಗಿವ ವಿಷಯಗಳಿಗೆ ಅ.ಪ ಪರಿಪರಿ ಕ್ಷಣಿಕ ಸುಖದ ಮೋಹದೊಳತಿ ದುರಿತಗಳಿಗೆಳೆವ ದುರುಳರ ಅಗಲೆಲೋ ಹರಿದಾಸರ ಸಹವಾಸಕ್ಕೆ ತಗಲುತ್ತ ಹರಿಗುಣ ಪೊಗಳುವ ಪರಮ ಸುಖವ ಬಯಸೊ 1 ಸತಿ ಸುತರೆಲ್ಲ ಶ್ರೀಪತಿಯ ಸೇವೆಯೊಳತಿ ಹಿತ ತೋರಲು ಅವರೊಳಾಮತಿಯನು ತಗಲಿಸೊ ಕ್ಷಿತಿಯೊಳವರು ನಿನ್ನ ಭೋಗವಸ್ತುಗಳೆಂದು ಮಿತಿ ಮೀರಿರುವ ಮಮತೆಗೆ ತಗಲದಿರೊ 2 ದುರ್ಮಾರ್ಗದೊಳು ದುಷ್ಟಕರ್ಮಗಳನೆ ಮಾಡಿ ಹೆಮ್ಮೆಯಿಂದಲಿ ಪಾಪ ಫಲಗಳ ಬಯಸದೆ ಧರ್ಮದಿ ಸುಖಗಳನನುಭವಿಸುವುದಕೆ ಸಮ್ಮತಿ ಈ ಯುವ ನಮ್ಮ ಪ್ರಸನ್ನನು 3
--------------
ವಿದ್ಯಾಪ್ರಸನ್ನತೀರ್ಥರು
ಕೆಡಗೊಡದಿರು ಎನ್ನ ಚಿತ್ತಗತಿಯ ಸುರರೊಡೆಯ ತವಾಂಘ್ರಿ ಹೊಂದಿದ ಮತಿಯ ಪ.ಒಂದು ಗುರಿಗಿಟ್ಟರೆ ತಪ್ಪುತಿದೆ ಮತ್ತೊಂದಕಿಡದೆ ತಾ ತಗಲುತಿದೆಹೊಂದಲೊಲ್ಲದು ತ್ವನಿಷ್ಠೆಯನು ಒಣದಂದುಗಗೊಳುತಿದೆಹರಿನೀನು1ಮುಂದಿಟ್ಟ ಷಡ್ರಸಾನ್ನವನುಣ್ಣದು ದೂರಿಂದ ನಿಸ್ಸಾರಕ್ಹೆಣಗುವುದುನಂದಿಸಲೊಲ್ಲದು ನೆಳಲ್ವಿಡಿದು ಕಿಚ್ಚೆಂದಂಜದೋಡಿ ಧುಮುಕುತದಿದು 2ಪ್ರದೇಶ ಅಂಗುಟ ಮಾತ್ರವ ಕಾಣದೆ ತಾಭೂದಿವಿ ಪಾತಾಳಕೈದುತಿದೆಮಾಧವಪ್ರಸನ್ನವೆಂಕಟ ದಯಾಳು ನಿನ್ನಪಾದದಲ್ಲಿಡು ಇದರುಲುಹು ಬಲು 3
--------------
ಪ್ರಸನ್ನವೆಂಕಟದಾಸರು