ದೃಷ್ಟಿ ದೋಷವು ತಗಲಿತೆನ್ನ ಕಂದನಿಗೆ ಪ
ದೃಷ್ಟಿಗೋಚರನಲ್ಲದಾ ದೇವ ರಕ್ಷಿಸಲು ಅ.ಪ
ಸೇರು ಬೆಣ್ಣೆಯ ತಿಂದು ದೂರು ಕೇಳಿದೆನಿಂದು
ಚಾರು ಮುಖಿಯರ ನೋಟ ಕ್ರೂರವೆಂದರಿ ಕಂದ
ಈರೇಳು ಭುವನಗಳ ತಿಂದು ತೇಗುವ ದೇವ
ಆರೋಗ್ಯಭಾಗ್ಯವನು ನಿನಗೆ ಕರುಣಿಸಲಿ 1
ಎಂದು ಕಾಣೆವು ಇಂಥಾ ಸುಂದರನ ನಾವೆಂದು
ಮಂದಗಮನೆಯರ ನುಡಿ ಅಂದವಾಯಿತೆ ಕಂದ
ಸಂದೇಹವಿಲ್ಲವರ ಶೃಂಗಾರಕೀ ಫಲವು
ಜಲಧಿ ಮನುಮಥನ ಮನುಮಥನೆ ಗತಿ 2
ನೀರು ಮಂತ್ರಿಸಿದಾಯ್ತು ಬೂದಿ ಮಂತ್ರಿಸಿದಾಯ್ತು
ನಾರಸಿಂಹಾದಿ ವರಮಂತ್ರಗಳ ಜಪವಾಯ್ತು
ಭಾರಿ ಪುಸಿಯಾಯ್ತು ಜನನಿಯೊಲು ಹರಸಿದೀತನಲಿ
ಮೀರಿಹನು ಯಂತ್ರ ಮಂತ್ರಾರ್ಥವೆಲ್ಲಾ ಪ್ರಸನ್ನ3