ಅಧಿಕಾರಿ ಮೋಕ್ಷಾಧಿಕಾರಿ ಬಲುಗುದಿಗೆಯ ಮಾರಿ ಅನಧಿಕಾರಿ ಪ
ಮುರುಕು ಮಾಳಿಗೆಯಲಿರೆ ಮರುಗುತಲ-ವರಿಗೆ ಮನೆಯ ಕೊಡುವನವನಧಿಕಾರಿಮರಗಳ ಕಡಿವನು ಮುಂದುಗಾಣದಲೆಮನೆ ಹೊಗಗೊಡದವ ಅನಧಿಕಾರಿ1
ಕೇಳುತ ತತ್ವವ ಆಲೋಚನೆಮಾಡಿ ಅಂತೆಯ ನಡೆವವನಧಿಕಾರಿಖೂಳರೊಳಾಡುತ ಕುಂಚಿತನೆ ಕುರುಡನವನು ಅನಧಿಕಾರಿ 2
ಪಡೆಯನು ಪಾಪವ ಬಿಡನವ ಸತ್ಯವನುಡಿವ ಸುವಾಕ್ಯವನಧಿಕಾರಿಮಡದಿಯ ಮೋಹಕೆ ಮುಂದುಗಾಣದಲಿಹಮುಡುದಾರನೆನಿಪವ ಅನಧಿಕಾರಿ 3
ತಿಳಿದರ ಸೇವೆಗೆ ತೇಯುವ ತನುವನು ತಗಲನು ನಿಂದ್ಯಕೆ ಅಧಿಕಾರಿತಲೆಯನು ಮಣಿಯನು ಮನದಲಿ ಮೋಸವ ಚಿಂತಿಪನವನು ಅನಧಿಕಾರಿ 4
ಚಿತ್ ಬಿಂದು ಉಕ್ಕುತ ಚಿತ್ಸುಖ ಸವಿದು ಚಿದಾನಂದನಾಗುವನಧಿಕಾರಿಎಡಬಲ ನೋಡುತ ಎತ್ತತ್ತ ಒಲೆವುತ ನಿಂತಿಹನವನು ಅನಧಿಕಾರಿ 5