ಕಾಮಪಿತ ಪದಸರಸಿರುಹ ಭೃಂಗ
ಭಂಗ ಪ
ದಾಕ್ಷಾಯಿಣೀಪತೇ ಬಾಗಿ ವಿಜ್ಞಾಪಿಸುವೆ
ದಾಕ್ಷಿಣ್ಯ ಲವಲೇಶವಿಲ್ಲವೊ ನನಗೆ
ಸಾಕ್ಷಿಯೇಸು ಕೊಡಲಿದಕೆ ಬ್ರಹ್ಮನ ಶಿರ ತರಿದೆ
ಸಾಕ್ಷಾತು ಪಿತನೆಂಬುದ ನೀ ಲಕ್ಷ್ಯವಿಡದೆ 1
ಸ್ಮರ ನಿನ್ನ ಕಿರಿತಂದೆ
ಅಕ್ಷಿತೆರದೀಕ್ಷಿಸವನ ಬಿಡದೆ ದಹಿಸಿನಿಂದೆ
ದಕ್ಷ ನಿನಗೇನಾಗಬೇಕು ತಿಳಿದು ನೋಡೊ
ತಕ್ಷಣದಲವನನೆತ್ತಿ ಹರಿಗಡಿದೆ ನೀನು 2
ಪಾಪಯೇಸು ಮಾಡಿದರೆಯು ಭಯವೇನು ನಿನಗೆ
ಶ್ರೀಪತಿ ರಂಗೇಶವಿಠಲಗೆ ಸರ್ವವರ್ಪಿಸಿ
ತಾಪತ್ರಯ ದೂರ ವಿರಾಗಿಯಾಗಿ ಮನಸ್ಸು ನಿ-
ಪರಿ ಮನಸ ಕೊಡು ಗುರುವೆ 3