ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನು ತಿಳಿದವನಲ್ಲ ನೀ ಕಾಯ್ದೆ ಶ್ರೀ ಕೃಷ್ಣ ನಾನರಿಯದಿರ್ದಡಿದ ನೀನರಿಯದವನೇ ಪ ಒಂದು ದಿನ ನಿನ್ನ ಧ್ಯಾನದಿ ನಡೆದು ಬರುತಿರಲು ಕೊಂದು ಚೂತದ ನೆಳಲಸಾರಿ ನಾನು ಒಂದು ನಿಮಿಷಮ ನೀರ ತಡಿಯಲಿ ಸಂಚರಿಸುತಿರ ಲೊಂದು ತಕ್ಷಕ ಬಂದು ವನವ ಹೊಕ್ಕಿರಲು 1 ಮಲ ಮೂತ್ರದುಪಹತಿಯ ಪರಿಹರಿಸಿ ಕೈಗಳನು ಜಲಮೃತ್ತಿಕೆಗಳಿಂದ ತೊಳೆದು ತೊಳೆದು ಎಳೆ ಬಿಸಿಲ ಸೇವಿಸುತ ದಂತಧಾವನ ಗೈದು ಸಲಿಲವನೆ ಮುಕ್ಕುಳಿಸಿ ಕೇಲದೊಳುಗಿದು 2 ನಿಂತು ಕಾಲ್ಮೊಗ ದೊಳೆದು ಆಚಮಿಸಿ ಆದಿತ್ಯ ನಂತಿ ಕಕೆ ಸಲಿಲಮಂತಿದ್ದಿ ಜಪವಾ ಅಂತ ರಂಗದಿ ಜಪಿಸಿ ಮುಗಿಸಿ ವಸ್ತ್ರಗಳಿಟ್ಟು ಗೊಂತಿಗೈತಂದವನು ಮರಳಿಧರಿಸಿ 3 ಹಚ್ಚಡವ ಹೊದ್ದು ಮುಂದಕೆ ನಡೆದು ಬರುತಿರ ಲಾಶ್ಚರ್ಯವೆನಿಸಿ ಬದಿಯೊಳಗುಮ್ಮಲು ಸ್ವಚ್ಚವಲ್ಲವಿದೆಂದು ಕಿಮುಚಿನಾ ನೋಡಿ ಬಲು ಬೆಚ್ಚಿ ಹಚ್ಚಡ ಬಿಸುಡೆ ಬಿಚ್ಚೆ ಪೆಡೆಯಲು ಕಂಡೆ 4 ನೀ ಕೊಲುವ ಕಾಲದೊಳು ಕೊಲುವರಿಲ್ಲ ಲೋಕೈಕನಾಥ ಚಿಪ್ಪಳಿ ವೇಣುಗೋಪಾಲ ನೀ ಕರುಣದಿಂ ಕಾಯ್ದೆ ಎನ್ನಸುವನು 5
--------------
ಕವಿ ಪರಮದೇವದಾಸರು
ಬೊಮ್ಮ ಗಟ್ಟಿಯಲಿದ್ದ ನಮ್ಮ ಪ್ರಾಣೇಶನು ಹ- ನುಮನೆಂಬುವ ಹರಿಭಜಕನೀತ 1 ರಮ್ಮೆರಮಣನಾದ ರಾಮಸೇವಕನಂಘ್ರಿ ಒಮ್ಮೆ ನೋಡಲು ದೋಷದೂರವಾಗ 2 ಕರ ಜೋಡಿಸಿ ಮುಗಿದು ಕೊಂ- ಡಾಡುತೀತ ನಗುವ ಮಹಿಮೆಯನು 3 ಆಡಿದ್ವಚನ ಸತ್ಯಮಾಡುವ ಭಕುತರು ಬೇಡಿದ್ವರಗಳ ಚೆಲ್ಲಾಡುವನು 4 ಹರುಷದಿಂದಲಿ ತಾ ಕಿಂಪುರುಷಖಂಡದಿ ತಪಾ- ಚರಿಸುತಿದ್ದನು ಮಹಾಪುರುಷನೀತ 5 ಅರಸರಂತಕನಾದ ಪರಶುರಾಮನ ಗೆದ್ದ ಅರಸನಂಘ್ರಿಗಳನು ಸ್ಮರಿಸಿಕೊಂಡು 6 ಸುಗ್ರೀವನಲ್ಲಿ ಪರಮನುಗ್ರ(ಹ) ಮಾಡುತಲಿ ದ- ಶಗ್ರೀವನಲ್ಲಿ ಬಂದನಾಗ್ರ(ಹ)ದಿಂದ 7 ನಖ ಶಿರದಿಂದುದ್ದವ ಮಾಡಿ ಉರಿವೀಲಂಕೆಗೆ ತಾನಂಕುರವನಿಟ್ಟ(?) 8 ಮರನಕಿತ್ತಕ್ಷಕುಮಾರನ ಮುರಿದು ತಾರ ಮರನ ಕರೆದು(?) ತಂದಮರನಾದನು 9 ವರದಿ ಬೆಳದ ಕುಂಭಕರಣನ ಕೊಂದು ಕಟ್ಟಿ ಸ್ಥಿರಪಟ್ಟವನು ವಿಭೀಷಣರಿಗಿಟ್ಟ 10 ಮಾತೆಕೊಟ್ಟಂಥ ರತ್ನರಾಕಟೆಯನ್ನು ತಂದು ಭೂತಳದೊಡೆಯಗಿಟ್ಟ ಪ್ರೀತಿಯಿಂದ 11 ಜೊತೆಮುತ್ತಿನ ಹಾರ ಕೊಡಲು ಜಾನಕಿ ರಘು- ನಾಥಗ್ವೊಲಿದು ಅಜಪದವಿನಿಟ್ಟ 12 ಸೀತಾಚೋರನ ಪ್ರಾಣಘಾತಕನು 13 ಅಂಜನಾತ್ಮಜ ದೊಡ್ಡ ಸಂಜೀವನವ ತಂದು ಕೊಂದಕಪಿಗಳ ಪ್ರಾಣ ಪಡೆದನೀತ 14 ಕಂಜಾಕ್ಷಿಯಳ ಕರೆತಂದು ಕೂಡಿಸಿ ರಾಮ- ಗಂಜದೆ ಎಡೆಯ ಕದ್ದೊಯ್ದೆಂಜಲುಂಡ 15 ರೋಮ ರೋಮಕೆ ಕೋಟಿ ಲಿಂಗ ಧರಿಸಿದ ಸು- ಜ್ಞಾನಿಗಳೊಡೆಯ ಮುಖ್ಯಪ್ರಾಣದೇವ 16 ರಾಮ ಲಕ್ಷ್ಮಣ ಸೀತಾದೇವೇರಿಂದ್ವೊಡಗೂಡಿ ಈ ಮಹಾಸ್ಥಳದಿ ನಿಂತ ಮಹಾತ್ಮನು 17 ಭೀತಿ ಇಲ್ಲದಲೆ ಭೀಮೇಶ ಕೃಷ್ಣ(ನ) ನಿಜ ದೂತನೆನಿಸಿದ ಪ್ರಖ್ಯಾತನೀತ 18
--------------
ಹರಪನಹಳ್ಳಿಭೀಮವ್ವ
ಸುಮ್ಮನೆ ತೊಲಗು ಕಂಡೆಲೆ ಮಾಯಿ ನೀನು ನಮ್ಮಯ್ಯ ಬಂದರೆ ಉಳಿಲಾರಿ ಇನ್ನು ಪ ಉರಗ ತಾ ಬೆನ್ನ್ಹತ್ತಿ ಗರುವದಿಂ ಬಂದು ಮಹ ಗರುಡನಂ ಕಂಡಕ್ಷಣದ್ಹರಣ ತೊರೆವಂತೆ ಹರಿದಾಸರೆನ್ನದೆ ಪರಿಪರಿ ಕಾಡಿ ನೀ ಶರಣಜನಪ್ರಿಯನ ಕಂಡುರಿದ್ಹೋಗಬೇಡ 1 ಲಕ್ಷಿಸೆ ಮಂಡೂಕ ಮಕ್ಷಕನ ಬೆನ್ನ್ಹತ್ತಿ ತಕ್ಷಕಗೆ ಸಿಕ್ಕು ತಾ ಭಕ್ಷವಾದಂತೆ ಲಕ್ಷ್ಮೀಪತಿದಾಸರ ಲಕ್ಷಿಸದೆ ಕಾಡಿ ಭಕ್ತ ಪಕ್ಷಕನ ಕರಕೆ ಸಿಕ್ಕು ಶಿಕ್ಷೆಪಡಬೇಡ 2 ಕ್ಷೇಮದಿಂ ದೂರಿರೋ ಹೇ ಮಾಯಿ ನೀನು ನಾಮವೇ ಉಳಿಸನೀ ಭೂಮಿಯ ಮೇಲೆ 3
--------------
ರಾಮದಾಸರು
ಸುರವೃಂದ ವಾರಿಧಿಶಯನ ಗೋವರ್ಧನೋದ್ಧರಣ ಚಾರುಚರಣ ಪ ವಾರಿಜದಳ ನಯನ ವಾರಿಧಿಶಯನ ಉರ್ವಿಭಾರಾಪಹರಣ ಸಾರಿದಜನ ಸಂಸಾರಿಸಿರಿಯಣ 1 ಭಂಜನ ಹರಣ ಪಾರ್ಥಿವ ಕುಲರಂಜನ ಚಾತುರ್ಯತರ ಜಾಣ ಚೇತನಾತ್ಮಕ ಸುಗುಣ ಜಾತ ರಹಿತ ಜನಜಾತ ಸಂಜೀವನ 2 ದೇವಕಿ ವರನಂದನ ದಿವಿಜನುತ ರಾವಣಾಸುರ ಬಂಜನ ಮಾವ ಕಂಸಾಂತಕ ಮಾವಧುನಾಯಕ ಸೇವಿತ ರಕ್ಷಕ ಶರ್ವಾಣೀವರ ಸಖ 3 ಭಂಜನ ನಾರದ ನುತ ವಾನರಪತಿ ಪರಿಪಾಲನ ದೀನಜನರ ಪೋಷ ಭಾನು ಕೋಟಿ ಪ್ರಕಾಶ ಮನಮೋಹನ ರೂಪ ಲೀಲಾರ ಮಾಲೋಲ 4 ಚಿಂತತ ಫಲದಾಯಕ ಭಕ್ತರ ಹೃದಯಾಂತರಂಗದ ನಾಯಕ ಕಂತು ಜನಕ ಲಕ್ಷ್ಮೀಕಾಂತ ಭೀಮನ ಕೋಣೆ ಸಂತತವಾಸ ತಕ್ಷಕಾಂತಕಾರೂಢ ಹರಿ 5
--------------
ಕವಿ ಪರಮದೇವದಾಸರು