ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಕ್ಕೋ ಗಂಟ ನಿನ್ನಾಟವ ತಿಳಿಸುವೆ ಸಖಿಯರ ಕೂಡಿದಂತೆಲ್ಲೊ ಪ ಯುಕುತಿಯ ನಾ ಕೇಳೆನೆಲವೊ ಅ.ಪ. ಮದಗಜಮನೇರ ಹೆದರಿಸಿ ಬೆದರಿಸಿ ಅಧರವ ಸವಿದಂತಲ್ಲೊ ಸುದತಿಯರೆಲ್ಲರ ಅಂಜಿಸಿ ವಂಚಿಸಿ ಘೃತ ಸವಿದಂತಲ್ಲೋ 1 ಕ್ಷೋಣಿಯೊಳೆಲ್ಲಿಗೆ ಹೋದರು ಎನ್ನಯ ವೀಣೆಯ ಹೊರಬೇಕಲ್ಲೊ ಗಾಣದೆತ್ತಿನ ಪರಿಯಲಿ ತಿರುಗುತ ತ್ರಾಣ ತಪ್ಪಲು ಬಿಡೆನಲ್ಲೊ 2 ಸಣ್ಣಾಮಾತುಗಳಾಡಲು ಕೇಳುತ ಚಿಣ್ಣನಂತಿರಬೇಕಲ್ಲೊ ಘನ್ನ ಮಹಿಮ ಶ್ರೀ ವಿಜಯವಿಠ್ಠಲ ಇನ್ನೆಂದಿಗೂ ಬಿಡೆನಲ್ಲೊ 3
--------------
ವಿಜಯದಾಸ
ಮಾತ್ರೆ ತಾಳ ಇವು ಯಾತಕ್ಕೋ ಹರಿ ಖಾತ್ರಿ ತಾಳ ಶುದ್ಧಿರಬೇಕೊ ಪ ಧಾತ್ರಿ ಈರೇಳಕ್ಕೆ ಸೂತ್ರಧಾರ ಕೃಪಾ ಪಾತ್ರನಾಗ್ವ ತಾಳ ತಿಳೀಬೇಕೊ ಅ.ಪ ಕೃತಿ ಇವುಯಾತಕ್ಕೋ ಹರಿ ಪೂರ್ಣಮಹಿಮಸ್ಮøತಿ ಅರೀಬೇಕೊ ವರ್ಣಾಶ್ರಮ ಧರ್ಮ ಬಣ್ಣಿಪಗೂಡಾರ್ಥ ಕರ್ಣಕ್ಕೆ ಬಲು ತಾಳಿರಬೇಕೊ 1 ರಾಗಭೇದಗಳ ಬಲವ್ಯಾಕೋ ಹರಿ ಭೋಗಭಾಗ್ಯದಾಸೆ ನೀಗಿ ಸುಮನರನು ಬಾಗಿ ಒಲಿಸುವ ತಾಳಿರಬೇಕೊ 2 ಸಾಸಿರವಿದ್ಯದ ತಾಳ್ಯಕೋ ಹರಿ ಧ್ಯಾಸದ ಮಹ ತಾಳಿರಬೇಕೊ ಶ್ರೀಶ ಶ್ರೀರಾಮನದಾಸರ ಪ್ರೇಮನು ಮೇಷ ತನಗೆ ತಾಳಿದ್ದರೆ ಸಾಕೊ 3
--------------
ರಾಮದಾಸರು
ವಿಶೇಷ ಸಂದರ್ಭದ ಹಾಡುಗಳು ರಂಗನತೇರಿಗೆ ಬನ್ನಿರೋ ತೆಂಗು ಹೂ ಹಣ್ಣುಗಳ ತನ್ನಿರೋ ಬಂಗಾರದ ಗಿರಿಯಪ್ಪ ಎನ್ನಿರೋ ರಂಗ ಪರ್ಸಾದವ ಕೊಳ್ಳಿರೊ 1 ತೆಂಗಿನಮರ್ದುದ್ದ ತೇರೈತೆ ಅಲ್ಲಿ ರಂಗಿನ ಬಾವುಟ ಹಾರೈತೇ ಸಿಂಗಾರದಬಟ್ಟೆಯೇರೈತೇ ಹಂಗೂ ಹಿಂಗೂ ಜನ ಸೇರೈತೇ 2 ಬಾಳೆಕಂಬಗಳನು ಕಟ್ಟವ್ರೇ ತೋಳುದ್ದ ಹೂಸರ ಬಿಟ್ಟವ್ರೇ ತಾಳಮ್ಯಾಳ್ದೋರೆಲ್ಲಾ ನಿಂತವ್ರೇ ಬಾಳತುತ್ತೂರ್ಗೋಳನೂತ್ತವ್ರೇ 3 ತೇರಿನ ಗದ್ದುಗೆ ಬಂಗಾರ ತೋರಗಲ್ದಪ್ಪ ಅಲಂಕಾರ ಹಾರುವರ ಬಾಯಲ್ಲಿ ಓಂಕಾರ ರಂಗಪ್ಪಗಾಗೈತೆ ಸಿಂಗಾರ 4 ಭಟ್ಟರು ಮಂತ್ರವ ಹೇಳ್ತವ್ರೆ ಕಟ್ಟುನಿಟ್ಟಾಗಿ ನಿಂತವ್ರೇ ಬಟ್ಟಂದ ಹೂಗೊಳ ಹಾಕ್ತವ್ರೇ ಸಿಟ್ಟಿಲ್ಲದೆ ರಂಗ ನಗತವ್ನೇ 5 ಇಂಬಾಗಿ ಹೂರ್ಜಿಯ ಹಿಡಿದವ್ರೆ ದೊಂಬರೆಲ್ಲ ಕುಣಿತವ್ರೆ ಹಿಂಬದಿಯಲಿ ತೇರ ನಡೆಸವ್ರೇ 6 ಹಣ್ಣು ಜನ್ನವ ತೇರಿಗೆಸಿತಾರೆ ತಣ್ಣನೆ ಪಾನಕ ಕೊಡುತಾರೆ ಸಣ್ಣೋರೆಲ್ಲ ಕೈಮುಗಿತಾರೆ, ಹಣ್ಣು ಕಾಯ್ಗಳ ಗಾಲಿಗಿಡುತಾರೆ7 ತಕ್ಕೋ ಹಣ್ಕಾಯ ಎಂಬೋರು ಕೆಲವರು ನಕ್ಕು ಕುಣಿಯುವರೆಲ್ಲ ನೂರಾರು ಜನರು 8 ರಂಗಪ್ಪನ ತೆಪ್ಪ ತೇಲುತಿವೆ ಸಂಗೀತ ವಾದ್ಯ ಕೇಳುತಿವೆ ರಂಗುವiತಾಪು ಹೊಳೆಯುತಿವೆ ಮಂಗಳಾರತಿ ದೀಪ ಕಾಣುತಿವೆ 9 ಜೋಮಾಲೆ ಸರಗಳು ಹೊಳೆಯುತಿವೆ ನಾಮ ಮಂತ್ರಗಳೆಲ್ಲ ಮೊಳಗುತಿವೆ 10 ರಂಗಿನದೀಪ ಉರಿಯುವುದಣ್ಣ ಮಾಂಗಿರಿರಂಗನೆ ಬಲುಸೊಗಸಣ್ಣ 11
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್