ಇಕ್ಕೊ ಇಲ್ಲೆವೆ ಅದ ನಿಜಧನಾ
ತಕ್ಕೊಂಬುದು ಬಲುಕಠಿಣ ಧ್ರುವ
ಅದಕೊಂದದ ಉಪಾಯ ನೋಡಿ
ಸದ್ಗುರುಪಾದಕ ಮನಗೂಡಿ
ಒದಗಿ ಬಾಹುದು ತಾಂ ಕೈಗೂಡಿ
ಇದೇ ಸಾಧಿಸಿ ಸುಖ ಸೂರ್ಯಾಡಿ 1
ಎಡಬಲಕ ತಾಂ ತುಂಬೇದ
ದೃಢಮನಕ ತಾಂ ಸಿದ್ಧದ
ಮೂಢಜನರಿಗಿದೇ ದೂರದ
ನೋಡೇನೆಂದರ ಬಲು ಸಾರ್ಯದ 2
ಗುರುಪಾದಲ್ಯದ ಧನಸಮಸ್ತ
ಅರಿತುಕೊಂಬುದು ಮನಮಾಡಿ ಸ್ವಸ್ಥ
ತರಳಮಹಿಪತಿಗಿದೆ ಸುಪ್ರಸ್ತ
ಗುರುನಾಥನೆ ತಾಂ ಸುವಸ್ತಾ 3