ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವ ಜಯದೇವ ಜಯ ವೆಂಕಟೇಶಾ| ಶ್ರಯ ಸುಖದಾಯಕ ಸ್ವಾಮಿ ಉರಗಾಚಲವಾಸಾ ಪ ಕರುಣಾಕರ ರತ್ನಾಕರ ಕನ್ಯಾ ಮನೋಹಾರಿ| ಸುರವರ್ಧನ ಮುರಮರ್ದನ ಗೋವರ್ಧನಧಾರಿ| ವರಮಂದಿರ ಧೃತಕುಂದರ ಸುಂದರ ಸಹಕಾರಿ| ಶೌರಿ 1 ಜಗಕಾರಣ ಪರಿಪೂರಣ ಸುಂದರಸಾಕಾರಾ| ಅಘಹರಣಾ ಮುನಿ ಸ್ಫರಣಾತ್ರಯ ಭುವನಾಧಾರಾ| ನಗಧರಣಾ ತವಶರಣಾಭರಣಾ ಮಯೂರಾ| ಭೃಗುಚರಣಾಂಕಿತ ಚರಣಾಂಬುಜ ಶೋಭಿತ ಧೀರಾ 2 ಸುಖಕರ್ತಾ ದುಃಖಹರ್ತಾ ಸರಸೀರುಹ ನಯನಾ| ಸಕಲಾತ್ಮ ಪರಮಾತ್ಮಾ ಫಣಿಕುಲವರ ಶಯನಾ| ನಿಖಿಲಾಸುರ ತಮಭಾಸುರ ದುರಿತಾವಳಿ ಶಮನಾ| ಮಕರಾಂಕಿತ ಪಿತಮಹೀಪತಿ ನಂದನಪಾಲನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಯಾಕೆÀ ಬಾರ ಸಖಿ ತ್ರಿವಿಕ್ರಮನ್ಯಾಕೆ ಬಾರ ಸಖಿ ಅ-ನೇಕ ಮಹಿಮ ವಿವೇಕನಿಲಯ ಮೂ-ಲೋಕ ಮೋಹನಮೂರ್ತಿ ಮುಕ್ತಶೋಕ ಪ. ಕರ್ಮ ವಿಮೋಚನಮುಂಜÉರಗ ಪಿಡಿದೆಳೆಯೆಸಂಜೆ ಬರಲೆಂದು ಸವಿನುಡಿಯ ನುಡಿವಕುಂಜರನ ಭಯಭೇದಿ ಬಹಳ ವಿನೋದಿ ಸಕಲರಿಗಾದಿ ಸುಗುಣನಿಧಿ 1 ನಿನ್ನಿನಿರುಳು ನಿನ್ನ ನೇಮಿಸದ ಮುನ್ನಮನ್ನಿಸಿ ಮನೆಗೆ ಬಂದಾತಅನ್ಯವರಿಯದ ಅಬಲೆ ನಾನೆಂದೀಗಕಣ್ಣಾರ ತಾ ಕಂಡನಲ್ಲ ಪುಸಿಯಿನ್ನು ಸಲ್ಲ ಸಕಲವು ಬಲ್ಲ ಎನ್ನ ನಲ್ಲ2 ಇಂದಿರೆಯನು ಬಿಟ್ಟು ಇರವ ಎನ್ನೊಳಗಿಟ್ಟುಎಂದೆಂದು ಎತ್ತಿಕೊಂಡಾತಕುಂದದೆ ತಾನಿಂದು ಕೂಡಿದರೆ ಬಂದುತಂದು ಹಯವದನನೊಲಿಸು ಸ್ನೇಹವ ಬಲಿಸು ಮದನನೊಲಿಸು ಎನಗೊಲಿಸು 3
--------------
ವಾದಿರಾಜ
ಓಡಿ ಬಾರಯ್ಯ ವೈಕುಂಠಪತಿ ನಿನ್ನನೋಡುವೆ ಮನದಣಿಯೆ ಪನೋಡಿ ಮುದ್ದಾಡಿ ಮಾತಾಡಿ ಸಂತೋಷದಿಪಾಡಿ ಪೊಗಳುವೆನುಪರಮಪುರುಷಹರಿಅ.ಪಕೆಂದಾವರೆಯಂತೆ ಪಾದಂಗಳೆರಡುಅಂದುಗೆಕಿರಿಗೆಜ್ಜೆ ಘಲುಘಲುರೆನುತ ||ಚೆಂದದಿ ಪೀತಾಂಬರವಲೆದಾಡುತಕುಂದಣದುಡುದಾರ ಝಣ ಝಣ ಝಣಕುತ 1ಕೋಟಿ ಸೂರ್ಯ ಪ್ರಕಾಶಗಳಿಂದಲಿ ಲ-ಲಾಟದಲ್ಲಿ ಇಟ್ಟ ಕಸ್ತುರಿ ತಿಲಕ ||ಕೂಟದ ಗೋಪಾಂಗನೆಯರ ಕೂಡೆಆಟ ಸಾಕು ಬಾರೋ ಅರವಿಂದ ನಯನ 2ಕಿರುತುರುಬಿನ ಮೇಲೆ ಒಲೆವುತಿರುತಿರೆಮುರುಗು ಮಲ್ಲಿಗೆ ಜಾಜಿ ಶ್ರೀತುಳಸೀ ||ಕರದಲಿ ಪಿಡಿದಾ ಪೊಂಗೊಳಲೂದುತತಿರಿತಿಂದು ಬಾಹೋ ಸಡಗರ ಸಾಕೋ 3ಎಣ್ಣೂರಿಗತಿರಸ ಸದಮಲ ದೋಸೆ ಬೆಣ್ಣೆಅಣ್ಣಯ್ಯ ನಿನಗೆ ಕೊಡುವೆನೋ ಬಾರೋ ||ಕಣ್ಣಮುಚ್ಚಿ ಗೋಪಾಂಗನೆಯರ ಕೂಡಿ |ಬೆಣ್ಣೆಯ ಮೆಲುವುದು ಉಚಿತವೆ ಸಾಕೋ 4ಮಂಗಳಾತ್ಮಕ ಮೋಹನಾಕಾರನೆಸಂಗೀತಲೋಲಸದ್ಗುಣ ಶೀಲ ||ಮಂಗಳೆ ಲಕುಮಿಯ ಸಹಿತವಾಗಿ ಬಂದುಕಂಗಳ ಮುಂದಾಡೊಪುರಂದರವಿಠಲ5
--------------
ಪುರಂದರದಾಸರು
ಕುಣಿದ ಕಾಳಿಯ ಶಿರದಿ ನಂದನಂದನು ಪ.ಕಿರುಗೆಜ್ಜೆ ಕಾಲಂದಿಗೆ ಕಟಿಯವರದಾಮದ ಪೊಂಗಂಟೆರವದಕರಕಂಕಣಮುದ್ರಿಕೆಹಾರಪದಕಾಭರಣಝಣ ಝಣ ಝಣ ಝಣ ಝಣ ಝಣಝಣ ಝಣಕೆನ್ನಲು 1ವಿಗಡಾಹಿ ಫಣದಲ್ಲಿನಿಂದುಕರಗಳೊಲವಿಲಿ ಅಭಿನವ ತೋರುತಲಿನಗೆಮೊಗದಮೃತ ರುಚಿಗಳ ಬೀರಿ ತೋಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಧಿಗಿ ಥೈ ಥೈಯೆಂದು 2ಪದುಮಜಭವರು ಹನುಮ ಮೂರು ಜತ್ತಾಳ್ಮುದದಿಂ ದಂಡಿಗೆ ತಾಳ್ಗತಿ ನುಡಿಸೆಪದುಮನಾಭ ಪ್ರಸನ್ನವೆಂಕಟ ಕೃಷ್ಣ ತಕುಂದಕುಂತ ಗಡ ವಗಧಾಂ ಕಿಡಿ ಕಿಡಿಧಾಯೆಂದು3
--------------
ಪ್ರಸನ್ನವೆಂಕಟದಾಸರು
ತಾಂಡವಾಡಿದನಂದು ಯಶೋದೆಕಂದÀ ಪ.ಅಂದದಿ ಬೆಣ್ಣೆಯ ಪಿಡಿದು ಶುದ್ಧಗತಿಗಳಿಂದ ತಗಡಧಂ ಧಾಂ ಧಿಮಿಕಿಟ ಧಿಗಿ ಧಿಗಿ ಥೈಯೆಂದು 1ಕುಚಮಾಟದ ಗದ್ದಿಗೇಲಿ ಒಂದಡಿಯಿಟ್ಟ ತಾಳನಿಚಯದಿ ತತ್ತಂ ತಾಹಂ ಥರಿಕುಟ ತಕುಂದ ಕಿಡಿಕಿಟಿಲೆಂದು 2ಕಂಕಣ ಕುಂಡಲಹಾರ ಪದಕ ದಾಮಾಲಂಕೃತಕಿಂಕಿಣಿಕಿಣಿ ಝಣ ಎನೆ ವನಜನಯನನು3ಅಜಭವಾದ್ಯರು ತಾಳ ವೀಣೆ ಆವುಜ ಮೃದುಋಜು ಧಳಂ ಧಳಂ ಝೈಂ ಝೈಂ ಝಕಿಂ ನುಡಿಸೆ ಜಡಿಜಡಿದೆÉೂಡನೆ 4ಮಂದಹಾಸದಿ ನಂದವ್ರಜದ ಗೋವರ ಕೂಡತಂದೆ ಪ್ರಸನ್ನವೆಂಕಟಗಿರಿತಟಸ್ಫುಟಿದ್ಧಾಟಕನಿಲಯ5
--------------
ಪ್ರಸನ್ನವೆಂಕಟದಾಸರು
ಸಲ್ಲದು ಸಲ್ಲದು ಜ್ಞಾನ ಬೋಧೆಸುಳ್ಳರಿಗೆ ಮತ್ತು ಶುಂಠರಿಗೆಪಮುಂದೆ ಹೊಗಳಿ ಹಿಂದೆ ನಿಂದಿಸುವರಿಗೆಸಂದೇಹಿಸುತ ಸಜ್ಜನರಿಗೆ ಹಳಿಯುತಮುಂದೆ ಕಾಣದೆ ಮೂರ್ಖತೆಯಲಿ ನುಡಿಯುತಕುಂದುಕೊರತೆಯಹ ಕುಹಕರಿಗೆ1ಬರಡು ಮಾತಿನಲಿಕಾಲಕಳೆಯುತಜರಿದುನುಡಿಯುತಾ ಕೂಡಿ ನಗುವರಿಗೆಇರುಳು ಹಗಲು ಇಹಪರದಿ ಬಿದ್ದಿಹನರರುಗಳಿಗೆ ಮತಿ ನಷ್ಟರಿಗೆ2ಬ್ರಹ್ಮ ನುಡಿಯ ಮೂರು ನುಡಿಯನೆ ಕಲಿತಬ್ರಹ್ಮ ವಿದ್ವಾಂಸರು ವಾದಿಸುವಬ್ರಹ್ಮತಾವಾಗುವ ಪರಿಯೆಂತೋಪರಬ್ರಹ್ಮ ಚಿದಾನಂದನ ಕಾಣದವರಿಗೆ3
--------------
ಚಿದಾನಂದ ಅವಧೂತರು