ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜ್ಞಾನಾನಂದ ಸ್ವರೂಪ ಭಾನುಕೋಟಿ ಪ್ರದೀಪ ನಾನಾದೋಷ ನೀರ್ಲೇಪ ಮೀನ ರೂಪ ಪ ಏನು ಅರಿಯದ ದೀನ ಭಕುತನಿಗೆ ಸಾನುರಾಗದಿ ಜ್ಞಾನವನೀಯೋ ಅ.ಪ ನಿಗಮಗಳೆಲ್ಲವು ಬಗೆ ಬಗೆಯಿಂದ ನಿನ್ನ ಅಗಣಿತ ಗುಣಗಳ ಪೊಗಳುತಲಿದ್ದರು ಸಿಗದ ನಿನ್ನ ನಾನು ಪೊಗಳಲಳವೆ ಪೇಳೊ ಸಿರಿಯರಸನೆ ನಿನ್ನ ಚರಣಕಮಲದಲಿ ಪರತರ ಭಕುತಿಯ ದೊರಕಿಸೆಲೊ ಸರಸಿಜ ಜನಕನೆ ಮರೆತಪರಾಧವ ಕರುಣದಿಂದಲಿ ಎನ್ನ ಕರಗಳ ಪಿಡಿಯೋ 1 ಒಂದು ದಿನವು ಸುಖ ಗಂಧವನರಿಯದೆ ಭವ ಸಿಂಧುವದನನೆ ತೊಂದರೆ ಪಡುತಿಹೆ ಸುಂದರ ವದನನೆ ತಂದೆ ಎನಗೆ ನೀನೆ ಬಂಧುವೆನಗೆ ನೀನೆ ಮಂದ ಬುದ್ಧಿಯಲಿ ನಿಂದ್ಯನಾದೆನಗೆ ಕುಂದು ಸಹಸ್ರವು ಸಂಧಿಸಿತು ಇಂದು ಮನಕೆ ಆದ ತಂದುಕೊಳ್ಳದೆಲೆ ಮಂದಹಾಸದಲಿ ಬಂದೆನ್ನ ಪೊರೆಯೋ 2 ಹಿತವೆಂದು ಭವವನು ಅತಿ ಮೋಸಹೋದೆನು ಮತಿಗೆಟ್ಟು ನಿನ್ನನು ಸ್ತುತಿಸಲಿಲ್ಲವೊ ನಾನು ಮಿತಿಮೀರುತಿರಲೆನ್ನ ಸ್ಥಿತಿಯ ನೀನರಿಯುತ ಮತಿ ಬೇರೆ ಮಾಡಿ ಮರೆತೆಯೇನೊ ಶ್ರೀಪತೆ ಕ್ಷಿತಿಯೊಳೆನಗೆ ಗತಿ ಇತರರ ಕಾಣೆನÉೂೀ ಪತಿ ನೀನಿರೆ ವಸುಮತಿಯೊಳಗೆ ಪತಿತಪಾವನನೆ ಪ್ರಸನ್ನನಾಗಿ ದಿವ್ಯ ಸತತ ಸುಖಕೆನಗೆ ಪಥವನು ತೋರೊ 3
--------------
ವಿದ್ಯಾಪ್ರಸನ್ನತೀರ್ಥರು