ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಗೆಡದಿರು ಮನವೆ ಕಂಗೆಡದಿರು ಒಡನೊಡನೆ ನೆರೆದು ಬಂದು ಪ ಜನಕೆ ಗ್ರಾಸವೆಂತಹುದೆಂದು ಅನುಮಾನ ಹಚ್ಚಿಕೊಂಡು ಬಡವಾಗದಿರೆಲೆ ಆಲೋಚನೆ ಮಾಡು ನಿನ್ನೊಳಗೆ ತಿಳಿದು ಮರಳಿ ಮರಳಿ ಘನಮಹಿಮ ನಾರಾಯಣ ಅನಾದಿ ಸ್ವಾಭಾವಿಕ ಚಿನುಮಯ ಸತ್ಯಸಂಕಲ್ಪ ದೇವ| 1 ಇನಿತು ಜೀವಿಗಳಿಗೆ ಕಾಲಕಾಲಕೆ ಗ್ರಾಸ ಮಾಡಿಯಿಪ್ಪಾ ಕ್ಷಣಮಿರಗೊಡದೆ ಆವಲ್ಲಿಯಿದ್ದರೂ ವುಣಿಸುವ ಉಚಿತವನ್ನೆ ತಿಳಿದು ನೋಡಿ ದಿನ ದಿನಕೆ ಅಧಿಕವಿಲ್ಲಾ ತತ್ಪೂರ್ವ ಚೇತನಕೆ ನಿರ್ಮಾಣ ಮಾಡಿದಂತೆ ಬೊಮ್ಮಾ2 ಫಣಿತಿಯಲ್ಲಿ ಬರೆದಿರುವ ಆಯು:ಕರ್ಮವಿದ್ಯಾ ಧನ ನಿಧಾನನೆನೆಸಿ ಶ್ರೀಹರಿಯ ಆಜ್ಞಾದಿ ಜನಿಸುವಾಗಲೆ ಅವರವರವಾಡಿಪನಾ ಕೊನೆಯ ಸೆರಗಿನಲಿ ಕಟ್ಟಿಹನೋ ನಿನಗೆ ಕಾಣಬಾರದೋ ಪದಶಾಸ್ತ್ರಗಳಿಂದೆ ಗುಣಿಸಿ ನೋಡಿದರೆ ಕಾರುಣಿಕÀವಹುದೊ 3 ಅಣುಮಾತ್ರನಿಂ ನಿಂದಾ ಆಗುವಾ ಶೌರ್ಯವೇನೋ ಅನುಭವಕೆ ತಂದುಕೊಂಡು ಗ್ಲಾನಿಯಾಗೋ ಮಿನುಗು ಚಿಂತೆಗಳಿಂದಾ ಬರುವ ಲಾಭವೇ ಕಾಣೆ ತನುವ ಶೋಷಿಸಿ ವಿರೋಧಾವಾಗಿ ಕೊಂಬೆ ಸಿರಿ ನಮ್ಮ ವಿಜಯವಿಠಲರೇಯಾ ಮನುಜಾದಿ ದೇಹಿಗಳಿಗೆ ಸ್ವಾಮಿಯಾಗಿಪ್ಪನೋ
--------------
ವಿಜಯದಾಸ
ಕೃಷ್ಣ ಕದ್ದು ಬಂದೆನಯ್ಯ ರಂಗ ಮದ್ದು ಕಾಣೆನಯ್ಯ ಕಣ್ಣು ಕೊಟ್ಟು ಇಟ್ಟೆ ಇಲ್ಲಿ ನಿನ್ನ ನೋಡಲೆಂದು ಪ ನಾನು ನನ್ನದೆಂದು ಭ್ರಾಂತಿ ತಂದುಕೊಂಡೆನಯ್ಯ ನಿನ್ನದೆನ್ನದೆಂದೆ ನಾನು ನನ್ನ ಬಿಟ್ಟು ನೀನು ನಿಂತೆ ಅ.ಪ ಎಲ್ಲಿ ಇಲ್ಲ ನೀನು ದೇವ ಕುಂದು ಕೊರತೆಯುಂಟೆ ನಿನಗೆ ಖುಲ್ಲಮೋಹವೆಂಬ ಮೋಡ ನಿನ್ನ ಬೆಳಕು ಮುಚ್ಚಿತಯ್ಯ ಕಾಲಕಳೆದು ಕಲಿತೆ ನಿನ್ನ ಕಾಲುಬಿಟ್ಟರಿಲ್ಲ ಕೂಲ ಸೇರಿಸಯ್ಯ ಬೇರೆ ದಾರಿಯಿಲ್ಲವಯ್ಯ 1 ಅರಿತು ಪೇಳ್ವೆನಯ್ಯ ಕೃಷ್ಣ ನೀನು ಹೇಳಿ ಕೊಟ್ಟೆ ಆಗ ಬರಿದೆ ಕೆಟ್ಟು ಹೋದೆ ದೇವ ಒಳಿತು ಮಾಡವಯ್ಯ ಈಗ ಮರೆತು ನಿಲ್ಲಲಾರೆ ನಿನ್ನ ಕಲೆತುಬಂದು ನಿಲ್ಲೊ ನೀನು [ವರ]ಶೆಲ್ವ ಭಾಗ್ಯವಯ್ಯ ನೀನು ಭೋಗಮೋಕ್ಷವಯ್ಯ ದೇವ2
--------------
ಸಂಪತ್ತಯ್ಯಂಗಾರ್
ಬಿಡು ಎನ್ನ ಶೆರಗನು ಬಾಲಕೃಷ್ಣಾಉಡುಗಿ ದೇವರ ಮನಿ ಬರುವೆ ಬೇಗ ಪ ಅಂಗಳ ಥಳಿ ಹಾಕಿ ರಂಗವಲ್ಲಿಯ ಹಾಕಿತಂಗಳ ಮೊಸರನ್ನಾ ಕಡೆಯಲ್ಹಾಕಿಬಂಗಾರದ ಬಟ್ಟಲೊಳು ರಂಗ ಬೆಣ್ಣೆಯನೀವೆಕಂಗಳನೆ ತೆಗಿ ಬೀರು ಮಂಗಳವಾ1 ಹಾಸಿಗೆ ಬಿಟ್ಟೇಳು ವಾಸುದೇವನೆ ನಿಮ್ಮಹಾಸಿನ ತೊಟ್ಟಿಲೊಳು ಮಲಗು ಕೂಸಾಏಸು ಹುಡುಗರೆಲ್ಲ ಸೋಸಿಲಿ ಕರೆವರುದೋಸೆ ಕೊಡುವೆ ತಿನ್ನೋ ಏಳು ಬೇಗ 2 ತರುವು ಕಟ್ಟಲಿ ಬೇಕು ಕರುವು ಕಾಯಲುಬೇಕುತೊರೆದು ಮಲಿಯನುಣ್ಣು ಏಳು ಬಾಲಜರದ ಕುಂಚಿಗೆ ಹೊದ್ದು ಹೊರಗೆ ಬಂದಿಹ ರಾಮಕರೆಯುತ್ತಲಿರುವನು ಕಣ್ಣೆತ್ತಿ ನೋಡು 3 ಕೋಳಿ ಕೂಗುತಲಿದೆ ಕಾಳು ಕಡಿವೆ ಹಾಕುಏಳು ಗಿಳಿಯು ನಿನ್ನ ಕೇಳುತಲಿವೆಪಾಲು ಸಕ್ಕರಿನಿತ್ತು ಸಾಲು ಕೋಕಿಲ ಹಿಂಡುಗಾನ ಮಾಡುತಲಿವೆ ಏಳು ಬೇಗ4 ಅಂದ ಮಾತನು ಕೇಳಿ ಆ ಕಂದ ಎತ್ತಿಕೋ ಎನ್ನಒಂದು ಬಟ್ಟಲದೊಳಗೆ ತಂದುಕೊಡು ಆಡುವೆಎಂದು ತಾಯಿ ಚಿನ್ನಾ ಹಿಂದೆ ಸೆರಗಪಿಡಿದು ಇಂದಿರೇಶ 5
--------------
ಇಂದಿರೇಶರು
ಅರ್ಚನೆ ಮಾಡಿರಯ್ಯ ಶ್ರೀ ಭಗವದರ್ಚನೆ ಮಾಡಿರಯ್ಯಅರ್ಚನೆ ಮಾಡುವ ಅರ್ಚಕ ಬುಧರಿಗೆಅರ್ಚಿಪ ಪದದಲ್ಲಿಅಚ್ಯುತದೊರೆವನೆಂದುಪ.ಅಂತರಂಗದ ಶುದ್ಧಿಲಿ ತನ್ನ ಬಾಹ್ಯಂತರ ಪರಿಪೂರ್ಣನಚಿಂತಿಸಿ ಸರ್ವಸ್ವತಂತ್ರ ಶ್ರೀ ಹರಿವೇದತಂತ್ರೋಕ್ತ ಪಥದಿ ನಿರಂತರ ಮರೆಯದೆ 1ಪೃಥುಧ್ರುವ ಅಂಬರೀಶ ಸುಧರ್ಮಜ ದಿತಿಜೋದ್ಭವ ಅಕ್ರೂರಕೃತವರ್ಮ ಸಾತ್ಯಕಿ ಯದುಕುಲ ಸುರಖಷಿಯತಿತತಿ ಅರ್ಚಿಸಿ ಅತಿಧನ್ಯರಾದರೆಂದು 2ಅನಂತಮೂರ್ತಿಯೊಳು ತನಗೊಂದು ಧ್ಯಾನಕ್ಕೆ ತಂದುಕೊಂಡುಆನಂದತೀರ್ಥರ ಸಂತತಿಗಳಿಂದತಾನು ಇಷ್ಟನಾಗಿ ನಾರಾಯಣನಾತ್ಮನೆಂದು 3ಬ್ರಹ್ಮಸ್ತೋತ್ರದಿ ಸಹಸ್ರ ಸನ್ನಾಮಪೂರ್ವಕ ಸ್ತೋತ್ರದಿಶ್ರೀಮತ್ಪಂಚಸೂಕ್ತ ಪಂಚಾಮೃತ ಸ್ನಾನರಮ್ಯಾಯುಧ ಕೌಸ್ತುಭಮಣಿ ಮಾಲೆಯಿಂದ 4ಧ್ಯಾನಾವಾಹನ ಸ್ನಾನ ಸುಪಾದ್ಯಾಚಮನಾಘ್ರ್ಯ ಧೂಪದೀಪ ಪ್ರಸೂನ ತುಳಸಿ ಗಂಧಮೋಘ ನೈವೇದ್ಯದಿಂಮಾನಸಾರ್ಚನೆ ಪ್ರತ್ಯಕ್ಷಾಗಲಿ ಎಂತೆಂದು 5ವೀರಾವರ್ಣದ ಮಧ್ಯದಿ ಶ್ರೀ ಮಧುಕೈಟಭಾಂತಕ ಕೃಷ್ಣನಕೋಟಿಕಾಂಚನ ರತ್ನಾಭರಣವೈಜಯಂತಿಕಿರೀಟಕುಂಡಲದಾಮಹಾರ ನೂಪುರಗಳಿಂದ6ದಿವ್ಯಾಂಬರ ಭೂಷಣ ನವರತುನ ಭವ್ಯ ಮಂಟಪವಸನಅವ್ಯಾಕೃತಾಧ್ಯಕ್ಷ ಶ್ರೀಭೂಮುಕ್ತಾಮುಕ್ತಸೇವ್ಯಮಾನನಾಪಾದ ಮೌಳ್ಯಾಂತ ವೀಕ್ಷಿಸಿ7ಬಹು ನೀರಾಂಜನಗಳಿಂದ ಸದ್ವೇದೋಕ್ತ ಗಹಗಹನ ಸೂತ್ರಂಗಳಿಂದಅಹಿವರಶಯನಜ ಭವಾಹಿಪ ವಿಪ್ರವಂದ್ಯಮಹಿಮನನಂತನೆಂತೆಂದು ಪರವಶದಿಂದ 8ತಾಳದಂಡಿಗೆ ಜಾಗಟೆ ಶಂಖ ಮದ್ದಳೆ ಕಂಸಾಳೆಭೇರಿಆಲಾಬುತಂಬೂರಿಭಾಗವತಗಾನಮೇಳೈಸಿ ತುತೂರಿ ವಾಜಂತ್ರಿ ಘೋಷದಿಂದ 9ಅಲವಬೋಧರು ಪೇಳಿದ ಪೂಜಾವಿಧಿಗಳ ಪ್ರದಕ್ಷಿಣೆ ಪ್ರಮಾಣಲಲಿತ ಗೀತ ನೃತ್ಯ ಬಲು ಪ್ರೇಮದಲಿ ಮಾಡಿಹೊಳೆವ ಬಿಂಬಾತ್ಮನ ಕಾಂಬ ಲವಲವಿಕೆಯಿಂದ 10ಆತ್ಮ ಕರ್ತೃತ್ವನೀಗಿಸರ್ವಾಂತರಾತ್ಮ ಪರಮಾತ್ಮನೆಂದುಆತ್ಮ ಮತ್ತೆ ಜಾÕನಾತ್ಮ ಪ್ರೇರಕ ಪ್ರೇರ್ಯಾತ್ಮ ನಿವೇದನ ಭಕ್ತಿ ನವಕಗಳಿಂದ 11ಸರ್ವೇಂದ್ರಿಯ ಮನಸ್ಥ ಮುಖ್ಯಪ್ರಾಣನೋರ್ವ ನಿಯಂತ್ರಹರಿಸರ್ವ ಪ್ರೇರಕನೆಂಬೊ ವಿಜ್ಞಾನಮಾರ್ಗದಿಸರ್ವಕಾಲದಲಿ ಸರ್ವಸಮರ್ಪಣೆಯೆಂದು 12ಮಂದಜನರು ಭಕ್ತಿಲಿ ದೂರ್ವನೀರಿಂದೆ ಪೂಜೆಯ ಮಾಡಲುತಂದೆ ಪ್ರಸನ್ವೆಂಕಟಕೃಷ್ಣ ಕಾರುಣ್ಯಸಿಂಧುಪ್ರಸನ್ನಾತ್ಮಬಂಧು ಮುಕ್ತಿಯನೀವ13
--------------
ಪ್ರಸನ್ನವೆಂಕಟದಾಸರು
ಏನು ಕೌತಕ ಕೃಷ್ಣ ತಾನೆ ಕನಸಿನೊಳು |ಮಾನವರ ತೆರನಂತೆ ಮುರುಳಾಡಿಸಿದನೆನ್ನ ಪಹಿಂದೆ ಮಾಡಿದ ಪದವ ಒಂದು ಹೇಳೆಂದೆನುತ |ಮುಂದೆ ಅದರಂದವನು ಎಲ್ಲ ತಾಪೇಳ್ದ ||ಒಂದು ದೋಸೆಯ ತನಗೆ ತಂದುಕೊಡು ಎಂದೆನಲು |ತಿಂದ ಮೀಸಲಕೊಡೆನು ಎಂದು ಹೇಳಿದೆನು 1ಮೋಸಹೋದೆನು ನಾನು ದೋಸೆಯನು ಹರಿಗೆ-ಆ-ಪೋಶನವನಿಕ್ಕದೇ ಪೋಷಿಸಿದೆನು ||ಮಿಸಲಾದರು ಅಹುದು ದೋಷವಿಲ್ಲೆಂದೆನುತ |ಆಸುರದ ಮಾತುಗಳ ವಾಸಿತೋರಿಸಿದನು 2ಎಳೆಯ ಪ್ರಾಯದೊಳಿರುವ ಚೆಲುವೆಯೊರ್ವಳು ಬಂದು |ಹೊಳೆಯೊಳಗೆ ಈಸಾಡಿ ನಲಿವುದನು ನೋಡಿ ||ನಳಿನಮುಖಿಯನು ಮೇಲೆ ಕರೆಸಲಾ ಮೈಲಿಗೆಯ |ತೊಳಕೊಂಡು ಒಳಯಿಂಕೆ ಬಂದುದನು ಕಂಡೆ 3ಈ ರೀತಿ ಸಿರಿಸಹಿತ ವಾರಿಜಾಕ್ಷನು ಕೃಷ್ಣ |ತೋರಿದನು ಸ್ವಪ್ನ ಕಣ್ಣಾರೆ ನೋಡಿದೆನು ||ಹಾರಿಹೋಯಿತು ಕಷ್ಟ ಸೂರೆಗೊಂಡೆನು ಸಿರಿಯ |ಏರಿ ಬಂದುದು ಶುಭದ ವಾರಿಧಿಯು ಮುಂದೆ.................... 4ಈ ಮಹಾಮೂರ್ತಿಯನು ಜಾವಪರ್ಯಂತರದಿ |ಕಾಮಿಸಿಯೆ ನೋಡಿದೆನು ಸೌಮ್ಯನಸ್ಯದಲಿ ||ಆ ಮಹಾ ಹರಿಯು ಪರಧಾಮವನು ಕೈಕೊಂಡು |ಭೂಮಿಪತಿಯಾಗಿರ್ದ ಪುರಂದರವಿಠಲ........................... 5
--------------
ಪುರಂದರದಾಸರು
ರುದ್ರದೇವರ ಹರಿಹರಸ್ತೋತ್ರ127ಶರಣು ನಿನ್ನಚರಣಕಮಲಗಳಿಗೆ ಶಿವಶಿವಾ |ಕರವಪಿಡಿದು ಸುಮತಿಯಿತ್ತು ಪೊರೆಯೊ ಶಿವಶಿವಾ ಪದಂತಿಚರ್ಮ ಹೊದ್ದ ಭಸ್ಮಭೂಷ ಶಿವಶಿವಾ |ಚಿಂತಿ ರಹಿತ ಲಯಕೆ ಕರ್ತೃನಾದ ಶಿವಶಿವಾ ||ಸಂತರಿಂದ ಸತತ ಸೇವೆಗೊಂಬ ಶಿವಶಿವಾ |ಕಂತುಪಿತನ ಪೂರ್ಣ ಪ್ರೀತಿಪಾತ್ರ ಶಿವಶಿವಾ 1ಮಂದಮತಿಯ ತಪ್ಪಿನೆಣಿಸಬ್ಯಾಡ ಶಿವಶಿವಾ |ಕುಂದುನಿನಗೆ ಎಂದಿಗೆಂದಿಗಿಲ್ಲ ಶಿವಶಿವಾ ||ಮಂದಗಮನೆ ನಿನ್ನ ಮನದೊಳಿಲ್ಲೆ ಶಿವಶಿವಾ |ತಂದುಕೊಂಡ ದಕ್ಷ ವೃಥ ಕುವಾರ್ತಿ ಶಿವಶಿವಾ 2ಹೀನರಂತೆ ನಿನಗೆ ಕೋಪ ಸಲ್ಲ ಶಿವಶಿವಾ |ಮಾಣು ಯಜÕ ಸಹಯನಾಗು ದಯದಿ ಶಿವಶಿವಾ ||ಏನುಪಾಯ ಇದಕೆ ಚಿಂತಿಸುವದು ಶಿವಶಿವಾ |ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವಶಿವಾ 3
--------------
ಪ್ರಾಣೇಶದಾಸರು