ಎನ್ನನಾರು ಕರದು ತಂದರೇ ಇಲ್ಲಿಗೆ ಪ
ಮುನ್ನಗೈದ ಕರ್ಮವೆಂದು ನನ್ನ ಪುಣ್ಯ ಭಾಗ್ಯವೆಂದು
ಭಿನ್ನಮತವ ಪೇಳ್ವದು ನನ್ನ ಮಟ್ಟಿಗೊದಗದು ಅ.ಪ
ಯಾರ ಕರೆದು ತಂದರೇನು | ಯಾರು ಹೊತ್ತು ಹೆತ್ತರೇನು
ಗಾರು ಹೇಳೆನೆ ಕುಲವದೇನು ಮಾರಜನಕ ಪೊರೆವ ನೀನು 1
ತಂದೆ ನೀನೆ ಕರೆದುತಂದೆ ಎಂದು ನಾನು ಭರದಿಬಂದೆ
ಬಂದು ನಿಂದೆ ಏಕೆ ತಂದೆ ಕುಲವನೆಣಿಸಬೇಡ ತಂದೆ 2
ಯಾವದೈವವ ತೋರಿಸುವೆಯೊ ಯಾವ ಜಪವ ಮಾಡಿಸುವೆಯೊ
ಯಾವ ಕೃಪೆಯ ಬೀಳಿಸುತಿಹೆಯೊ ದೇವ ಮಾಂಗಿರೀಶ ಕಾಯೊ 3