ಕೃಪೆ ನಿಮ್ಮದಾಗಬೇಕು ಸ್ವಾಮಿ ನಿಮ್ಮರಿಯಲಿಕ್ಕೆ
ಅಪಾರ ಮಹಿಮೆ ನಿಮ್ಮ ಸುಂಪಾದ ತಿಳಿಯಲಿಕ್ಕೆ ಧ್ರುವ
ಭ್ರಾಂತಗೆಲ್ಲಿಹುದಯ್ಯ ಪೂರ್ಣನಿಂತ ನಿಲಕಡೆಙÁ್ಞನ |
ಎಂತುಹೇಳಿದರ ಖೂನ ಶಾಂತಹೊಂದದಯ್ಯಮನ |
ಪಂಥ ಪರಮ ಗುಹ್ಯಸ್ಥಾನ ತಂತುವಿಡಿಯಲು ನಿರ್ಗುಣ |
ಅಂತು ಇಂತು ಎಂಬುಂದೆ ನಾನಂತ ಗುನ ನಿಧಾನ 1
ಖೂನ ತಿಳಿಯಲಿಕ್ಯಗಾಧಗುರು ನಿಮ್ಮಶ್ರೀಪಾದ |
ಬೋಧ ನೀಡಬೇಕು ಸುಪ್ರಸಾದ |
ನೀನೆವೆ ನಿತ್ಯವಾದ ವಸ್ತು ಪರಿಪೂರ್ಣ ಸದಾ |
ದೀನ ಬಂಧು ದಯದಿಂದ ಖೂನದೋರೊ ಆಶ್ರಯದ 2
ಮಂದ ಮತಿ ನಾನು ಭಕ್ತಿ ಮಾಡಲರಿಯೆನು
ಒಡಿಯನಹುದಯ್ಯ ನೀನುಮಹಿಪತಿಯ ಕಾಮಧೇನು
ಕೊಡಲಿಕ್ಕೆ ಪೂರ್ಣ ನೀನು ಸ್ವಾಮಿ ಕಾವ ಕರುಣನು
ಪಿಡಿದಿಹ್ಯ ನಿಮ್ಮ ನಾನು ದಿವ್ಯ ಪಾದಪದ್ಮವನು 3