ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ ಮೆರೆದು ಚತುರ ಬೀದಿ ತಿರುಗಿ ಬಪ್ಪುದು ನೋಡೆ ಪ ಸರಸಿಜಭವಾಗ್ರಜರುಳಿದವಾರು ವರ ಸಕಲ ಮನೋಭೀಷ್ಟ ಕೈಕೊಳುತಾ ನೆರೆದು ಸುತ್ತಲು ತಮ್ಮ ಭಕುತಿಯಲಿ ಸೂಸುತ್ತ ಹರುಷ ವಾರಿಧಿಯಾಳು ಮುಳಗಿದಟ್ಟಿಡಿಯಿಂದಾ 1 ಸುತ್ತಲುದರೆ ಬಿಂದುಗಳೊಂದು ಮುತ್ತಿನ ಸೂರ್ಯಪಾನಾ ಪತಾಕೆಗಳು ಬೀ ಸುತ್ತಲಿಪ್ಪದು ಚಾಮರ ಪಂಜುಗಳೆಸೆಯೆ 2 ದಂಡಿಗೆ ತಾಳ ಬೆತ್ತವ ಪಿಡಿದು ನಿಂದು ತಂಡ ತಂಡದಲಿಂದ ಮಹಿಮೆಯನ್ನು ಕೊಂಡಾಡುತ ಮನ ಉಬ್ಬಿ ಮಹೋತ್ಸವದಲ್ಲಿ ತೊಂಡರು ಹರಿದಾಡಿ ಹಾಡಿ ಪಾಡುತಲಿರೆ3 ಪವನ ಗರುಡ ಶೇಷ ಸಿಂಹ ಮಂಟಪ ಮತ್ತೆ ರವಿ ಶಶಿ ತುರಗ ಅಂದಣ ಮಿಕ್ಕಾದ ನವರಾತ್ರಿಯೊಳಗೆಲ್ಲ ವಾಹನನಾದ ಅಂ ದವನಾರು ಬಣ್ಣಿಪರು ಸಕಲ ಭೂಷಿತವಾಗೆ 4 ಚಿನುಮಯ ರೂಪ ವಿಚಿತ್ರ ಮಹಿಮ ದೇವ ನೆನೆದವರ ಹಂಗಿಗೆ ಸಿಲುಕುವಾ ಘನಗಿರಿ ತಿರ್ಮಲ ವಿಜಯವಿಠ್ಠಲರೇಯಾ ದನುಜದಲ್ಲಣನೆಂಬೊ ಬಿರಿದು ಪೊಗಳಿಸುತ್ತ 5
--------------
ವಿಜಯದಾಸ