ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತೆಯಣುಗನು ಮತ್ತೆ ಸತ್ಯಾತ್ಮನಿವನೆನುತೆ ಚಿತ್ತದೊಳು ನೆರೆನಂಬಿ ಪತ್ನಿಯಾದೆ ಪಲಜನರನೆರೆಬೇಡಿ ಪಲಜನರನುರೆ [ವಧು]ಕಾಡಿ ಪಲಸತಿಯರ ಕೂಡಿದಿವನಗಾಡಿ ಅರಿತು ಪೇಳುವರುಂಟೆ ಸರಸಿಯಿವನೆಂದೆನುತೆ ನೆರೆದು ಜೀವಿಪರುಂಟೆ ಅರರೆ ತಂಟಿ ಮೋಸಗಾರರೊಳಗಗ್ರೇಸರನು ಈ ವರನು ವಾಸುದೇವನು ಬಂಧುದ್ವೇಷಿಯಿವನು ಸ್ತ್ರೀಯರನದಾವಗಮನದೆನಿತೊ ಜರೆವ ಮಾಯೆಯಿಂದವರೊಡನೆ ಕೂಡಿಮೆರೆವ ಬಾಯೊಳಗೆ ಸುಬ್ರಹ್ಮಜ್ಞಾನ ಮೊರೆವ ಜೀಯ ಶೇಷಗಿರೀಶತಾನೆಂದು ನಲಿವ
--------------
ನಂಜನಗೂಡು ತಿರುಮಲಾಂಬಾ
ಕೆಟ್ಟೆ ಕೆಟ್ಟೆ ಕೆಟ್ಟೆ ಕೃಷ್ಣ ದೃಷ್ಟಿಕೊಟ್ಟು ಕೈಯ ಪಿಡಿಯೋ ಪ ಮೂರ್ತಿ ಬಿಟ್ಟರೆನ್ನ ಕಷ್ಟಬಿಡಿಸೆಯಾರ ಬೇಡಲೋ ಅ.ಪ ಕಟ್ಟಿತಾಳಿ ತೊರೆಯೆ ಗಂಡ ಕಷ್ಟವಲ್ಲೆ ಸತಿಗೆ ಪೇಳು ಶಿಷ್ಠ ದೊರೆಯೆ ದಾಸನೆಂಬಿ ಶ್ರೇಷ್ಠತಾಳಿ ಕಂಠದಲ್ಲಿದೆ ಬಿಟ್ಟಿ ಏನೋ ಬಿರದು ಎಲ್ಲ ಕಟ್ಟಿಕೊಂಡು ಮೆರೆಯುತಿಹುದು ಕೆಟ್ಟದೂರು ತಟ್ಟದಿರದು ಭ್ರಷ್ಠನೆನಿಸಬೇಡೊ ಎನ್ನ 1 ಎಡವಿ ಬೀಳೆ ಮಗುವು ತಾಯಿ ಕಡಿವಳೇನು ಪೊಡವಿಗೊಡೆಯ ಅಡಿಯ ಪಿಡಿದ ದಾಸನಾನು ಬಡವನಾದರೇನೂ ನುಡಿಯೋ ಭಾರ ನಿನಗೆ ತಡವು ಯಾಕೋ ಬರಿದೆ ಬಿಂಕ ಸಡಲಿ ಸುತ್ತ ಮಾಯಪಾಶ ದೃಢವ ಮಾಡು ಭಕ್ತಿ ವಿರಕ್ತಿ 2 ದೋಷಿಯಾದರೇನು ನಾನು ದೋಷದೂರನಲ್ಲೆ ನೀನು ನಾಶಮಾಡು ಬೀಸಿದೃಷ್ಠಿ ಮೀಸಲಲ್ಲೆ ನಿನಗೆ ಸ್ವಾಮಿ ಈಶ ಕರುಣಕುಂಟೆ ಮೇರೆ ಓಸು ಜಗದ ಭಾಸವೆಲ್ಲ ಶ್ರೀಶ ನೀನು ಕೊಟ್ಟರುಂಟು ದಾಸಪೋಷ ಶ್ವಾಸನಾಣೆ 3 ಗಂಟು ಕಳ್ಳ ನೀನೆ ಸತ್ಯ ಭಂಟನೆನ್ನ ಸ್ವತ್ತು ನೀನೆ ನೆಂಟ ಬೇರೆ ಇಲ್ಲದಿರಲು ಅಂಟಿಸಿರುವೆ ವಿಷಯ ಕಂಟಕ ತಂಟಿ ಬಿಟ್ಟು ಈಗಲೇನೆ ಅಂಟಿಕೊಳ್ಳೊ ಮನದಿ ಗಟ್ಟಿ ಕುಂಟು ಕಲೆಯ ಸುಟ್ಟುಬಿಟ್ಟು ಉಂಟು ಮಾಡು ಎಲ್ಲ ನನಗೆ 4 ಬೆಟ್ಟದೊಡೆಯ ಶ್ರೀನಿವಾಸ ಎಷ್ಟರವನೊ ನಾನು ಭೃತ್ಯ ಪಾದ ಪಿಡಿದಿಹೆ ಸುಟ್ಟು ಸುಟ್ಟು ಭವದಿ ಬೆಂದು ಇಷ್ಟು ನುಡಿದೆ ಜಯಮುನೀಂದ್ರ ಶ್ರೇಷ್ಟಹೃಸ್ಥಮಧ್ವ ಶ್ರೀ ಪ್ರೇಷ್ಟದೈವ ಕೃಷ್ಣವಿಠಲ5
--------------
ಕೃಷ್ಣವಿಠಲದಾಸರು
ಯೋಗಿ ಕುಲಪುಂಗವ ಕಾಯೋ ಕೋಲ ತನಯ ತಟಿ ಸದನಾ ವಿಬುಧವೃಂದ ನುತ ಪ್ರೇಮಸಾಗರ ಪ ಸುಜನ ಪಾಲಾ ವಿಜಿತಾನಂಗನ ಭಾಸುರ ಮಹಿಮ1 ಪಾವನಾತ್ಮಕ ಪಾಪ ವಿದೂರ ಕಾವುದೈ ಸದಾ ಕೋವಿದರೊಡೆಯ2 ಶಾಮಸುಂದರ ಪ್ರೇಮ ಸುಪಾತ್ರ ಸ್ವಾಮಿ ಶ್ರೀಗುರು ರಾಘವೇಂದ್ರಾರ್ಯ 3
--------------
ಶಾಮಸುಂದರ ವಿಠಲ