ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಕುತಿಯ ಮಾರ್ಗವ ಹಿಡಿಯಲಿಬೇಕು ಭಕುತಿಯು ಮನದಲಿ ಮಾಡಲಿಬೇಕು ಪ ಭಕುತರು ತುಳಿವ ಕಲ್ಲಾಗಿರಬೇಕು ಲಕುಮಿಯ ರಮಣನ ದಯೆ ಬರಬೇಕು ಅ.ಪ ನೊಂದವರನು ಸಂತೈಸಲಿಬೇಕು ತಂದೆ ತಾಯಿಯರ ವಂದಿಸಬೇಕು ಬಂದುದ ಮೋದದಿ ಪಡೆಯಲಿಬೇಕು ಇಂದಿರೆಯರಸನೇ ಗತಿಯೆನಬೇಕು 1 ಸಂಗವು ಶರಣರದಾಗಿರಬೇಕು ರಂಗನೊಳೇ ಮನ ತಂಗಿರಬೇಕು ಭಂಗಿಸಿ ಕಾಮವ ವರ್ಜಿಸಬೇಕು ಮಾಂಗಿರಿನಾಥನ ದಯೆ ಬರಬೇಕು 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್