ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀನೆ ಎನಗಾಗಿ ಬಂದು ನೀನೆ ನೀನಾಗೆನಗಿಂದು ಧ್ರುವ ಅಪ್ಪನಾಗೆನಗೆ ನೀ ಬಂದು ತಪ್ಪು ಕ್ಷಮೆ ಮಾಡಿದಿಂದು ಒಪ್ಪಿಸಿಕೊಳಲೆನ್ನ ಬಂದು ಅಪ್ಪಳಿಸಿದೆ(?) ಜನ್ಮವಿಂದು 1 ಅಮ್ಮನಾಗೆನಗೆ ನೀ ಬಂದು ರಂಬಿಸಿದೆ ಎನಗಿಂದು ಸಮ್ಯಜ್ಞಾನದಲಿ ನೀ ಬಂದು ಸುಮ್ಮನÉದೋರಿದೆನಗಿಂದು 2 ಅಣ್ಣನಾಗೆನಗೆ ನೀ ಬಂದು ಕಣ್ಣಿನೊಳಗೆ ಸುಳಿದಿಂದು ಸುಗುಣ ಸಹಕಾರದಲಿ ಬಂದು ಪುಣ್ಯಚರಣದೋರಿದಿಂದು 3 ಅಕ್ಕನಾಗೆನಗೆ ನೀ ಬಂದು ಅಕ್ಕಿದೆ ಆತ್ಮದಲಿಂದು ಸಾಕಿ ಸಲಹಲೆನ್ನ ಬಂದು ಸಿಕ್ಕಿದಕ್ಕಿದೆ ಎನಗಿಂದು 4 ತಮ್ಮನಾಗೆನಗೆ ನೀ ಬಂದು ತಮ್ಮೊಳರ್ಪಿಸಿಕೊಂಡೆ ಇಂದು ತಮ್ಮ ನಿಜವಾದಾರ(?) ಬಂದು ತನುವಿನೊಳಗೆ ಸುಳಿದಿಂದು 5 ತಂಗಿಯಾಗೆನಗೆ ನೀ ಬಂದು ಹಿಂಗಿಸಿದೆ ಭವವಿಂದು ಸಂಗ ಸುಖವದೋರ ಬಂದು ಅಂತರಂಗದಿ ಸುಳಿದಿಂದು 6 ಈಸು ಪರಿಯಲೆನಗಿಂದು ಆಶೆಪೂರಿಸಿದೆನಗಿಂದು ಭಾಸ್ಕರ ಗುರುವಾಗಿ ಬಂದು ಭಾಸಿ ಪಾಲಿಸಿದೆನಗಿಂದು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು