ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿಭಕುತಿ ಸುಖವು ಅನುಭವಿಗಲ್ಲದೆ ಮಿಕ್ಕ - |ನರಗುರಿಗಳದರ ಸ್ವಾದವ ಬಲ್ಲವೆ ? ಪ.ಎಸೆವ ತಂಗಿನಕಾಯ ಎತ್ತು ಮೆಲುಬಲ್ಲುದೆ ?ರಸಭರಿತ ಖರ್ಜೂರ ಕುರಿ ಮೆಲ್ಲಬಲ್ಲುದೆ ? ||ಹಸು ಕರೆದ ಪಾಲ ಸವಿಸುಖಿಗಳಿಗೆ ಅಲ್ಲದೆ |ಕಸದಿ ವಸಿಸುವ ಉಣ್ಣೆಗಳು ಬಲ್ಲವೆ ? 1ಸರಸಿಜದ ಪರಿಮಳವ ಮಧುಕರನು ಅರಿವಂತೆ |ನಿರುತ ಬಳಿಯೊಳಗಿರುವ ಕಷ್ಟಗಳು ಬಲ್ಲುವೆ ? |ಸರಸ ಪಂಚಾಮೃತವಶ್ವಾನ ತಾ ಬಲ್ಲುವೆ ? |ಹರಿಕಥಾ ಶ್ರವಣಸುಖ ಕತ್ತಯದು ಬಲ್ಲುದೆ ? 2ಅಂಧ ದೀಪದ ಬೆಳಕ ಮೂಢ ಮಾತಿನ ಸವಿಯ |ಮಂದ ಬದಿರನು ಹಾಡಕೇಳಿ ಸುಖಿಸುವರೆ ? ||ಅಂದ ಮುತ್ತಿನ ದಂಡೆ ಕಪಿಗಳಿಡಬಲ್ಲುವೆ ? |ಮಂದಮತಿ ಪುರಂದರವಿಠಲನನು ಬಲ್ಲನೆ ? 3
--------------
ಪುರಂದರದಾಸರು