ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯೇಸು ಧನ್ಯನೊ ಹರ ತಾನೇಸು ಧನ್ಯನೊ ವಾಸವಾದಿ ಸುರರಿಗಿಂತ ಕೇಶವನ ಕರುಣ ಪಾತ್ರ ಪ. ವೇದವಿನುತನಮಲ ಪದ್ಮ ಪಾದ ಮೋದಿಸ್ವರ್ಧುನಿಯ ಸಾದರದಿ ಶಿರದಿ ಧರಿಸಿ ಮೋದ ಬಡುವ ಮುಕ್ಕಣ್ಣಾ 1 ಶ್ರೀಶನನ್ನು ಭಜಿಪ ಮುಖ್ಯ ದಾಸತಾನೆಂದರಿಯಿರೆಂದು ಹಾಸಿಕೆಯ ಹೆಗಲ ಮೇಲೆ ಭೂಷಣಗೊಂಡಮಿತ ಮಹಿಮ 2 ಅಂಹೊಮೋಪಾಹನರ ಸಿಂಹನನ್ನು ಹೃದಯಕಮಲ ಸಿಂಹಾಸನದೊಳಿರಿಸಿ ದಿವ್ಯ ಜಿಂಹ್ಮೆಯಿದ್ದನವಗೈವ 3 ಘೋರ ಸಂಸಾರಾಬ್ಧಿ ಭಯ ತಾರಕವಾಗಿರುವ ರಾಮ ತಾರಕ ಮಂತ್ರೋಪದೇಶ ತಾರಕ ರಘುವಾರ ದೇವ 4 ಪಂಕಜಾಕ್ಷ ಪರಮ ಕರುಣಿ ವೆಂಕಟಾದ್ರಿವಾಸ ಹರಿಯಾ ಕಿಂಕರ ಭಕ್ತಿ ಜನರಾ ತಂಕವಾರಾ ಶಂಕರ 5
--------------
ತುಪಾಕಿ ವೆಂಕಟರಮಣಾಚಾರ್ಯ