ಕೃಷ್ಣನ್ನ ಶ್ರೀ ಕೃಷ್ಣನ್ನ ಕೊಳಲಿನ ಧ್ವನಿಯ ಕೇಳಿ ನಾ
ಸತಿ ಪ.
ಮಧುರ ಮಧುರ ಸ್ವರ ಸುದತಿಯೆ ಕೇಳೆ
ಚದುರನು ಊದುತÀಲಿಹನೆ
ಸದನದಿ ನಿಲ್ಲಲು ಹೃದಯವು ಒಲ್ಲದು
ಚದುರೆಯೆ ಕರೆದೊಯ್ ಎನ್ನಾ
ಮನಮೋಹನ ಮದಸೂದನ ಕೃಷ್ಣನ್ನೆಡೆಗೆ
ಪೋಗದೆ ನಿಲ್ಲಲು ತಾಳಲಾರೆನೆ ಕೇಳ್ ಸಖಿ
ಪೋಗುವ ಬಾರೆ ಚಂದ್ರಮುಖಿ 1
ಕಂದ ಕರುಗಳ ಆನಂದದಿ ಕಾಯ್ವ
ಆನಂದವ ನೋಡುವ ಬಾರೆ
ಸುಂದರ ಕೊಳಲಿಗೆ ಚೆÉಂದದಿ ಸರ್ಪಾ
ನಂದದಿ ತÀಲೆತೂಗುವುದೆ
ಮೃಗ ಜಡತೆಯಿಂ ನಿಂತು ಕೇಳುವ ಗಾನ
ನೋಡುವ ಬಾರೆ ಎನ ಮನಸೆಲ್ಲಿಹುದೆ ಕೇಳ್ ಸಖಿ
ಶ್ರೀ ಶ್ರೀನಿವಾಸನೊಳ್ ಚಂದ್ರಮುಖಿ 2