ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣ ಪಡೆಯಬೇಕು ಮನುಜ ಗುರುಗಳಾ ಪ. ಕರುಣ ಪಡೆಯಿರೊ ಗುರು ಮಧ್ವರಾಯರ ಹರುಷದಿ ಹರಿಯನು ನಿರುತದಿ ಸ್ಮರಿಸುವ ಗುರು ಅ.ಪ. ಸ್ಮರಿಸಿದ ಮಾತ್ರದಿ ಶರಧಿಯ ದಾಟುತ ವರಪ್ರದ ರಾಮನ ತÀರುಣಿಗುಂಗುರವಿತ್ತು ಹರಿ ಕರುಣಾಮೃತವೆರಡು ರಾಮರ ಚರಣ ಸ್ಮರಣೆಯನು ನಿರುತ ಕೊಡುವ ಗುರು 1 ಕಂತುಜನಕನ ಅಂತರವರಿತು ನಿಂತು ಕೌರವ ಕುಲ ಸವರುತಲೆ ಅಂತಕಗಿತ್ತಾ ಕಾಂತೆ ದ್ರೌಪದಿಯ ಪಂಥವ ಸಲಿಶಿದ ಕುಂತಿತನುಜ ಗುರು 2 ಮಧ್ವ ಮುನಿಗಳಾಧ್ವರ ಪಾಲಕ ಮುದ್ದು ಕೃಷ್ಣನ ಹೃದ್ಗಮಲದೊಳಿಟ್ಟ ಅದ್ವೈತಿಗಳ ಸುವಾದಿಸಿ ಗೆದ್ದು ಶುದ್ಧ ಶ್ರೀ ಶ್ರೀನಿವಾಸನ ಭಕ್ತರ ಗುರು 3
--------------
ಸರಸ್ವತಿ ಬಾಯಿ