ಧೀರನೋ ಚೋರನೋ ಹೇರನೋ
ದಾರಿರುವಿ ದೂರ ನಿಲ್ಲೋ ಪ
ಚಾರು ಮರಕಟ ರೂಪವ ತೋರಿ ಮಾಯ ದನುಜಾರಿ
ಚಾರಕನೆಂದು ಸಾರುತಿರುವೀ ಬಾರಿ ಬಾರಿಗೆ ಶ್ರೀರಾಮ
ಆರೈಸಿಸುವಿ ಎಂದೂ ತೋರದಿರು ದಿಟವೆನಗೆ1
ರಕ್ಕಸರ ಮಾಯೆಯನು ಲೆಕ್ಕಿಸುವವಳಲ್ಲ ನಾ
ಅಕ್ಕರವ ತೋರದಿರಲು ಮಿಕ್ಕ ಮಾತುಗಳೇಕೆ
ಇಕ್ಕುವೆನು ಶಾಪವನೆನೆ ತÀಕ್ಷಣದಿ ಮುದ್ರಿಕೆಯನಿತ್ತಾ 2
ಶ್ರೀರಾಮ ಮುದ್ರಿಕೆಯ ನೋಡಿ
ಪರಮ ನೀ ಭಕ್ತನಹುದು
ಪಿರಿದಾಗಿ ನಿನ್ನ ಕೀರ್ತಿ ನರಸಿಂಹ ವಿಠಲನು
ಭರದಿಂದ ಮಾಳ್ಪನು ಕರವಿಡುವ ಶಿರದೀ 3