ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಬ್ರಹ್ಮಣ್ಯತೀರ್ಥರು) ಬ್ರಹ್ಮಣ್ಯತೀರ್ಥರ ಚರಣಾಬ್ಜಯುಗ್ಮವ ಸಂಭ್ರಮದಲಿ ಸೇವಿಪೆ ಪ ಅಂಬುಜಬಂಧು ಸನ್ನಿಭಸಾಧುವೆನುತ ಶ್ರೀ ಕುಂಭಿಣಿ ಮುನಿವರ್ಯರಾ ಆರ್ಯರಾ ಅ.ಪ. ತಿದ್ದಿದ ಶ್ರೀಪುಂಡ್ರ ಮುದ್ರೆಗಳಿಂದಲಿ ಸಂ- ಶುದ್ಧಿ ಮಂಗಳಗಾತ್ರರ ರುದ್ರಗಳೊಲಿದು ಸದ್ವಿದ್ಯೆಗಳನಿತ್ತು ಉದ್ಧಾರ ಮಾಡಲೆಂದೂ ನಾ ಬಂದೂ 1 ಶಿಷ್ಯರುಗಳು ತಂದ ಭಿಕ್ಷಾನ್ನಂಗಳನಂದು ಆಕ್ಷಣ ಮಂತ್ರದಿಂದ ತÀಕ್ಷಣ ಕಲ್ಪಸಿದಂತೆ ಗೈದಾ ಧೀರ ರÀಕ್ಷಿಸೆಂದೆರಗುವೆ ನಾ ಬೇಡುವೆ 2 ಕಾಂತೆಯೋರ್ವಳು ತನ್ನ ಕಾಂತ ಸ್ವರ್ಗವನೈದೆ ಚಿಂತಿಸುತತಿ ಶೋಕದಿ ಕಾಂತೆ ವಂದಿಸಲು ಸೌಮಾಂಗಲ್ಯವರವನಿತ್ತು ಕಾಂತನ ರಕ್ಷಿಸಿದ ಕೋವಿದರಾದ 3 ಕುಂದದೆ ಸನ್ಮುನಿವೃಂದದೊಡನೆ ಬಹು ವೃಂದಾವನದಿ ಶೋಭಿಪ ಇಂದಿರೆಯರಸ ನರಸಿಂಹವಿಠ್ಠಲನ ಸನ್ನಿಧಿವರ ಪಾತ್ರರಾ ಪೂತಾತ್ಮರಾ 4
--------------
ನರಸಿಂಹವಿಠಲರು
ಧೀರನೋ ಚೋರನೋ ಹೇರನೋ ದಾರಿರುವಿ ದೂರ ನಿಲ್ಲೋ ಪ ಚಾರು ಮರಕಟ ರೂಪವ ತೋರಿ ಮಾಯ ದನುಜಾರಿ ಚಾರಕನೆಂದು ಸಾರುತಿರುವೀ ಬಾರಿ ಬಾರಿಗೆ ಶ್ರೀರಾಮ ಆರೈಸಿಸುವಿ ಎಂದೂ ತೋರದಿರು ದಿಟವೆನಗೆ1 ರಕ್ಕಸರ ಮಾಯೆಯನು ಲೆಕ್ಕಿಸುವವಳಲ್ಲ ನಾ ಅಕ್ಕರವ ತೋರದಿರಲು ಮಿಕ್ಕ ಮಾತುಗಳೇಕೆ ಇಕ್ಕುವೆನು ಶಾಪವನೆನೆ ತÀಕ್ಷಣದಿ ಮುದ್ರಿಕೆಯನಿತ್ತಾ 2 ಶ್ರೀರಾಮ ಮುದ್ರಿಕೆಯ ನೋಡಿ ಪರಮ ನೀ ಭಕ್ತನಹುದು ಪಿರಿದಾಗಿ ನಿನ್ನ ಕೀರ್ತಿ ನರಸಿಂಹ ವಿಠಲನು ಭರದಿಂದ ಮಾಳ್ಪನು ಕರವಿಡುವ ಶಿರದೀ 3
--------------
ನರಸಿಂಹವಿಠಲರು