ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚರಣಕಮಲವನು ನೆನೆವೆ ನಾ ನಿನ್ನ ಪ. ಚರಣಕಮಲವನು ನೆನೆವೆ ನಾ ದುರಿತರಾಶಿಗಳ ಸಂಹರಿಪನ ಅ.ಪ. ಶ್ರುತಿಯನುದ್ಧರಿಸಿದುದಾರನ ಸಿಂಧು- ಮಥನಕೊದಗಿದ ಗಂಭೀರನ ಕ್ಷಿತಿಯನೆತ್ತಿದ ಬಲುಧೀರನ ಶಿಶು ಸ್ತುತಿಸೆ ಕಂಬದಿ ಬಂದ ವೀರನ 1 ಇಂದ್ರನ ಧಾರೆಯ ನಿಲಿಸಿದನ್ನ ತನ್ನ ತÀಂದೆಯ ಮಾತು ಸಲಿಸಿದನ್ನ ಕಂದರದಶನ ಸೋಲಿಸಿದನ್ನ ವ್ರಜ- ದಿಂದುಮುಖಿಯರ ಪಾಲಿಸಿದನ್ನ 2 ವಧುಗಳ ವ್ರತವ ಖಂಡಿಸಿದನ್ನ ದುಷ್ಟ ರುದಿಸಲು ತುದಿಯ ತುಂಡಿಸಿದನ್ನ ಇದಿರಾದ ಖಳರ ಖಂಡಿಸಿದನ್ನ ಹಯ ವದನಪೆಸರ ಕೊಂಡುದಿಸಿದನ್ನ 3
--------------
ವಾದಿರಾಜ
ನಿದ್ರೆಮಾಡಿದ ರಂಗ ನಿದ್ರೆಮಾಡಿದ ಭದ್ರಹಾಸಿಗೆ ಮೇಲೆ ಸಮುದ್ರರಾಜನ ಮಗಳ ಸಹಿತ ಪ. ವೇದಕದ್ದ ಅಸುರನಿಗಾಗಿ ಆ ಮತ್ಸ್ಯರೂಪವ ಧರಿಸಿ ಸಾಧಿಸಿ ಅಸುರನ ಕೊಂದ ವಾರಿಜಾಕ್ಷ ಬಳಲಿ ಬಂದು 1 ತರಳ ಹಿರಣ್ಯಕಶ್ಯಪನ ಕರುಳ ಬಗೆದು ಕೊರಳೊಳಿಟ್ಟು ನರಮೃಗ ರೂಪವ ತಾಳಿ ನರಸಿಂಹ ಬಳಲಿ ಬಂದು 2 ಬಲಿಯ ದಾನವನ್ನೆ ಬೇಡಿ ನೆಲನ ಮೂರಡಿ ಮಾಡಿ ಒಲಿದು ಬಾಗಿಲನ್ನೆ ಕಾಯ್ದ ವಾಮನನಾದ ಬಳಲಿ ಬಂದು 3 ತÀಂದೆಯ ಮಾತನ್ನೆ ಕೇಳಿ ತಾಯಿ ಶಿರವನ್ನೆ ಅಳಿದು ಏಳುಮೂರು ಬಾರಿ ನೀನು ಭೂಮಿಯ ಪ್ರದಕ್ಷಣೆಮಾಡಿ 4 ಸೀತೆಗಾಗಿ ಪಡೆಯ ಸವರಿ ಸೇತುಬಂಧನವ ಮಾಡಿ ದೂತರಾವಣನ್ನ ಕೊಂದು ಸೀತಾರಾಮ ಬಳಲಿ ಬಂದು 5 ಗೋಕುಲದಲ್ಲಿ ಹುಟ್ಟಿ ಗೋವುಗಳನ್ನೆಲ್ಲ ಕಾಯ್ದು ಗೋಪಸ್ತ್ರೀಯರ ಸೀರೆ ಸೆಳೆದು ಗೋಪಾಲಕೃಷ್ಣ ಬಳಲಿ ಬಂದು 6 ಬತ್ತಲೆ ಕುದುರೆಯನೇರಿ ಮತ್ತೆ ತೇಜಿಯನ್ನೆ ನಡೆಸಿ ಹತ್ತಾವತಾರವ ತಾಳಿ ಮತ್ತೆ ಕಲ್ಕಿರೂಪನಾÀಗಿ 7 ಧರೆಯೊಳತ್ಯಧಿಕವಾದ ಶ್ರೀರಂಗಪಟ್ಟಣದಿ ನೆಲೆಸಿ ಕರುಣದಿಂದ ಭಕ್ತರನ್ನು ಸಲಹಬೇಕು ಹಯವದನನೆ 8
--------------
ವಾದಿರಾಜ
ಸಾಗಿ ಬಾರಯ್ಯ ನೀ | ಬಾಗಿ ನಮಿಸುವೇಯೋಗಿಗಳರಸನೇ ಶ್ರೀನಿವಾಸ ಪ ಭೋಗಿಶಯನನೆ ನಿನ್ನ ಭಾಗವತರು ಬಂದುಜಾಗು ಮಾಡದೆ ನಿನ್ನ ಬಾಗಿಲೊಳು ನಿಂತಿಹರೋ ಅ.ಪ. ಇಂದಿರೇ ರಮಣಗೋವಿಂದ ನೀನೇ ಗತಿಯೆಂದು ಭಜಿಸುತಿರಲುಆನÀಂದದಿಂದತÀಂದೆಯ ಬಾಧೆಗೆ ತಂದು ತೋರಲು ಸ್ತಂಭ ತಂದೆ ತಾಡನೆಯ ಮಾಡಲುಬಂದೆಯಾ ಪರಿಪರಿ ವಿಧ ಭಯದಿಂದವೋಡಲು ಬಂದು ಅಸುರನ್ನಆರ್ಭಟಿಸಿ ಕೆಡಹುತಛಂದದಲಿ ಬಗೆಯುತಸುರನ್ನ ಕೊರಳೊಳು ಮಾಲೆ ಅಂದು ಧರಿಸಿದ ಅಧಿಕ ಸಂಪನ್ನಪ್ರಳಯಾಗ್ನಿಯಂತಿರೆ ನಿನ್ನ ಸ್ತುತಿಸಲು ಅರಿಗೊಸೆದಿನ್ನು ಅನುತಿರಲುನಿನ್ನಯಮುಂದೆ ಭಜಿಸುತ ಕಂಡು ಬರಲಾನಂದದಿಂದಲಿ ಚಂದದಿ ಸಲಹಿದಾನಂದದಲಿ ಮಂದರೋದ್ಧರ ಎನ್ನ ಸಲಹೋ 1 ಮೃಗ ಬೇಡಲು ಬಾಣ ಎಸೆಯಲು ಅದು ಲಕ್ಷ್ಮಣಾಯೆಂದು ಕೂಗಲುಮತ್ತಾತ ಪೋಗಲು ಇತ್ತ ರಾವಣನು ಕರೆದೊಯ್ಯೆ ಸತಿಯಳ ವಾತಸುತ ತಾನೆನಿಸೇ ನೀ ಮುನ್ನಾ ಅವ ಪೋಗೆ ಉಂಗುರ ಖ್ಯಾತಿಯಿಂದಲಿನೀಡಲದಕಿನ್ನು ತನುಮನದ-ಲತಿ ಭೋಗದಿ ಶಿಖೆಯ ಶಿರೋಮಣಿಯನ್ನೆ ಕೊಡಲನುಗ್ರಹದಲಿಛಾತಿಯಿಂದಲಿ ಅವಗೆ ವಿಧಾತ ಪದವಿಯ ಪಾಲಿಸಿದೆ ಜಗನ್ನಾಥಇಂದ್ರಾದ್ಯಮರ ವಂದಿತ ವೀತಭಯ ಜಗನ್ನಾಥ ಸಲಹೋ2 ಮಂಗಳಾಂಗನೆ ನಿನ್ನ ಸುಖವ ಕೊಟ್ಟು ಅಂಗನೆಯರಬಾಧೆಬಿಡಿಸೊ ಇಂದುಅಂಗನೇಯರು ಬಂದು ಭಂಗಪಡಿಸಲದಕೆ ಪೋಗುತಾ ಮಾರನ್ನಬಾಧೆಯ ಕಳೆಯುತಾಪರಿಪರಿಯ ಸುಖಗಳ ಸಂಗಡಿಲ್ಲದೇ ನೀಡಿಯೊ ಮಲ್ಲಮರ್ದನನೇ ಎನುತಿರೆಬೇಗದಿಂದಲಿ ಓಡಿಪೋದೆಲ್ಲೊ ಭಕ್ತರನು ಸಲಹುವೆನೆಂಬೋಬಿರುದು ನಿನಗೆ ಉಂಟಲ್ಲಾಅನುತಿರಲು ನಿನ್ನಯ ಎನ್ನ ಮನ ಉತ್ತಂಗಸುತಸತ್ಸಂಗ-ವೀವುದು ವಿಹಿತ ದೇವನೇತುರಂಗನಾಥನೇ ರಂಗವಿಠಲನೆ ದೇವ ದೇವರ ದೇವ ಸಲಹೋ3
--------------
ಶ್ರೀಪಾದರಾಜರು