ಬದುಕಿಸೀ ಪಶುಗಳನ್ನು ಭಗವಂತ ನೀನು ಪ
ಬದುಕಿಸೀ ಪಶುಗಳ ಭವರೋಗ ವೈದ್ಯನೆ
ಕದಲಿಸೀ ರೋಗವ ಕರುಣಿಗಳರಸನೆ ಅ.ಪ
ಗೋವುಗಳೆಲ್ಲಾ ಹೊಟ್ಟೆ ನೋವಿಂ ಕಂಗೆಟ್ಟು
ಮೇವನು ಬಿಟ್ಟವಿದಾವ ರೋಗವೋ ಕಾಣೆ 1
ಹೊಟ್ಟೆ ಕಳೆದು ಕೆಂಗೆಟ್ಟಧಾತುಗಳೆಲ್ಲಾ
ಕೆಟ್ಟು ಜೀವಂಗಳ ಬಿಟ್ಟ ಬಿಡದ ಮುನ್ನ 2
ನಾಲಿಗೆ ನೀಡವು ಕಾಲು ಕೆಟ್ಟವು ಕಂ
ಣ್ಣಾಲಿ ಕೆಂಪಾದವು ಮೂಲವೆ ತಿಳಿಯದು 3
ಗೋವುಗಳಿಗೆ ಭೂದೇವರುಗಳಿಗೆಲ್ಲ
ದೇವ ನೀನಲ್ಲವೆ ದೇವಕೀ ತನಯನೆ 4
ಸತ್ತವರಿಗೆ ಜೀವವಿತ್ತ ಬದುಕಿಸಿದೆ
ಮೃತ್ಯು ದೇವತೆ ನಿನ್ನ ತೊತ್ತಹಳಲ್ಲವೆ 5
ದಾಸನು ನಾನೆಂಬ ವಾಸಿಯುಳ್ಳರೆ ಬೇಗ
ವಾಸಿಯ ಮಾಡಯ್ಯ ನೀ ಮೋಸವ ಮಾಡದೆ 6
ಇಷ್ಟದಿ ನೆನೆವರ ಕಷ್ಟವ ಕಳೆವ ಪುಲಿ
ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ 7