ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಿಗೆ ಧನ್ಯ ನಾನಾದೆ ಜಗದ ವಳಗೆ ಅಘ ಕಳಿವ ಗುರುಪಾದಯುಗಳ ಕಣ್ಣಲ್ಲಿ ಕಂಡು ಪ ಮುಕುಟ ಮಂಡಿತ ದಿನಪ ಪ್ರಕರ ಸನ್ನಿಭ ಶಿರದಿ ಮಕರಂದ ಮಯವಾದ ಶಿಖದ ಸೊಬಗು ಅಕಳಂಕಮಾದ ಫಾಲಕೆ ವಪ್ಪುವ ತಿಲಕ ಭ್ರುಕುಟಿ ಮಧ್ಯದಿ ಪುಂಡ್ರ ಸುಖದ ದ್ವಯದ್ರಿಕ ಕಂಡು 1 ಹರಿನಾಮ ರವಿಯ ಕಂಡರಳುವೊ ಕರ್ಣಾಖ್ಯ ಸರಸಿರುಗ್ವಗಳು ಚಂದ್ರ ತೆರ ಶೋಭಿಪಾ ವರಕದಪಯುತ ವದನ ಕೊರಳು ಉರುಬಲದ ಭುಜ ಕರ ಹೃದಯ ಎರಡು ಘನ ಗೆರೆಯು ಉದರವ ಕಂಡು 2 ಧಿಟ ಕಟಿತ ಪಟರೋಮ ದಟಿತವಾಗಿಹ ಜಾನು ಚಟುಲಶಿರಿ ಗೋವಿಂದ ವಿಠಲ ನಾಮ ಪಠಿಸಿದಾಕ್ಷಣ ನಟಿಸುವ ಪಾದದ ಕಠಿಣ ಸಂಸಾರ ಸಂಕಟ ಕಳೆವ ರಜಕಂಡು 3
--------------
ಅಸ್ಕಿಹಾಳ ಗೋವಿಂದ
ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ ತರುಣಿಯನುದ್ಧರಿಸಿ ಪರಿಶುದ್ಧಗೈದಿ ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು ನರಕಿಯಾಗ್ವುದನರಿತು ಅರಿಯದಂತಿರುವಿ 1 ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ 2 ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ ತನುದಿನದಿ ಬಾಗಿಲವ ಘನವಾಗಿ ಕಾಯ್ದಿ ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು ಘನಪಾಪಿಯಾಗ್ವುದನು ಮನಕೆ ತರದಿರುವಿ 3 ವನವಾಸಗೈದಯ್ಯಾ ವಾನರನ ಸಲಹಿದಿ ದನುಜನನು ಸಂಹರಿಸಿ ದನುಜನನುಜಂಗೆ ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ ಎನಗ್ಯಾಕೀದುರ್ಬವಣೆ ದೂರಮಾಡದಿರುವಿ 4 ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು ನಿನಗವರೆ ದಾಸರೆ ನಾನಲ್ಲವೇನು ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ 5
--------------
ರಾಮದಾಸರು
ಸಾಧು ಸಾಧುಗಳೆಂದು ಎಂಬರೆ ನಿಮ್ಮನುಸಾಧುಗಳೇ ನೀವು ಸಾಧುಗಳೇಸಾಧುಗಳಾದರೆ ವಂದಿಸೆ ಎಲ್ಲರುಸಾಧುಗಳೇ ನೀವು ಸಾಧುಗಳೇಪನೀಚನು ಮೇಲಕೆ ಹೊಲಸನೆಸದರೂಚಲಿತನಾಗದವ ಸಾಧುಇನ್ನು ಕೃತಾರ್ಥನು ಪಾವನನಾದೆನುಎನ್ನುತಲಿರುವನೆ ಸಾಧು1ತಾಯಿ ಹತ್ಯವ ಮಾಡೆ ತಾನು ಕಣ್ಣಲ್ಲಿನೋಡೆತಳ್ಳಿಹೋಗದಿಹನೆ ಸಾಧುರಾಯ ಸದ್ಗುರು ಲೀಲೆಯಿದೆನ್ನುತಶಾಂತನಾಗಿರೆ ಸಾಧು2ತನ್ನ ಸತಿಯಳು ತನ್ನಯ ಮುಂದೆ ರಮಿಸಲುತಯಾರಾಗಿಹನವ ಸಾಧುಇನ್ನು ನಾ ಪುರುಷಲ್ಲಸ್ತ್ರೀಯು ತಾನಲ್ಲೆಂದುಸುಮ್ಮನಿರುವನೆ ಸಾಧು3ದೇಹವ ಕೊಯಿದು ಕೊಡೆಂದೆನೆದೇಹವ ಕೊಯ್ದಿಕ್ಕುವನೆ ಸಾಧುಮಹಾ ಸದ್ಗುರುನಾಥನು ದೃಢವನೋಡುವೆನೆಂದು ಮನಮಿಸುಕದಿಹನೆ ಸಾಧು4ಎತ್ತೆತ್ತ ಏಕೋ ದೇವನು ಆಗಿನೋಡುವನು ಸಾಧುಸತ್ಯ ಚಿದಾನಂದ ಸಾಕ್ಷಾತ್ಕಾರಾಗಿಹೆಸತ್ಯದಿಂದಿರುತಿಹ ಸಾಧು5
--------------
ಚಿದಾನಂದ ಅವಧೂತರು