ನಂಬಿದೆ ನಿನ್ನ ಗಣೇಶ ಜಗ-
ದಂಬಿಕಾತನಯ ವಿಶ್ವಂಭರದಾಸ ಪ.
ಲಂಬೋದರ ವಿಘ್ನೇಶ ಶರ-
ಣೆಂಬುದು ಸುರನಿಕುರುಂಬ ಮಹೇಶ ಅ.ಪ.
ತರುಣಾದಿತ್ಯಪ್ರಕಾಶ ನಿನ್ನ
ಶರಣಾಗತನಾದೆ ಮೋಹನ ವೇಷ
ಸುರುಚಿರ ಮಣಿಗಣ ಭೂಷ ಜಗ
ದ್ಗುರುವೆ ಗುಹಾಗ್ರಜ ಪೊರೆಯೋ ನಿರ್ದೋಷ 1
ಸಂತಜನರ ಮನೋವಾಸ ಮೋಹ
ಭ್ರಾಂತಿಯಜ್ಞಾನಧ್ವಾಂತವಿನಾಶ
ಶಾಂತಹೃದಯ ಸುಗುಣೋಲ್ಲಾಸ ಏಕ
ದಂತ ದಯಾಸಾಗರ ದೀನಪೋಷ 2
ಲಕ್ಷ್ಮೀನಾರಾಯಣನೆ ವ್ಯಾಸ ಗುರು
ಶಿಕ್ಷಿತ ಸುಜ್ಞಾನ ತೇಜೋವಿಲಾಸ
ಅಕ್ಷರ ಬ್ರಹ್ಮೋಪದೇಶವಿತ್ತು
ಹುತಾಶ 3