ಒಟ್ಟು 8 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭಗವದ್ಭಕ್ತ ಸಂಮೋಹ ಪ್ರಾರ್ಥನೆ) ಗಜಮುಖನ ಪ್ರಪಿತಾಮಹನಹಿಮನ ಗಜೆಯರಸನ ಪಿತನ ಪೆತ್ತನ ಸಾರಥಿ ಪಾದ ಪಂಕಜವ ಭಜಿಸಿ ಭಾರತಿವರನ ನಮಿಸುವೆ ಅಜಭವಾದಿ ಗುರೂತ್ತಮರ ನಿಜ ವೃಜಿನಪಂಕ ನಿವೃತ್ತಿಗೊಳಿಸುವದೆಂದು ವಂದಿಸುವೆ 1 ಅವ್ಯವಹಿತಾಸದೃಶ ಭಕ್ತಿಯ ಸವ್ಯಸಾಚಿ ಸಹಾಯ ಸಲಿಸಾ ದಿವ್ಯ ಪದವಿಯ ಪಡೆವೆನೆಂದುಗತವ್ಯಳೀಕದಲಿ ಕಾವ್ಯ ವ್ಯಾಕರಣಗಳಿಂದ ವಹಿಸಿದ ಸೇವ್ಯ ಗುರು ಲಾ- ತವ್ಯ ಮುನಿವರರಂಘ್ರಿಕಮಲವ ನುತಿಸಿ ನಮಿಸುವೆನು 2 ಪುಂಡರೀಕ ದಲಾಯತಾಕ್ಷನೆ ಹಿಂಡು ದೈವದ ಗಂಡನೆಂದತಿ ಚಂಡ ಮೈಗಳ ಖಂಡಿಸಿದ ಯತಿಮಂಡಲೇಶ್ವರನ ಪಾಂಡ್ಯದೇಶದೊಳವತರಿಸಿದಾ ಖಂಡಲಾತ್ಮನ ನಮಿಪೆ ಮಮ ಹೃ- ನ್ಮಂಡಲದಿ ಪಾಲಿಸು ಸುಧಾರಸವುಂಡು ನಲಿವಂತೆ 3 ಮೋದತೀರ್ಥ ಮಹಾಬ್ಧಿಯನು ಕಡೆ- ದಾದಿಯಲಿ ನ್ಯಾಯಾಮೃತವ ತೆಗೆ- ದಾದರದಿ ಸಜ್ಜನರಿಗುಣಿಸಿದ ಗಾಢಮತಿಯುತನ ಮಾಧವನ ಗುಣತರ್ಕ ತಾಂಡವ ವೋದಿಸುತ ಚಂದ್ರಿಕೆಯ ತೋರಿದ ಬೋಧಕರ ಪ್ರಲ್ಹಾದಮುನಿ ಕರುಣದಲಿ ಸಲಹೆನ್ನ 4 ಮಂಗಳಾಂಬುತರಂಗ ತುಂಗಾ ಸಂಗಿ ಮಂತ್ರಾಲಯದಿ ನಿಂದು ಕು ರಂಗ ವೈರಿಯ ಪೂರ್ವ ಕರುಣಾಲಿಂಗನೋತ್ಸುಕನ ಪಂಗು ಬಧಿರಾದ್ಯಂಗ ಹೀನರ ಪಾಂಗ ನೋಟದಿ ಪಾಲಿಸುವ ಯತಿ ಪುಂಗವಾರ್ಜಿತ ರಾಘವೇಂದ್ರರ ನಮಿಪೆನನವರತ 5 ಜೋಲಿಸುವ ಕಂಠದಲಿ ತುಳಸೀ ಮಾಲೆಯನು ಕರಯುಗದಿ ವೀಣಾ ತಾಳಗಳ ಬಾರಿಸುತ ಸರ್ವತ್ರದಲಿ ಸಂಚರಿಸಿ ಶ್ರೀಲಲಾಮನ ಲೀಲೆಗಳಿಗನು- ಕೂಲರಾದ ಸುರರ್ಷಿ ನಾರದ ರಾಲಯಸಿ ತಪ್ಪುಗಳ ತಿದ್ದುವುದೆಂದು ನಮಿಸುವೆನು 6 ಸತ್ಯಭಾಮಾಕಾಂತನಿದಿರಲಿ ನಿತ್ಯ ನಡೆಸುವನೆಂಬ ಸೇವೆಗೆ ಒತ್ತಿಬಹ ವಿಘ್ನಗಳ ದೂರದಿ ಕಿತ್ತು ಬಿಸುಟುವರ ಹತ್ತು ದೆಶೆಯಲಿ ನಿಂತು ರಕ್ಷಿಪ ಕೃತ್ತಿವಾಸ ಸುರೇಶಮುಖ ದೇ- ವೋತ್ತುಮರ ನಾ ನಮಿಪೆ ತತ್ವದ ಭೃತ್ಯನಹುದೆಂದು 7 ಪಾವಮಾನ ಮತೀಯ ವೈಷ್ಣವ- ರಾವಳಿಗೆ ಶರಣೆಂಬೆ ನಿಮ್ಮ ಕೃ- ಪಾವಲಂಬನವಿತ್ತು ಕರುಣವ ಶುದ್ಧಿಕರಿಸುತಲಿ ದೇವ ದೇವವರೇಣ್ಯ ಭಕ್ತರ ಕಾವ ಶೇಷಗಿರೀಂದ್ರನಾಥನ ಸೇವಿಸುವ ಸುಖವಿತ್ತು ಸುಲಭದಿ ಸಲುಹಬೇಕೆಂದು 8
--------------
ತುಪಾಕಿ ವೆಂಕಟರಮಣಾಚಾರ್ಯ
ಬದುಕಿಸೀ ಪಶುಗಳನೂ ಭಗವಂತ ನೀನು ಪ ಕದಲಿಸೀರೋಗವ-ಕರುಣಿಗಳರಸನೆ ಅ.ಪ. ಗೋವುಗಳೆಲ್ಲಾ ಹೊಟ್ಟೆ-ನೊವಿನಿಂ ಕಂಗೆಟ್ಟು ಮೇವನುಬಿಟ್ಟ ವಿದಾವರೊಗವೋ ಕಾಣೆ 1 ಹೊಟ್ಟೆ ಕಳೆದು ಕಂಗೆಟ್ಟುಧಾತುಗಳೆಲ್ಲಾ ಕೆಟ್ಟು ಜೀವಂಗಳ ಬಿಟ್ಟುಬಿಡದಮುನ್ನ 2 ನಾಲಿಗೆ ನೀಡವು ಕಾಲು ಕೆಟ್ಟವು ಕಂ ಣಾಲಿ ಕೆಂಣಾಲಿ ಕೆಂಪಾದವು ಮೂಲವೆ ತಿಳಿಯದು3 ಗೋವುಗಳಿಗೆ ಭೂದೇವರುಗಳಿಗೆಲ್ಲ ದೇವ ನೀನಲ್ಲವೆ-ದೇವಕೀ ತನಯನೆ 4 ಸತ್ತವರಿಗೆ ಜೀವವಿತ್ತು ಬದುಕಿಸಿದೆ ಮೃತ್ಯುದೇವತೆ ನಿನ್ನ ತೊತ್ತಹಳಲ್ಲವೆ 5 ದಾಸನು ನಾನೆಂಬ ವಾಸಿಯುಳ್ಳರೆ ಬೇಗ ವಾಸಿಯ ಮಾಡಯ್ಯ ನೀ ಮೋಸವ ಮಾಡದೆ 6 ಇಷ್ಟದಿನೆನೆವರ ಕಷ್ಟವ ಕಳೆವ ಪುಲಿ ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ 7
--------------
ಸರಗೂರು ವೆಂಕಟವರದಾರ್ಯರು
ಬದುಕಿಸೀ ಪಶುಗಳನ್ನು ಭಗವಂತ ನೀನು ಪ ಬದುಕಿಸೀ ಪಶುಗಳ ಭವರೋಗ ವೈದ್ಯನೆ ಕದಲಿಸೀ ರೋಗವ ಕರುಣಿಗಳರಸನೆ ಅ.ಪ ಗೋವುಗಳೆಲ್ಲಾ ಹೊಟ್ಟೆ ನೋವಿಂ ಕಂಗೆಟ್ಟು ಮೇವನು ಬಿಟ್ಟವಿದಾವ ರೋಗವೋ ಕಾಣೆ 1 ಹೊಟ್ಟೆ ಕಳೆದು ಕೆಂಗೆಟ್ಟಧಾತುಗಳೆಲ್ಲಾ ಕೆಟ್ಟು ಜೀವಂಗಳ ಬಿಟ್ಟ ಬಿಡದ ಮುನ್ನ 2 ನಾಲಿಗೆ ನೀಡವು ಕಾಲು ಕೆಟ್ಟವು ಕಂ ಣ್ಣಾಲಿ ಕೆಂಪಾದವು ಮೂಲವೆ ತಿಳಿಯದು 3 ಗೋವುಗಳಿಗೆ ಭೂದೇವರುಗಳಿಗೆಲ್ಲ ದೇವ ನೀನಲ್ಲವೆ ದೇವಕೀ ತನಯನೆ 4 ಸತ್ತವರಿಗೆ ಜೀವವಿತ್ತ ಬದುಕಿಸಿದೆ ಮೃತ್ಯು ದೇವತೆ ನಿನ್ನ ತೊತ್ತಹಳಲ್ಲವೆ 5 ದಾಸನು ನಾನೆಂಬ ವಾಸಿಯುಳ್ಳರೆ ಬೇಗ ವಾಸಿಯ ಮಾಡಯ್ಯ ನೀ ಮೋಸವ ಮಾಡದೆ 6 ಇಷ್ಟದಿ ನೆನೆವರ ಕಷ್ಟವ ಕಳೆವ ಪುಲಿ ಬೆಟ್ಟದೊಳಿಹ ವರದ ವಿಠಲ ಕೃಷ್ಣನೀ 7
--------------
ವೆಂಕಟವರದಾರ್ಯರು
ಮೂಲ ದೇಹದಿ ಪಾಳ್ಯ ಬಿಡುತಿದೆ ನಾಳೆ ನಾಡದೋ ಕಾಣೆ ತಮಪುರವಿದು ಕಾಲ ಬರುತಿದೆ ಪ ಬಂದು ಬಂದವರೆ ಮುಕ್ತಿಗೆಯಿಕ್ಕಿ ರವಿ ನಂದನ ನಾಳುಪದ್ರವನಿಕ್ಕಿ ಹಿಂದು ಮುಂದಕು ಛಾವಣೆಯಿಕ್ಕಿಪುರದ ಮಂದಿಯ ಕಾವಲನಿಕ್ಕಿ 1 ಪುರದೊಳಗೇನು ಬೀಯಗಳಿಲ್ಲ ಮುಂದೆ ಬರುವ ಮಾರ್ಗವ ಕಟ್ಟಿದರೆಲ್ಲ ಕರಣವೃತ್ತಿಗಳು ತಗ್ಗಿತು ಎಲ್ಲ ಕೋಟೆ ಜರಿದು ಹೋಯಿತು ಸುತ್ತಲು ಎಲ್ಲ 2 ಕಾಲು ಕೈಗಳ ಧಾತು ತಪ್ಪಿತು ನುಡಿದ ನಾಲಗೆ ಹಿಂದಕೆ ಸರಿಯಿತು ಕಣ್ಣಾಲಿಯೊಳಗೆ ನೀರು ಉಕ್ಕಿತು ವಸ್ತು ಗಾಳಿಯೊಳಗೆ ಮಾಯವಾಯಿತು 3 ಮಡದಿ ಮಕ್ಕಳಿಗೆಲ್ಲ ಹೊಡೆದಾಟ ಬಲಕೆ ಎಡಕೆ ಹೊರಳದಿರಿ ಎನುವಾಟ ಕಿಚ್ಚಿ ಯೊಡನೆ ಗೂಡನು ಸುಡುವಾಟ ಕೆಲವು ಕಡೆಯವರೆಲ್ಲ ತೆರಳುವಾಟ 4 ಹೇಳದ ಯಮದೂತರಿಗಂದು ಕಡು ಖೂಳ ಪಾಪಿಗಳೆಳತಹುದೆಂದು ಲಕ್ಷ್ಮೀ ಲೋಲ ನಾಳು ಗಳಮುಟ್ಟದಿರೆಂದು ತನ್ನಾಳಿಗೆ ಕಟ್ಟು ಮಾಡಿದನಂದು 5
--------------
ಕವಿ ಪರಮದೇವದಾಸರು
ಯಾಕಣ್ಣಾ ಏನು ಬೇಕಣ್ಣಾ ಬಿಡು ಝೋಕಣ್ಣಾ ಜಗ ಸಾಕಣ್ಣಾ ಪ ಆಕಣ್ಣಿನೊಳಗೇನು ಠೀಕಣ್ಣಾ ಇದು ಪಾರ್ವತಿಗುಸುರಿದ ಮೂಕಣ್ಣಾಅ.ಪ ಅಂತವನುತ್ತು ಎಡೆಯಾಡು ನಿ ಶ್ಚಿಂತೆಯೊಳಿಹ ಸತ್ಯಗುರಿನೋಡು ಪಂಥವು ಮಾಡುವ ಯೆಂಟಾರುಮಂದಿಗ ಳಂತೆ ನೀ ಹೊಗದೆ ಚಿಂತಾಮಣಿಯಾಗೂ 1 ಮಂಗಳಪುರಿವಾಸನಾಗುವೆ ನಿಜ ರಂಗಮಂಟಪಕೆ ನೀಹೋಗುವೆ ಜಂಗಮ ಗುರುಜಾಣಾಲಿಂಗ ತುಲಶೀರಾಮಾ ಮಂಗಳಮೂರುತಿ ಹಿಮಗಿರಿವರನಿಹ 2
--------------
ಚನ್ನಪಟ್ಟಣದ ಅಹೋಬಲದಾಸರು
ಶಂಕರಾವ ಮಾಂ ಶಂಕರಾವ ಮಾಂ ಶಂಕರಾವ ಮಾಂ ಕಿಂಕರಂ ತವ ಪಶಂಕರಾವ ಮಾಂ ಪಂಕಜಾಲಯಾ ಲಂಕೃತಾಂಘ್ರಿಣಾ ನಿರತ ಪೂಜಿತ ಅ.ಪ ಫಾಲಲೋಚನ ಫಣಿವಿಭೂಷಣ ಕಾಲಖಂಡನ ಕಲುಷಭಂಜನಲೋಲಕಂಕಣಾಲಿಪ್ತಚಂದನ ಮೂಲಕರಣ ಮೃದುಸುಭಾಷಣ 1ಭಕ್ತಪಾಲಕ ಮುಕ್ತಿದಾಯಕ ಶಕ್ತಿಪ್ರೇರಕ ಯುಕ್ತಿಬೋಧಕತ್ಯಕ್ತಲೌಕಿಕ ಮುಕ್ತಬಂಧಕ ದಿಕ್ತಟಾದಿಕ ವ್ಯಕ್ತರೂಪಕ 2ಭೂತಭಾವನ ಭೂರಿಲೋಚನ ಭೀತಿಭೇದನ ನೀತಿವರ್ಧನವೀತಬಹುಜನ ವಿತತಸದ್ಗುಣ ಪಾತಕೀಜನ ಪಾಪ ಶೋಧನ 3ಶಿವ ಮಹೇಶ್ವರ ಶಿವಗುಶೇಖರ ಭವ ಪರಾತ್ಪರ ಭುವನಮಂದಿರಧ್ರುವ ದಿಗಂಬರ ಧೂರ್ತಪುರಹರ ದಿವಪ ಭಾಸುರ ಶ್ರೀ ಉಮಾವರ 4ತಿರುಪತೀತಿಭೂಧರ ವರೇಸದಾ ವರದ ವೆಂಕಟೇಶ್ವರ ಇತಿಸ್ಥಿತವರ ಕಕುದ್ಗಿರೀಶ್ವರ ಗಂಗಾಧರ ಚರಣಸೇವಕಂ ಮಾಂ ಕುರು ಪ್ರಭೂ 5ಓಂ ಪರಮ ಪುರುಷಾಯ ನಮಃ
--------------
ತಿಮ್ಮಪ್ಪದಾಸರು
ಪರಿಪರಿಯಲಿ ವರ್ಣಿಸುವೆ ಕಳಾನಿಧಿಯಾನರಜನರು ಅರಿತವನ ಸ್ಮರಿಸಿರಯ್ಯಾ ಪಕಾಲುಗಳು ಹದಿನೆಂಟು ತೋಳುಗಳುಹತ್ತು ಕಣ್ಣಾಲಿಗಳು ಇಪ್ಪತ್ತ ಒಂದುಸಾಲಾಗಿ ರಂಜಿಸುವ ಶಿರಸಂಗಳೀರೈದುಮೇಲಾದ ಫಣಿಂಗಳಾರ ಹನ್ನೆರಡುನೀಳವಾಗಿಯೆ ಹೊಳೆವ ಕೋರೆದಾಡೆಗಳೆರಡುಗಾಳಿಯನು ಭೇದಿಸುವ ಬಾಲ ನಾಲ್ಕುಪೇಳಲೇನಿದನು ಕೇಳ್ ನಾಲಿಗೆಗಳ್ಹನ್ನೊಂದುಮೂರ್ಲೋಕದೊಡೆಯನ ಪೀಠದಲಿರಂಜಿಸುವ ದೇಹವೇಳು 1ಧರಣಿಯೊಳಗಿನ ಪರಿವಾರದವರಿಗೆಲ್ಲಪರಸ್ಪರನೆ ವೈರತ್ವ ಬೆಳೆಸಿಕೊಂಡಿಹುದೂಉರಗಮೂಷಕನಿಂಗೆ ಕರಿಮುಖಗೆ ಕೇಸರಿಗೆಗಿರಿಜೆ ಭಾಗೀರಥಿಗೆ ಉರಿನಯನ ಚಂದ್ರನಿಗೆಎತ್ತು ವ್ಯಾಘ್ರನ ತೊಗಲಗೆ ಮರೆಯ ಹೊಕ್ಕರೆ ಕಾಯ್ವನರಕೇಸರಿಯ ತೆರದಿ ಕರುಣಾಳು ಭಕ್ತವತ್ಸಲ ದೇವನಾ 2ಬಲಿದಾಗ್ನಿಸಖಸರ್ವ ನಿಳಯದೀವಿಗೆವೈರಿಹಲವು ನಾಸಿಕದ ಸಂಚಾರಿಯಾ ಹಾರದಲಿಬೆಳೆದ ದೇಹದ ಮೇಲೆ ಮಲಗಿ ನಿದ್ರೆಯಗೈವನಳಿನನಿಳಯಳ ರಮಣ ಜಲಜಾಕ್ಷಗೋವಿಂದನನುಜೆಯರಸ ಹಲವುಮಾತೇನು ಕೇಳ್ ತಲೆ ಮೇಲೊಂದುಕೊಂಬಿನ ಋಷಿಯ ಪಿತನ ಚರಣಕೆಕೆೈಂiÀ್ಯು ಮುಗಿದು ತಲೆಬಾಗಿ 3
--------------
ಗೋವಿಂದದಾಸ