ಎನ್ನ ಪಾಲಿಸೋ ಕರುಣಾಕರಾ|
ಪನ್ನಗಶಯನ ಗದಾಧರಾ ಪ
ವಸುದೇವ ನಂದನ ಹರಿಮಧುಸೂದನ|
ಅಸುರಾಂತಕ ಮುರಲೀಧರ,
ಬಿಸರುಹನಾಭ ಸರ್ವೇಶನೆ ಮುನಿ|ಮಾ
ನಸ ಸಂಚಾರ ರಮಾಧವಾ 1
ಪರಮ ಪುರುಷ ಉರಗಾಸನ ವಾಹನಾ|
ಕರುಣಾರ್ಣವ ವಡವಾನಳಾ||
ಸರಸಿಜಭವ ಗಿರಿಜಾವಲ್ಲಭನುತ|
ವರಸುಜನಾವಳಿ ಪಾಲನಾ 2
ಕಾವನ ಪಿತ ಮುಚಕುಂದ ವರದ ರಾ|
ಜೀವ ನಯನ ನಾರಾಯಣಾ|
ಶ್ರೀವತ್ಸಲಾಂಛನ ಗುರುಮಹೀಪತಿ ಸುತ
ಜೀವನ ಸಖ ಶ್ರೀ ಕೃಷ್ಣನೆ3