ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಚಿತ್ರಾಪುರದ ದುರ್ಗಾ) ಚಿತ್ರಾಪುರ ನಾಯಕಿ ಪಾಲಿಸು ನಮ್ಮ ಗೋತ್ರ ವೃದ್ಧಿದಾಯಕಿ ಭ್ರಾತ್ರವ್ಯ ಭಯದಿಂದ ಭಜಿಸಿದ ವಿಧಿಯ ಸ್ತೋತ್ರಕೊಲಿದ ಮೊದಗಾತ್ರದೇವನ ರಾಣಿ ಪ. ಸರ್ವಮಂಗಲೆ ನಿನ್ನನು ಕಾಣಲು ಕಷ್ಟ ಪರ್ವತ ಪುಡಿಯಾದುದು ಶರ್ವ ಸುರೇಂದ್ರಾದಿ ಗೀರ್ವಾಣವಂದ್ಯೆ ನೀ ನಿರ್ವಹಿಸುವುದೆನ್ನ ಸರ್ವಕಾರ್ಯಗಳನ್ನು 1 ಕ್ಷುದ್ರರ ಮೋಹಿಸಲು ಹರಿಯು ನಿದ್ರಾ ಮುದ್ರೆಯ ಧರಿಸಿರಲು ರೌದ್ರ ರಕ್ಕಸ ಮಧುಕೈಟಭರನು ಕರು- ಣಾದ್ರ್ರ ಹೃದಯದಿಂದ ಕೊಲಿಸಿದ ಪತಿಯಿಂದ 2 ವಹಿಸಿದೆ ಸಕಲವನ್ನೂ ಸಹಿಸದ ಶತ್ರು ಪುಂಜಗಳನ್ನು ತ್ವರಿತದಿ ದಹಿಸು ದಾಸನೆಂದು ಗ್ರಹಿಸೆನ್ನ ಪಾಲಿಸು 3 ಚಂಡಮುಂಡರ ಶಿರವ ಕತ್ತರಿಸುತ ಚಂಡನಾಡಿದ ಭರವ ಕಂಡು ಮನಕೆ ರೋಷಗೊಂಡು ದೈತ್ಯರ ರಕ್ತ ಹಿಂಡಿ ದೇಹವ ತುಂಡು ತುಂಡು ಮಾಡಿದ ಧೀರೆ 4 ತಪ್ಪುಗಳೆಣಿಸದಿರೇ ಶೇಷಾದ್ರೀಶ- ನೊಪ್ಪಿದ ಗುರುವ ತೋರೆ ಅಪ್ಪಿಳಿಸರಿಗಳ ಚಿಪ್ಪನುಳಿಯದಂತೆ ತಪ್ಪಿಸು ಭಯವ ತಿಮ್ಮಪ್ಪನ ರಾಜನ ನೀರೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕ್ಷಮಾ ಪ್ರಾರ್ಥನೆ ಗುರುಹಿರಿಯರೆಡೆಯಲ್ಲಿ ಶಿರಬಾಗಿಸಿನಯದಲಿ ಎರೆವೆನೀಪರಿಯಲ್ಲಿ ಕರವಮುಗಿದು ಯತಿನಿಯಮ ಛಂದಸ್ಸು ಗತಿತಾಳಲಯಬಂಧ ನುತಶಬ್ದ ತತ್ವಾರ್ಥ ಸಂಗತಿಯನು ವರಕವಿಗಳೊರೆದಿರ್ಪ ತರತರದ ಪ್ರಾಸಗಳ ವರಲಕ್ಯಣಲಂಕಾರ ಮೆಂಬ ಪರಿಕರಂಗಳನರಿದು ಪರಿಪರೀಸಿಂಗರಿಸ ಲರಿಯೆ ಕವಿತಾಮಣಿಯ ಪರಿಯನರಿಯೆ ಸರಿಸದೋಳ್‍ನಿಂದೆ ನೆಂದರಿಯ ಬೇಡಿ ಅರಿಯದಾತರಳೆ ರಚಿಸಿದುದನುನೋಡಿ ಹಿರಿಯರೊಳುಗರುವತೋರಿದೆನೆನ್ನ ಬೇಡಿ ಸರಿದೋರಿದಂತೆಸಿಗೆ ಕೃಪೆಮಾಡಿ ಸಮರ್ಪಣೆ ತ್ವದ್ದತ್ತವಾಚಾ ತವಕಿಂಕರೇಣ ತ್ಪತ್ಪ್ರೀತಿ ಕಾಮೇನ ಮಯಾಕೃತೇನ | ಸ್ತೋತ್ರೇಣ ಲಕ್ಷ್ಮೀನೃಹರೇ ಸವಿಷ್ಣುಃ ಪ್ರೀತೋಭವತ್ಪಂ ಕರುಣಾದ್ರ್ರದೃಷ್ಟಿಃ ||
--------------
ನಂಜನಗೂಡು ತಿರುಮಲಾಂಬಾ
ಪತಿ ವಿಠಲ ನೀನಿವಳ ಕಾಯಬೇಕೊ ಪ ಕರುಣಾದ್ರ್ರ ಹೃದಯ ನಿನ್ನಡಿಗೆ ಮೊರೆಯಿಡುವೇ ಅ.ಪ. ಮಾನವ ಸುಜನ್ಮದಲಿ ನೀನಿವಳ ತಂದಿರುವೆಜ್ಞಾನಸಾಧನವ ಮಾರ್ಗ ಕಾಣದಲೆ ಬರಿದೇ |ಮಾನಿನಿಯ ಆಯುಷ್ಯ ಬರಿದೆ ಪೋಯಿತು ಹರಿಯೆನೀನಾಗಿ ಸಲಹಿವಳ ದೀನಜನ ಬಂಧೋ 1 ಪಂಚಭೂತಾತ್ಮಕದ ಈ ದೇಹ ಸ್ಥಿರವಲ್ಲಕೊಂಚಮತಿಯನು ಕಳೆದು ಸರ್ವಾಂತರಾತ್ಮ |ಪಂಚಭೇದವನರುಹಿ ಮುಂಚೆ ತರತಮ ತಿಳಿಸಿಪಂಚ ಪಂಚಾತ್ಮಕನೆ ಸಲಹ ಬೇಕಿವಳಾ 2 ಹರಿಗುರೂ ಸದ್ಭಕ್ತಿ ಮರಳಿ ವೈರಾಗ್ಯವನೆ ಕರುಣಿಸೂವುದು ಹರಿಯೆ ದುರಿತಾಂಧ ರವಿಯೆ ಹರಿಗೋಲುಭವನಿಧಿಗೆ ಎಂದೆನಿಪ ತವನಾಮ ಸ್ಮರಣೆ ಸಂತತವಿತ್ತು ಪೊರೆಯ ಬೇಕಿವಳಾ 3 ಜೇನು ಸವಿಯಂತಿಪ್ಪ ಆನಂದಕರ ಶಾಸ್ತ್ರಮಾನನಿಧಿ ಮಧ್ವಾಖ್ಯ ಸಾನುರಾಗದಲೀ |ಕ್ಷೋಣಿಸುರರುದ್ಧಾರ ಕಿತ್ತಿಹುದ ನೀನರುಹಿಜ್ಞಾನಗಮ್ಯನೆ ಕಾಯೊ ಪ್ರಾಣಾಂತರಾತ್ಮ 4 ಇಂದೀವರಾಕ್ಷಹರಿ ದ್ವಂದ್ವಗಳ ಸಹನೆಯನುತಂದೆ ಕರುಣಿಸಿ ಕಾಯೊ ಕಂಜದಳ ನೇತ್ರಅಂದು ಇಂದಿಗು ಮುಂದೆ ಎಂದೆಂದು ಗತಿ ನೀನೆಎಂದು ನಂಬಿಹೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು