ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂಬಿದೆ ಧನ್ವಂತ್ರಿ ನಿನ್ನ ಕರುಣಾಂಬುಧಿ ಚಿನ್ಮಯ ಪರಿಪಾಲಿಸೆನ್ನ ಪ. ದೇವಾಸುರರೆಲ್ಲ ಸೇರಿ ಏಕ ಭಾವದಿಂದಲಿ ತಮ್ಮ ಸಾಹಸವ ತೋರಿ ತಾವಾಗಿ ಕಡೆಯಲಂಬುಧಿಯ ಭವ ನಾವನ ಸಮಯದಿ ಬಂದಿಯನ್ನೊಡೆಯ 1 ಕುಲಿಶಧರಗೆ ಯುಕ್ತಿ ಕಲಿಸಿ ಬಲಿವಲ ಶಂಬರಾದಿ ದೈತ್ಯರ ಮೋಹಗೊಳಿಸಿ ಕಲಶಪೂರಿತ ದಿವ್ಯ ಸುಧೆಯ ದೇವ ಬಲಕಿತ್ತು ಸಲಿಸಿದ ಸಾಮ್ರಾಜ್ಯನಿಧಿಯ 2 ಪೂರ್ಣೇಂದು ಗಣಜಾಯಿ ಸುಮುಖಾ ಶ್ಯಾಮ ವರ್ಣ ಸುಬಾಲಕ ದುರ್ಜನ ವಿಮುಖಾ ಸ್ವರ್ಣಾವದಾತ ಸುವಾಸ ದಿವ್ಯ ಕರ್ಣಾಭರಣಾದಿ ಭೂಷ ಸುನಾಸಾ 3 ದೀರ್ಘಪೀವರ ದೋರ್ದಂಡ ಪಂಚ ಶುಭ ಶುಂಡಾ ಜನಿತ ಬ್ರಹ್ಮಾಂಡ ವ್ಯಾಧಿ ವರ್ಗವ ಓಡಿಸುವರೆ ಸುಪ್ರಚಂಡಾ 4 ಕಂಬುಗ್ರೀನ ಪರೇಶ ಅರು- ಣಾಂಬುಜಾಕ್ಷ ಸುಖ ಚಿದ್ಘನ ವೇಷಾ ನಂಬಿದವರ ಕಾವ ಶ್ರೀಶಯನ ನಿಂಬಾಗಿ ರಕ್ಷಿಸು ಶ್ರೀ ವೆಂಕಟೇಶಾ 5
--------------
ತುಪಾಕಿ ವೆಂಕಟರಮಣಾಚಾರ್ಯ