ಪ್ರಾಣನಾಥ ಪಾವನಗಾತ್ರ ಪ
ನಿನ್ನಡಿಗಾನಮಿಸುವೆನು ಅ.ಪ
ಬನ್ನಬಡಿಪ ಖಳರನ್ನು ಮುರಿದು ಶರ
ಣನ್ನುವರನು ಕಾರುಣ್ಯದಿ ಪೊರೆಯುವ 1
ಸೇರಿದವರ ಭವದೂರಗೈದು ಮನ
ಕೋರಿಕೆ ಸಲಿಸುವ ಧೀರ ಉದಾರ 2
ಎನ್ನ ಮನೋರಥವನು ಸಲಿಸುವೊಡೆ
ನಿನ್ನ ಹೊರತು ನಾನನ್ಯರ ಕಾಣೆನು 3
ಮಂಜುಳ ವೇಷ ಪ್ರಭಂಜನ ಕುವರ ಧ
ನಂಜಯ ಸೋದರ ಕುಂಜರಗಮನ 4
ಕರಿಗಿರೀಶ ಶ್ರೀ ನರಹರಿ ಚರಣವ
ನಿರುತ ಸೇವಿಸುವ ಶರಣ ಶಿರೋಮಣಿ 5