ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೃಷ್ಟಿ ತಾಕಿತೆ ನಿನಗೆ ಶ್ರೀರಾಮ ಸುಂದರತರ ಮುಖ ಚಂದ್ರನ ನೋಡುತಲಿ ಸುಂದರಿಯರೆಲ್ಲ ಬಂದು ಕಂದ ನಿನ್ನ ಮುದ್ದಿಡಲು 1 ನೀಲ ಶುಭಕುಂತಲವ ನೀಲ ವೇಣಿಯರು ತಿದ್ದಿ ಲಾಲಿಸಿದ ಕಾರಣದಿಂ 2 ಮಂಗಳವಾದ ನಿನ್ನ ಕಂಗಳ ಢಾಳವನ್ನು ಅಂಗನೆಯರೆಲ್ಲ ನೋಡಿ ಹೆಂಗಿಸಿದ ಕಾರಣದಿಂ 3 ಮಾರಸುಂದರ ಸುಕು ಮಾರವರ ರೂಪವನು ಸಾರಸಾಕ್ಷಿಯರು ಕೂಡಿ ಮೀರಿಮಾತನಾಡಿದರಿಂ 4 ಮಾನವ ವಂದಿತನೆ ಮೌನಿಕುಲ ಸೇವಿತನೆ ಧೇನುಪುರ ವೆಂಕಟೇಶ ಶ್ರೀನಿವಾಸ ಪಾಲಿಸಲಿ 5
--------------
ಬೇಟೆರಾಯ ದೀಕ್ಷಿತರು