ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧೂಪಾರತಿಯ ನೋಡುವ ಬನ್ನಿ ನಮ್ಮಗೋಪಾಲಕೃಷ್ಣನ ಪೂಜೆಯ ಸಮಯದಿ ಪ.ಅಗುರುಚಂದನ ಧೂಪ ಗುಗ್ಗುಳ ಸಾಮ್ರಾಣಿಮಘಮಘಿಸುವ ಧೂಪದಾರತಿಯು ||ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮಜಗನ್ನಾಥ ಕೃಷ್ಣನ ದೇವರ ಪೂಜೆಯ 1ಮದ್ದಳೆ ಜಾಂಗಟಿ ತಾಳ ತಮ್ಮಟೆಭೇರಿತದ್ಧಿಮಿ ಧಿಮಿಕೆಂಬ ನಾದಗಳು ||ಹೊದ್ದಿದಧವಳ ಶಂಖದ ಘೋಷಣಂಗಳಪದ್ಮನಾಭನ ದಿವ್ಯ ದೇವರ ಪೂಜೆಯ 2ಢಣ ಢಣ ಢಣರೆಂಬ ತಾಳ ದಂಡಿಗೆವೇಣುಢಣಕು ಧಿಮಿಕು ಎಂಬ ಮದ್ದಳೆಯು ||ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳಘನರಾಗದಿಂದಲಿ ಹಾಡುತ ಪಾಡುತ 3ಮುತ್ತು ಛತ್ರ ಚಾಮರ ಪತಾಕ ಧ್ವಜರತ್ನ ಕೆಚ್ಚಿದ ಪದಕ ಹಾರಗಳು ||ಮತ್ತೆ ಕೋಟಿಸೂರ್ಯ ಪ್ರಭೆಯ ಧಿಕ್ಕರಿಸುವಸತ್ಯಭಾಮೆ ರುಕ್ಮಿಣಿಯರರಸನ 4ಹರ ಬ್ರಹ್ಮಸುರಪತಿ ದೇವತೆ ಮೊದಲಾದಪರಮ ಪಾವನಮೂರ್ತಿ ಪುರುಷೋತ್ತಮನ ||ಪರದೈವತವೆಂದು ಬಿರುದು ಪೊಗಳಿಸಿಕೊಂಬಪುರಂದರವಿಠಲನ ಪೂಜೆಯ ಕಾಲದ 5
--------------
ಪುರಂದರದಾಸರು