ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ | ಪುಟ್ಟುವದು ಬಿಡಿಸೊ ಎನ್ನವರೊಳಗಿರಿಸೊ ಪ ಬಲುಕಾಲ ಮಲ-ಮೂತ್ರ ಡೊಳ್ಳಿನೊಳು ಬಿದ್ದು | ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು || ಹಲವು ಮಾತೇನು ಎನಗೆ ಬಿಡದು | ಸಲಹಬೇಕಯ್ಯಾ ಸಮುದ್ರ ಶಯ್ಯಾ 1 ಕರ ಪಿಡಿದು ಎತ್ತುವ ಬಿರುದು ಪರಾಕ್ರಮ | ಮರಳಿ ಮಿಗಿಲೊಂದು ದೇವರಿಗೆ ಉಂಟೆ || ಮರೆವು ಮಾಡದೆ ಮಹಾದುರಿತವ ಪರಿ_ | ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ2 ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ | ನಿತ್ಯ ಪ್ರಾಣನಾಥಾ ಅಭಯ ಹಸ್ತಾ || ಸಿರಿ ವಿಜಯವಿಠ್ಠಲರೇಯಾ | ಸನ್ನಿಧಿಯಲ್ಲಿ ಎನ್ನ ಸಂತೋಷಪಡಿಸೊ 3
--------------
ವಿಜಯದಾಸ