ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಶ್ರೀಹರಿ ಸ್ತುತಿಗಳು ಆನಂದ ಆನಂದ ಆನಂದ ಪ ಆನಂದ ನಿನ್ನ ನೋಡಿದವರಿಗೆ ಅ.ಪ ಆ ಮುಖ ಆ ಕಂಠವಾನಂದ ಆ ಮಹಾಭುಜಕೀರ್ತಿ ಆನಂದ ಸಾಮಜ ಶಂಖಚಕ್ರಗಳಾನಂದ ಹೊಮ್ಮುವ ಗದೆ ಹಸ್ತ ಜಗದಾನಂದ 1 ಸುರಾಸುರರು ದೇವಾನುದೇವರು ತಂ- ಬುರ ನಾರದ ಮೊದಲಾದವರು ವರುಣಿಸಲಾರರು ನಿನ್ನಳವನ್ನು ಅರಿಯಲು ಪೊಗಳಲು ಆನಂದವನ್ನು 2 ಸಂಖ್ಯೆಗೆ ಎಟುಕದ ಆನಂದವಯ್ಯ ಅಂಕೆಗೆ ನಿಲುಕದ ಆನಂದವಯ್ಯ ಅಂಕುಡೊಂಕಿಲ್ಲದ ಆನಂದವಯ್ಯ ಬಿಂಕವ ಬಿಟ್ಟು ಪಾಡಿರೋ ಅಯ್ಯ 3 ಕಮಲವದನದ ಚೆಲುವಾನಂದ ಕಮಲಲೋಚನದ ಸುಂದರ ಅಂದ ಕಮಲೋದ್ಭವನಿಹ ವಕ್ಷವಾನಂದ ಕಮಲಯುಗಳ ಶ್ರೀಪಾದವಾನಂದ 4 ಎಣೆಯಿಲ್ಲಾನಂದಕೆ ಎಣೆಯಿಲ್ಲವಯ್ಯ ಕಣಕಣವು ನೋಡಲು ತಣಿಯದವಯ್ಯ ಅಣಿಗೊಂಡ ಜಾಜಿಪುರೀಶನವ್ವಯ್ಯ ವರ್ಣಿಸಲಾನು ಪಾಮರನಯ್ಯ 5
--------------
ನಾರಾಯಣಶರ್ಮರು
ಏನು ಗಳಿಸಿದ್ಯೊ ಪ್ರಾಣಿ ಜ್ಞಾನಕ ಮಾಡಿ ನೀ ಹಾನಿ ಧ್ರುವ ಶಬ್ಧಜ್ಞಾನದ ಅಂಗಡಿನೀ ಹಾಕಿ ಲುಬ್ದಿಸಿದೊ ಬಲು ಪಾಕಿ ಲಬ್ದಾಲಬ್ಧಿಯು ತಿಳಿಯದೆ ಡೊಂಕಿ ಸ್ತಬ್ಧನಾದ್ಯೊ ವಿಶ ಸೋಂಕಿ 1 ವಿದ್ಯಾ ವ್ಯುತ್ಪತ್ತಿ ತೋರಿ ನೀ ಬಹಳ ಸದ್ಯಮಾಡಿದ್ಯೊ ತಾಳ ಮೇಳ ಸಿದ್ಧಾಂತನುಭವ ನೀ ಮಾಡಿ ಹಾಳ ಕೋಳ 2 ಗಳಿಸುವದೇನೆಂದರಿಯದೇ ಖೂನ ಬಾಳಿ ಬದುಕಿ ಪಡದೇನ ಬೆಳಗು ಬೀರುತಿರೆ ಮಹಿಪತಿ ಗುರುಜ್ಞಾನ ತಿಳಕೊಬಾರದೆ ನಿಜಖೂನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳೀವಲ್ಲದಿದು ಎನಗೆ ತಿಳಿಸಯ್ಯ ಹರಿಯೆ ಬಲುಪಾಪಿಜೀವಿಯ ತಪ್ಪಾರಿಗಿಹ್ಯದೋ ಪ ಹುಟ್ಟಿಸಿದವನಿಗೋ ಹುಟ್ಟಿ ಬಂದವನಿಗೋ ಸೃಷ್ಟಿಗೊಳಿಸಿದಂಥ ಸೃಷ್ಟಿ ಕರ್ತನಿಗೋ ಗಟ್ಟ್ಯಾಗಿ ನನಗಿದರ ಗುಟ್ಟು ತಿಳಿಸೈ ತಂದೆ ಮುಟ್ಟಿಭಜಿಸುವೆ ನಿನ್ನ ಶ್ರೀಕೃಷ್ಣರಾಯ 1 ಗೋಡೆಯ ಡೊಂಕಿರಲು ಗೋಡೆಯ ತಪ್ಪಥವ ಗೋಡೆಯನು ಕಟ್ಟಿದ ಗೌಂಡಿಯ ತಪ್ಪೋ ಕೂಡಿಟ್ಟು ಹಣ ವೆಚ್ಚಮಾಡಿ ಕಟ್ಟಿಸಿದಂಥ ಗೋಡೆಯೊಡೆಯನ ತಪ್ಪೋ ತಿಳಿಹೇಳೆನಗೆ 2 ಬಂಡಿ ತಗ್ಗಿಗೆ ಬೀಳೆ ಬಂಡಿದೇ ತಪ್ಪಥವ ಬಂದಡರಿ ಕೂತುಕೊಂಡವರದೆ ತಪ್ಪೋ ಬಂಡಿಹೊಡೆಯುವಂಥ ದಿಂಡೆಗಾರನ ತಪ್ಪೋ ಕಂಡು ಇದ್ದಂತ್ಹೇಳೋ ಪಂಢರಿರಾಯ 3 ಜೀವಾಳ ಅಪಸ್ವರ ನುಡಿಯಲದರದೇ ತಪ್ಪೋ ಜೀವಾಳ ಬಾರಿಸುವಗೋ ಜೀವಾಳ ಕರ್ತನಿಗೋ ಆವಂಗೆ ತಪ್ಪು ಜಗಜೀವ ಜೀವೇಶನೆ ನ್ಯಾ ಯಾವಾಗ್ಹೇಳಯ್ಯ ಭಾವಜಪಿತನೆ 4 ಪ್ರಾಣೇಶ ಶ್ರೀರಾಮ ನೀನೆ ಬರೆದಿಹ್ಯ ಬರೆಹ ನೀನೆ ವ್ಯಾಪಕ ಸರ್ವ ನೀನೆ ರಕ್ಷಕನೋ ನೀನೆ ಸ್ವಾತಂತ್ರ್ಯಾಖಿಲ ಏನಿಲ್ಲ ಮನುಜನಾ ಧೀನ ತಪ್ಪ್ಯಾಕಿವಗೆ ನೀನೆ ಪೇಳಯ್ಯ 5
--------------
ರಾಮದಾಸರು
211ಶೃಂಗಾರವಾಗಿದೆ ಸಿರಿರಂಗನ ಮಂಚಅಂಗನೆಮಹಲಕುಮಿಯರಸ ಮಲಗುವ ಮಂಚಪಬಡಿಗ ಮುಟ್ಟದ ಮಂಚ | ಮಡುವಿನೊಳಿಹ ಮಂಚ |ಮೃಡನ ತೋಳಲಿ ನೆಲಸಿಹ ಮಂಚ ||ಹೆಡೆಯುಳ್ಳ ಹೊಸಮಂಚ ಪೊಡವಿ ಹೊತ್ತಿಹ ಮಂಚ |ಕಡಲ ಶಯನ ಶ್ರೀ ರಂಗನ ಮಂಚ 1ಕಣ್ಣು-ಮೂಗಿನ ಮಂಚ ಬೆನ್ನು ಬಾಗಿದ ಮಂಚ |ಹುಣ್ಣಿಮೆಯ ಚಂದ್ರಮನ ಅಡ್ಡಗಟ್ಟುವ ಮಂಚ ||ಬಣ್ಣ ಬಿಳುಪಿನ ಮಂಚ ಹೊನ್ನು ಕಾದಿಹ ಮಂಚ |ಚೆನ್ನಿಗ ಪರೀಕ್ಷೀತನ ಪ್ರಾಣವಕೊಂಡಮಂಚ2ಕಾಲಿಲ್ಲದೋಡುವ ಮಂಚ | ಗಾಳಿ ನುಂಗುವ ಮಂಚ |ನಾಲಗೆಯೆರಡುಳ್ಳ ವಿಷದ ಮಂಚ ||ಏಳು ಹೆಡೆಯ ಮಂಚ | ಮೂಲೋಕದೊಡೆಯನ ಮಂಚ |ಕಾಳಗದಲಿ ಕಿರೀಟಿಯ ಮುಕುಟಕೊಂಡಮಂಚ3ಹಕ್ಕಿಗೆ ಹಗೆಯಾದ ಮಂಚ | ರೊಕ್ಕ ಮುಟ್ಟದ ಮಂಚ |ರಕ್ಕಸರೆದೆದಲ್ಲಣನ ಮಂಚ ||ಸೊಕ್ಕು ಪಿಡಿದ ಮಂಚ | ಘಕ್ಕನೆ ಪೋಗುವ ಮಂಚ |ಲಕ್ಕುಮಿ ರಮಣ ಶ್ರೀ ಹರಿಯ ಮಂಚ 4ಅಂಕುಡೊಂಕಿನ ಮಂಚ | ಅಕಲಂಕ ಮಹಿಮ ಮಂಚ |ಸಂಕರುಕ್ಷಣನೆಂಬ ಸುಖದ ಮಂಚ |ಶಂಕರನ ಕೊರಳಿಗೆ ಪದಕವಾಗಿಹ ಮಂಚ |ವೆಂಕಟಪುರಂದರವಿಠಲ ರಾಯನ ಮಂಚ5
--------------
ಪುರಂದರದಾಸರು
ಬಿಡಲಾರೆ ಬಿಡಲಾರೆ ನಿನ್ನಡಿದಾವರೆಯ ನೀಕೊಡು ಕಂಡ್ಯ ಅಭಯವಿಡಿದೆಮ್ಮ್ಮಯ ತಂದೆ ಪ.ಕೂಗುವೆ ಕೂಗುವೆ ಕೃಪಾಸಾಗರನೆಂದ್ಹೇಳಿ ತಾಕೂಗಿದರೊದಗಿ ಕಾಯಿದೆ ನಾಗನ್ನಕೇಳಿತಂದೆ1ಬಡವ ನಾ ಬಡವನು ಕಾಣೊ ಬಾಡದೊನಮಾಲಿ ಕಡುಬಡವ ಸುದಾಮನ ಕೈಯವಿಡಿದ್ಯೆಂದುಕೇಳಿತಂದೆ2ಡೊಂಕುನಡೆದೆಡೊಂಕುನುಡಿದೆ ಶಂಕಿಲ್ಲದಲೆ ಮೂಡೊಂಕಿಯ ತಿದ್ದಿದ ಬಿರುದಾಂಕನಕೇಳಿತಂದೆ3ಬಲ್ಲೆನೊ ಬಲ್ಲೆನೊ ನೀನಿದ್ದಲ್ಲಿ ವ್ರಜದಲ್ಲಿ ಗೋಗೊಲ್ಲರು ಪುಲ್ಗಲ್ಲಿಗೆ ಕೈವಲ್ಯವುಕೇಳಿತಂದೆ4ಅವರೇವೆ ನಿನ್ನವರು ನಾನೇನವರ ಶಿಶುವಲ್ಲೆ ತನ್ನವರಹೊರೆವಪ್ರಸನ್ವೆÉಂಕಟ ತವರೂರಕೇಳಿತಂದೆ5
--------------
ಪ್ರಸನ್ನವೆಂಕಟದಾಸರು