ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಿಮುಖದ ಗಣಪತಿಯ ಚರಣಕ್ಕೆಯೆರಗಿ ಶಾರದೆಗೆ ಸೆರಗೊಡ್ಡಿ ವರವನು ವರವ ಬೇಡಿಕೊಂಡೆ ಸ್ಥಿರವಾದ ಭಕುತಿ ಕೊಡುಯೆಂದು 1 ವಾಯು ಬ್ರಹ್ಮ ಭಾರತಿಗೆ ಬಾಳ ಬೇಡಿಕೊಂಡ್ವೇ- ದವ್ಯಾಸರಿಗೆ ನಮೋಯೆಂಬೆ ನ- ಮೋಯೆಂದು ನಾರದರ ಪಾದಪದ್ಮಗಳಿಗೆರಗುವೆ 2 ಅತ್ರಿ ಅಂಗೀರಸ ವಸಿಷ್ಠಗೌತಮ ವಿಶ್ವಾ- ಮಿತ್ರ ಮಾರ್ಕಾಂಡೇಯ ಚ್ಯವನರು ಚ್ಯವನ ಭಾರದ್ವಾಜ ಬಕದಾಲ್ಭ್ಯರಿಗೆ ನಮಿಸುವೆ 3 ಪಂಡಿತ್ವಾಲ್ಮೀಕಿ ಕೌಂಡಿಣ್ಯ ಕೌಂಡಿಣ್ಯ ಅಗಸ್ತ್ಯಮುನಿ ಮರೀಚರಿಗೆ ನಾನು ನಮೋಯೆಂಬೆ4 ಶೇಷಗಿರಿವಾಸನ ಆಕಾಶನಳಿಯನೆ ವೆಂಕ- ಟೇಶ ನೀ ನಮ್ಮನೆ ದೈವ ಮನೆದೈ- ವ ಸಲಹೆನ್ನ ಪದ್ಮಾವತೀಶ ಪರಮಾತ್ಮ 5 ಮಂಗಳಾಂಗನೆ ನೀನು ಮಂಗಳಮಹಿಮನೆ ಮಂಗಳದೇವಿ ರಮಣನೆ ನೀನೆಮಗೆ ಜಯ ಮಂಗಳವ ಕೊಟ್ಟು ಸಲಹೆನ್ನ 6 ವಾಸುದೇವನೆ ನೀನು ವಾಸುಕಿಶಯನನೆ ವಾಸವಿಯ ರಥವ ನಡೆಸಿದೆ ನಡೆಸಿದಂಥ ಶ್ರೀನಿ- ವಾಸ ನೀನೆಮಗೆ ದಯಮಾಡು 7 ಎನ್ನಲ್ಲೆ ನೀನಿದ್ದು ನಿನ್ನಗುಣ ಬಹುರೂಪ- ವನ್ನು ತಿಳಿಸದಲೆ ಇರುವೋರೆ ಇರುವೋರೆ ನೀನು ಪ್ರ- ಸನ್ನನಾಗೆನಗೆ ದಯಮಾಡು 8 ಕಾಲ ಕಾಲಕೆ ನಿನ್ನ ನಾಮವನು ನಾಲಿಗೆ ಮ್ಯಾಲಿಟ್ಟು ನಿನ್ನ ನೆನೆವಂತೆ ನೆನೆವಂತೆ ಅನಿರುದ್ಧ 9 ಕಾಮಕ್ರೋಧವು ಮದ ಮಾತ್ಸರ್ಯ ಲೋಭಗಳು ಮೋಹ ಮಡುವಿನಲಿ ಮುಣುಗಿದೆ ಮುಣುಗಿದೆನೊ ಎನ್ನ ಕೈ ನೀನೆ ಪಿಡಿದೆತ್ತಿ ಕರೆದೊಯ್ಯೊ 10 ಐದು ಮಂದ್ಯೆನ್ನಲ್ಲಿ ಐದಾರೆ ಮಾರಾಯ ಬೈದರು ಬಿಡರೋ ಎನ್ನೀಗ ಎನ್ನೀಗ ಕಟ್ಟಿ ಕೊಂಡೊಯ್ದು ಹಾಕುವರೊ ಯಮನಲ್ಲಿ 11 ಆರು ಮಂದ್ಯರಿಗಳು ಕ್ರೂರ ಶತ್ರುಗಳುಂಟು ಘೋರಬಡಿಸುವರೊ ಅನುಗಾಲ ಅನುಗಾಲ ದುರ್ವಿಷಯ ತಾವೆನಗೆ ಕಲಿಸಿ ದಣಿಸೋರು 12 ಹತ್ತು ಮಂದಿ ಯೆನ್ನ ಸುತ್ತ ಮುತ್ತಿರುವರೊ ಕೂಪ ಭವದೊಳು ಭವದೊಳಗೆ ಬಳಲುವೆನು ಚಿತ್ತಕ್ಕೆ ತಂದು ದಯಮಾಡು 13 ಸಂಚಿತಾಗಾಮಿಗಳ ಮುಂಚೆ ದಹಿಸಿ ಈ ಪ್ರ- ಪಂಚವನು ಬಿಡಿಸೊ ಪರಮಾತ್ಮ ಪರಮಾತ್ಮ ನೀಯೆನ್ನ ವಂಚನಿಲ್ಲದಲೆ ಸಲಹೈಯ್ಯ 14 ಜ್ಞಾನ ಭಕ್ತಿ ಗಾನ ವೈರಾಗ್ಯ ಭಾಗ್ಯಗಳು ಜಾನಕಿರಮಣ ಜಗದೀಶ ಜಗದೀಶ ಜನಕನ ಜಾಮಾತ ನೀನೆ ತಿಳಿಸಯ್ಯ 15 ದ್ವಾಸುಪರುಣನಂತೆ ಈ ಶರೀರದೊಳಿದ್ದು ಏಸೇಸು ಜನ್ಮಕ್ಕಗಲದೆ ಅಗಲದಂತಿದ್ದು ಉ- ದಾಸೀನವ ಮಾಡೋದೊಳಿತಲ್ಲ 16 ಇಂದುಕುಲಜಾತ ನಿನ್ನೊ ್ಹಂದಿಕೊಂಡಿದ್ದು ಎಂದೆಂದಿಗು ಬಿಡದೆ ಗೆಳೆತನ ಗೆಳೆತನವಿದ್ದಲ್ಲಿ ಸಂದೇಹವ್ಯಾಕೊ ಸಲಹಲು 17 ಮುಕ್ತಿದಾಯಕ ನಿನ್ನ ಭಕ್ತರೇಸುಮಂದಿ ಹೆತ್ತಾಯಿಸುತರೇನವರೆಲ್ಲ ನಾ ಹುಟ್ಟಿದೆನೆ ಮತ್ತೆ ಮಲತಾಯಿ ಉದರದಿ 18 ಶ್ರೀಶನೆ ಕೇಳ್ ನಿನ್ನ ದಾಸರಂಗಳದಲ್ಲಿ ಬೀಸಿ ಬಿಸಾಕೊ ಎನ್ನನು ಎನ್ನ ಹರಿದಾಸರ ದಾಸತ್ವಯೆನಗೆ ಕೊಡಿಸಯ್ಯ 19 ಅಂಬರೀಷ್ವರದ ನಿನ್ನ ್ಹಂಬಲೆನಗಿರಲಯ್ಯ ಬಿಂಬ ಮೂರುತಿಯೆ ಬಿಡದೆನ್ನ ನಿನ್ನೂರಲ್ಲಿ ಇಂಬುಕೊಟ್ಟೆನ್ನ (ಅ)ಲ್ಲಿರಿಸಯ್ಯ 20 ಕಡಿದು ಹೊಡೆದು ಬಯ್ದು ಬಂದು ಕಾಲಿಂದೊದ್ದ- ರ್ಹಿಡಿಯದೆ ಅವರ ಅಪರಾಧ ಅಪರಾಧವೆಣಿಸದಿರೆ ನಡೆದರೊ ನಿನ್ನ ಪುರಕಾಗ 21 ಪುಟ್ಟ ಪ್ರಹ್ಲಾದ ಧ್ರುವ ಕೊಟ್ಟರೆಷ್ಟು ಭಾಗ್ಯ ಕಷ್ಟಕ್ಕೆ ಬಂದು ಒದಗಿದೆ ಒದಗಿ ಬಂದವರ ಆಪತ್ತು ಬಂಧನ ಬಿಡಿಸಿದೆ 22 ತನ್ನ ಮಗನ ಕರೆಯೆ ಎನ್ನ ಕರೆದನೆಂದು ನಿನ್ನ ದೂತರನು ಕಳಿಸಿದೆ ಕಳಿಸಿದ್ಯಜಮಿಳಗೆ ಮನ್ನಿಸಿ ಕೊಟ್ಟ್ಯೊ ನಿನಲೋಕ 23 ತಿರುಕ ತಂದವಲಕ್ಕಿ ಕರಕÀರನೆ ನೀಮುಕ್ಕಿ ದೊರೆತನವ ಕೊಟ್ಟು ದಾರಿದ್ರ್ಯ ದಾರಿದ್ರ್ಯ ಕಳೆದದ್ದು ಅರಿಕಿಲ್ಲವೇನೊ ಜನಕೆಲ್ಲ 24 ನಿಲ್ಲಬೇಕೆಂದಿಟ್ಟಿಕಲ್ಲು ಕೊಟ್ಟವಗೆ ಕೈ- ವಲ್ಯವನು ಕೊಟ್ಟ್ಯೋ ಕರುಣಾಳು ಕರುಣಾಳು ಬುಕ್ಕಿ ್ಹಟ್ಟು ಮಲ್ಲಿಗೆಯ ಮಾಲೆಗೊಲಿತೀಯೊ 25 ಕರೆದು ಕಂಸಗೆ ಕೊಟ್ಟು ಕೊಲಿಸಬಂದ- ಕ್ರೂರ(ಗೆ) ನದಿಯಲ್ಲೆ ನಿನ್ನ ನಿಜರೂಪ ನಿಜರೂಪ ತೋರಿದ್ದು ಇದುಯೇನು ನಿನ್ನ ಮಹಿಮೆಯು 26 ಗಂಧಕ್ಕೆ ಒಲಿದು ಕುಬ್ಜೆಯ ಡೊಂಕನೆ ತಿದ್ದಿ ಸುಂದರಿಯ ಮಾಡಿ ಸುಗುಣನೆ ಸುಗುಣನೆ ನೀನಾಕೆ- ಯಂಗಸಂಗ್ಯಾಕೆ ಬಯಸಿದಿ 27 ಕಲ್ಲಾದಹಲ್ಯೆಯನು ಕಡು ಚೆಲ್ವೆಯನು ಮಾಡಿ ಎಲ್ಲಿ ಮಲಗಿದ್ದ ಮುಚುಕುಂದ ಮುಚುಕಂದನ ಗುಹೆ- ಕೈವಲ್ಯ ಕೊಡಹೋದ್ಯೊ 28 ಮಗ್ಗವನೆ ಹಾಕಿ ಮಾರುಬಟ್ಟೆ ನೇದಿಲ್ಲ ರೊಕ್ಕವನೆ ಕೊಟ್ಟು ತರಲಿಲ್ಲ ತರಲಿಲ್ಲ ದ್ರೌಪದಿಗೆ
--------------
ಹರಪನಹಳ್ಳಿಭೀಮವ್ವ
ಭಕ್ತಿ ಪಾಶದಿ ಕಟ್ಟುತ ಹರಿಯನು ನಿತ್ಯದಲಿರು ಮನವೇ ಪ. ಭಕ್ತಿಗೆ ಮೆಚ್ಚುತ ಅಚ್ಚುತ ತಾನೆ ಬಹ ನಿಶ್ಚಯವಿದು ಮನವೆ ಅ.ಪ. ಅನುದಿನ ನಾರಾಯಣನೆಂದಣುಗಗೆ ಕ್ಷಣದಿ ಕಂಬದಿ ಬಂದ ದನುಜನ ಮುರಿದ ಗುಣನಿಧಿಯನು ನೀ ಕ್ಷಣ ಬಿಡದನುದಿನ ನೆನೆ ಮನವೇ 1 ಕಲ್ಲಾಗಿದ್ದಹಲ್ಲೆ ಪೊರೆದು ಶಿವ ಬಿಲ್ಲ ಮುರಿದ ರಾಮನ ನಲ್ಲೆ ಕುಬ್ಜೆಯ ಡೊಂಕನೆ ತಿದ್ದಿದ ಖುಲ್ಲ ಕಂಸನ ಗೆದ್ದಾ ಕೃಷ್ಣನ 2 ಅಂಬರೀಷ ದ್ವಾದಶಿ ವ್ರತವನು ಮಾಡೆ ಮುನಿ ಪುಂಗವ ಜರಿಯುತಿರೆ ರಂಗನ ಚಕ್ರದಿಂದ್ಹುಟ್ಟಿದನರಿಯ ದೇವ ಈ ಅಂಗ ಭಂಗರಕೆ ಚಾಟಿ ಶ್ರೀ ಶ್ರೀನಿವಾಸನು 3
--------------
ಸರಸ್ವತಿ ಬಾಯಿ
ಯಾಚಕರು ಪರರ ಸಂಕಟ ಬಲ್ಲರೆಣ ಪ ಭೂ ಚಕ್ರದಲಿ ಗಾಳಿಯಂತೆ ತಿರುಗಲು ಬಿಡರುಅ.ಪ ಕಾಪೀನವನು ಧರಿಸಿ ಮುಖವ ಡೊಂಕನೆ ಮಾಡಿ ಕೋಪದಿಂದಲಿ ಕರವನೆತ್ತಲ್ಯಾಕೆ ಪಾಪಿ ಕೂಪವ ಮೀರಿ ಸಮುದ್ರವನು ನೆರೆ ದಾಟಿ ರೂಪಾಂತರದಿ ಮನೆ ಮನೆಯ ಪೊಕ್ಕರು ಬಿಡರು 1 ವಿಷವ ಸವಿದುಂಡು ಮಹ ಮಡುವ ಪ್ರವೇಶಿಸಿ ವಸುಧೆಯೊಳು ಬೇಡಿ ಕಿರಿತಂದುಂಡರು ವಸಿಸಿ ಮಾನಸದಿ ಗೃಹಕರ್ಮ ಮಾಡಲಿ ಬಿಡರು 2 ಜುಟ್ಟು ಜನಿವಾರವನು ಕಿತ್ತುಕೊಂಡು ಯತಿಯಾಗಿ ಕಟ್ಟ ಕಡೆಯಲಿ ಗೃಹಸ್ಥ ಧರ್ಮ ತೊರೆದು ಹುಟ್ಟುಗತಿ ಯಿಲ್ಲೆನಗೆ ಕೃಷ್ಣ ಕೃಷ್ಣ ವಿಜಯ ವಿಠ್ಠಲನ ಪಾದಕೆ ಮೊರೆಯಿಟ್ಟರು ಬಿಡರು 3
--------------
ವಿಜಯದಾಸ
ಕೈಯ ತೋರೋ ಕರುಣಿಗಳರಸಾ-ಕೈಯ ತೋರೊ |ಕೈಯಲಿ ಬೆಣ್ಣೆಯ ಮುದ್ದೆಯ ನೀಡುವೆ-ಕೈಯ ಪಅಂಗುಲಿಯೊಳು ಪೊನ್ನುಂಗುರವೊಪ್ಪುವ ಕೈಯ ತೋರೊ |ಶೃಂಗಾರದಿ ಶಂಖಚಕ್ರವ ಧರಿಸಿದ ಕೈಯ ತೋರೊ ||ಅಂಗೈಯಲಿ ಧ್ವಜಪಧ್ಮವಿರಾಜಿಪ ಕೈಯ ತೋರೊ |ಅಂಗನೆಯರಉತ್ತುಂಗಕುಚದಲಿಟ್ಟ ಕೈಯ ತೋರೊ1ಬಡಬ್ರಾಹ್ಮಣನವಲಕ್ಕಿಯ ಬೇಡಿದ ಕೈಯ ತೋರೊ |ಕೊಡೆ ಮಾಡಿ ಗಿರಿಯೆತ್ತಿ ಗೋಗಳ ಕಾಯ್ದ-ಕೈಯ ತೋರೊ ||ಕಡುಹಿರಣ್ಯಾಖ್ಯನ ಒಡಲನು ಬಗೆದ-ಕೈಯ ತೋರೊ |ಧೃಡ ಪ್ರಹ್ಲಾದನ ಮಂಡೆಯೊಳಿಟ್ಟ ಕೈಯ ತೋರೊ 2ಅಲ್ಲಿ ಪೂತನಿಯ ಅಸುವನೆ ಹೀರಿದ ಕೈಯ ತೋರೊ |ಬಲ್ಲಿದಮಲ್ಲರ ಮರ್ದಿಸಿ ಬಂದ-ಕೈಯ ತೋರೊ ||ಮೆಲ್ಲನೆ ಕುಬುಜೆಯ ಡೊಂಕನೆ ತಿದ್ದಿದ ಕೈಯ ತೋರೊ |ಬಿಲ್ಲನು ಎಡಗೈಯಲಿ ಮುರಿದಿಟ್ಟ ಕೈಯ ತೋರೊ 3ಬಲಿಯನು ವಂಚಿಸಿ ದಾನವ ಬೇಡಿದ ಕೈಯ ತೋರೊ |ಫಲಪುಷ್ಪ ಪಾರಿಜಾತವ ತಂದ ಕೈಯ ತೋರೊ ||ಒಲಿದು ಪಾರ್ಥಗೆ ರಥವನು ನಡೆಸಿದ ಕೈಯ ತೋರೊ |ಮಲ್ಲಿಗೆ ಜಾಜಿಯ ತುರುಬಿಗೆ ಮುಡಿಸಿದ ಕೈಯ ತೋರೊ 4ಆಕಾಶದ ಚಂದ್ರಮನನು ಕರೆದ-ಕೈಯ ತೋರೊ |ನಾಕಪತಿಗೆ ಅಭಯವನಿತ್ತ-ಕೈಯ ತೋರೊ |ನೇಕ ಬಗೆಯಲಿ ಕೊಳಲನೂದುವ-ಕೈಯ ತೋರೊ |ಶ್ರೀಕಾಂತ ನಮ್ಮ ಪುರಂದರವಿಠಲ-ಕೈಯ ತೋರೊ 5
--------------
ಪುರಂದರದಾಸರು
ಸಜ್ಜನರ ಸಂಗ ನಮಗೆಂದಿಗಾಗುವುದೊ |ದುರ್ಜನರ ಸಂಗದಿಂದಲಿ ನೊಂದೆ ಹರಿಯೆ ಪವಾಕು-ವಾಕಿಗೆ ಡೊಂಕನೆಣಿಸುವರು-ಮತ್ತೆ |ಪೋಕರಾಡಿದ ಮಾತು ನಿಜವೆಂಬರು ||ವಾಕ್‍ಶೂಲಗಳಿಂದ ನೆಡುವರು ಪರರ ನೀ |ಪೋಕುಮಾನವರಿಂದ ನೊಂದೆ ಹರಿಯೆ 1ತಾವೆ ತಮ್ಮನ್ನು ಕೊಂಡಾಡಿಕೊಳ್ಳುವರು |ನ್ಯಾಯವಿಲ್ಲದೆ ನುಡಿವರು ಪರರ ||ಭಾವಿಸಲರಿಯರು ಗುರುಹಿರಿಯರನಿಂಥ |ಹೇಯ ಮನುಜರಿಂದ ನೊಂದೆ ಹರಿಯೆ 2ಒಡಜನರನು ಕೊಂದು ಅಡಗಿಸಿಕೊಂಬರು |ಬಿಡಲೊಲ್ಲರು ಹಿಡಿದನ್ಯಾಯವ ||ನುಡಿದು ಕೇಡನು ಒಡನೆ ತಪ್ಪಿಸಿಕೊಂಬಂಥಕಡು ಮೂರ್ಖರಿಂದ ನಾ ನೊಂದೆನು ಹರಿಯೆ 3ತೊತ್ತಿನೊಡನೆ ತನ್ನ ಸ್ನೇಹ ಸರಸ ಮಾತು |ತೆತ್ತಿಗರೊಡನೆ ಪಂಥವ ನುಡಿವರು ||ಸತ್ತಬಳಿಕ ಸೃಷ್ಟಿ ಸಟೆಯೆಂಬರು ಇಂಥ |ಮತ್ತಮನುಜರಿಂದ ನೊಂದೆ ಶ್ರೀಹರಿಯೆ4ಇಷ್ಟುದಿನವು ನಿನ್ನ ನೆನೆಯದ ಕಾರಣ |ಕಷ್ಟಪಡುವ ಕೈಮೇಲಾಗಿ ||ಸೃಷ್ಟಿಗೊಡೆಯ ಶ್ರೀ ಪುರಂದರವಿಠಲನೆ |ಮುಟ್ಟಿ ಭಜಿಸಬೇಕು ಧೃಷ್ಟಮನವು ನಿನ್ನ 5
--------------
ಪುರಂದರದಾಸರು