ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧ್ಯಾನ ಮಾಡಿರೊ ರಂಗಯ್ಯನ ಪ ಗಾನ ವಿಲೋಲನ ದೀನಾರ ಪೊರೆವೊನ ಅ.ಪ. ಮೀನ ರೂಪವ ತಾಳಿ ದಾನವಾಖ್ಯನ ಸೀಳಿ ಮಾನವ ಪೊಂದಿದ ಜಾಣ ರಂಗೈಯ್ಯನ 1 ಕೂರ್ಮ ತಾನಾಗಿ ಗಿರಿಯ ಬೆನ್ನಲಿ ಪೊತ್ತು ಸುರರನ್ನೆ ಪೊರೆದ ಗಂಭೀರ ರಂಗೈಯ್ಯನ 2 ವರಾಹ ರೂಪದಿ ಕೋರೆಯ ಕೊನೆಯಲಿ ಧರಣಿಯನೆತ್ತಿದ ಶೂರ ರಂಗೈಯ್ಯನ 3 ನರಹರಿ ರೂಪದಿ ಘೋರ ದೈತ್ಯನ ಸೀಳಿ ತರಳನ ಸಲಹಿದ ಕರುಣಿ ರಂಗೈಯ್ಯನ 4 ಪುಟ್ಟ ಹಾರುವನಾಗಿ | ದಿಟ್ಟ ಬಲಿಗೆ ಒಲಿದು ಕೊಟ್ಟ ವರಗಳ ದಿಟ್ಟ ರಂಗೈಯ್ಯನ 5 ಪರಶು ಪಿಡಿದು ಭೂವರರ ಗೆಲಿದು ಭೂ ಸುರರನ್ನೆ ಸಲಹಿದ ಧೀರ ರಂಗೈಯ್ಯನ6 ಮಾನವ ರೂಪದಿ ದಾನವಾಂತಕನಾಗಿ ದೀನರ ಪೊರೆದ ಸುಜ್ಞಾನಿ ರಂಗೈಯ್ಯನ 7 ಕಂಸನ ವಂಶ ನಿರ್ವಂಶಾಕೋಸುಗ ಯದು ವಂಶದೊಳು ತಾನು ಜನಸಿದನು ಹಿಂಸೆ ಮಾಡುತಲಿರ್ದ ಹಂಸ ಡಿಬಿಕರನ್ನು ಧ್ವಂಸ ಮಾಡಿದ ಮುರಧ್ವಂಸಿ ಕೃಷ್ಣಗೆ 8 ಸತಿಯರ ವ್ರತದಿಂದ ಪತಿತರಳಿಯದಿರೆ ಗತಿ ತೋರದೆ ಭವಕಾತರಿಸೆ ಅತಿ ನಗ್ನದಿ ಬಂದು ವ್ರತಭಂಗ ಮಾಡಿದ ಸಿರಿ ಕಂಠÀನುತನಾದ ಸಿತವಾಹನ ಸಖನ 9 ವೇದ ಬಾಹಿತರನ್ನು ಭೂದೇವಿ ಧರಿಸದೆ ಮಾಧವ ಪೊರೆಯೆಂದು ಮೊರೆಯಿಡಲು ಚದುರತನದಿ ಸತಿಯ ಕುದುರೆಯ ಮಾಡಿತಾ ಕೊಂಡ ಕದನದಿ ಕೊಂದವನ 10 ಮಂಗಳ ಮಹಿಮನ ಶೃಂಗಾರ ಪ್ರಿಯನ ಅಂಗಜಾರಿಯ ಧನುರ್ಭಂಗನ ಅಂಗಳದೊಳು ಮೂರ್ಲೋಕಂಗಳ ತೋರಿದ ತುಂಗ ವಿಕ್ರಮನಾದ ರಂಗೇಶವಿಠಲನ 11
--------------
ರಂಗೇಶವಿಠಲದಾಸರು
ಪಾಲಿಸೊ ಪರಮ ಪಾವನ್ನ ಕಮ ಲಾಲಯ ನಂಬಿದೆ ನಿನ್ನ ಆಹ ನಖ ತೇಜ ಮೂರ್ಲೋಕದರಸೆ ನೀನಾಲಯ ಬಿಡದಲೆ ಅ.ಪ ಹಿಂದೆ ಪ್ರಹ್ಲಾದನ ಮೊರೆಯ ಕೇಳಿ ಬಂದು ಕಾಯಿದೆ ಭಕ್ತ ಪ್ರಿಯ ಸುಖ ಸಂದೋಹ ಮೂರುತಿ ಆಯ ತಾಕ್ಷ ಎಂದೆಂದು ಬಿಡದಿರು ಕೈಯ ಆಹ ವೃಂದಾರ ಕೇಂದ್ರಗೆ ಬಂದ ದುರಿತಂಗಳ ಹಿಂದೆ ಮಾಡಿ ಕಾಯ್ದೆ ಇಂದಿರಾರಮಣನೆ 1 ಹರಣದಲ್ಲಿ ನಿನ್ನ ರೂಪ ತೋರಿ ಪರಿಹರಿಸೊ ಎನ್ನ ಪಾಪ ದೂರ ದಿರದಿರು ಹರಿಸಪ್ತ ದ್ವೀಪಾಧಿಪ ಸಿರಿಪತಿ ಭಕ್ತ ಸಲ್ಲಾಪ ಆಹ ಕರಣಶುದ್ಧನ ಮಾಡಿ ಕರೆಯೊ ನಿನ್ನ ಬಳಿಗೆ ನರಕಂಠೀರವ ದೇವ ಚರಣ ಆಶ್ರೈಸಿದೆ 2 ಶರಣ ಪಾಲಕನೆಂಬೊ ಬಿರುದು ಕೇಳಿ ತ್ವರಿತದಿ ಬಂದೆನೊ ಅರಿದು ಇನ್ನು ಪರಿ ಅಪರಾಧ ಜರಿದು ಪರತರನೆ ನೋಡೆನ್ನ ಕಣ್ತೆರೆದು ಆಹ ಮರಣ ಜನನಂಗಳ ತರಿದು ಬಿಸುಟು ನಿನ್ನ ಶರಣರ ಸಂಗದಲ್ಲಿರಿಸಿ ಉದ್ಧರಿಸೆನ್ನ 3 ಸಂಸಾರ ಸಾಗರ ದೊಳಗೆ ಎನ್ನ ಹಿಂಸೆ ಮಾಡುವರೇನೊ ಹೀಂಗೆ ನಾನು ಕಂಸಾರಿ ಅನ್ಯರಿಗೆ ಬಾಗೆ ಮತ್ತೆ ಸಂಶಯವಿಲ್ಲ ಮಾತಿಗೆ ಆಹ ಹಂಸ ಡಿಬಿಕರನ್ನು ಧ್ವಂಸ ಮಾಡಿದ ಶೌರಿ ಮೂರ್ತಿ ದಿವಸ ದಿವಸದಲ್ಲಿ 4 ಭವ ಶಕ್ರಾದ್ಯಮರ ಕೈಯ ನಿರುತ ತುತಿಸಿಕೊಂಬ ಧೀರ ಶುಭ ಪರಿಪೂರ್ಣ ಗುಣ ಪಾರಾವರ ಭಕ್ತ ವಾರಿನಿಧಿಗೆ ಚಂದಿರ ಆಹ ಸ್ಮರನ ಕಾಂತಿಯ ನಿರಾಕರಿಸುವ ತೇಜನೆ ಎರವು ಮಾಡದೆ ಹೃತ್ಸರಸಿಜದೊಳು ತೋರಿ 5 ಮೊದಲು ಮತ್ಸ್ಯಾವತಾರದಿ ವೇದ ವಿಧಿಗೆ ತಂದಿತ್ತ ವಿನೋದಿ ಶ ರಧಿಯೊಳು ಸುರರಿಗೋಸ್ಕರದಿ ನೀನು ಸುಧೆಯ ಸಾಧಿಸಿ ಉಣಿಸಿದೆ ಆಹ ಅದುಭೂತ ಭೂಮಿಯ ತೆಗೆದೊಯ್ದುವನ ಕೊಂಡು ಮುದದಿ ಹಿರಣ್ಯಕನುದರ ಬಗಿದ ಧೀರ 6 ಬಲಿಯ ಮನೆಗೆ ಪೋಗಿ ದಾನ ಬೇಡಿ ತುಳಿದೆ ಪಾತಾಳಕ್ಕೆ ಅವನ ಪೆತ್ತ ವಳ ಶಿರ ತರಿದ ಪ್ರವೀಣ ನಿನ್ನ ಬಲಕೆಣೆಗಾಣೆ ರಾವಣನ ಆಹ ತಲೆಯನಿಳುಹಿ ಯದುಕುಲದಿ ಜನಿಸಿ ನೀನು ಲಲನೇರ ವ್ರÀ್ರತವಳಿದಾಶ್ವಾರೂಢನೆ 7 ಮಾನಸ ಪೂಜೆಯ ನೀ ದಯದಿ ಇತ್ತು ಶ್ರೀನಾಥ ಕಳೆ ಭವವ್ಯಾಧಿ ಕಾಯೋ ಅನಾಥ ಬಂಧು ಸುಮೋದಿ ಚತುರಾ ನನಪಿತ ಕೃಪಾಂಬುಧಿ ಆಹ ತಾನೊಬ್ಬರನರಿಯೆ ದಾನ ವಿಲೋಲನೆ ಏನು ಮಾಡುವ ಸಾಧನ ನಿನ್ನದೊ ಹರಿ8 ನಿನ್ನ ಸಂಕಲ್ಪವಲ್ಲದೆ ಇನ್ನು ಅನ್ಯಥಾವಾಗಬಲ್ಲುದೆ ಹೀಂಗೆ ಚೆನ್ನಾಗಿ ನಾ ತಿಳಿಯದೆ ಮಂದ ಮಾನವನಾಗಿ ಬಾಳಿದೆ ಆಹ ಎನ್ನಪರಾಧವ ಇನ್ನು ನೀ ನೋಡದೆ ಮನ್ನಿಸಿ ಕಾಯೋ ಜಗನ್ನಾಥ ವಿಠಲ 9
--------------
ಜಗನ್ನಾಥದಾಸರು
ಬಾ ಗೋಪತಿ ಗೋಪನೆ ಮನ್ಮನಕೆ | ತಡಮಾಡುವುದ್ಯಾಕೆಭೋಗಿ ಮದಾಪಹ | ಆಗಮ ವೇದ್ಯನೆ | ನಮಿಸುವೆ ತವಪದಕೆ ಪ ಯೋಗಿ ವರೇಣ್ಯಾ ಅ.ಪ. ನೀರಜ ಸಂಭವಮುರಾರಿಗಳಿಂದಲಿ ಆರಾಧಿಪ ಪದ 1 ನವನೀತ ಚೋರ | ಪಾವನ ಚರಿತ | ಸ್ವರತ ಅನವರತಭುವನೈಕ ವಂದ್ಯ ವಿಶೋಕದಾತ | ಸಮಅಧಿಕ ರಹಿತಅವನಿಜೆ ವಲ್ಲಭ | ತ್ರಿವಿಧರಿ ಗೋಸುಗವಿವಿಧ ರೂಪಂಗಳ | ತಾಳುವ ಖ್ಯಾತ 2 ಹಂಸ ಡಿಬಿಕ ಶಕಟಾರಿ ಮುರವೈರಿ | ಮುಷ್ಠಿಕಮಲ್ಲಾರಿಕಂಸಾರಿ ವತ್ಸಾರಿ ಪರಮ ಉದಾರಿ | ಬಾಬಾರೆಲೊ ಶೌರಿಶಿಂಶುಮಾರ ಸುರ ಸಂಶಯ ಹರಿಸಲು |ಸ್ವಾಂಶದಿ ಜನಿಸುತ ಭಕ್ತರುದ್ಧರಿಸಲು 3 ಕರುಣ ವನದಿ ಶರಣಾಗತ ಪರಿಪಾಲ || ಶಿರಹರ ಶಿಶುಪಾಲತರಳ ದೃವಾದಿಯ ಪೊರೆವುದು ತವಶೀಲ | ಪಾಲಿಸು ಶ್ರೀಲೋಲಕರಣ ನಿಯಾಮಕ ವರ್ಣ ವೇದ್ಯತವಚರಣ ಬಯಸುವೆ ಹೃದಯ ಸದನಕೇ 4 ತೋಂಡ ಬೋವ ಮಾಯಾ ಪಟಲ 5
--------------
ಗುರುಗೋವಿಂದವಿಠಲರು
ಬಾರೋ ಮನೆಗೆ ಬಾರೋ ವೆಂಕಟರಮಣಾ ಪ ಕಂಸಾಸುರಮರ್ದನನೆ ಬಾರೊ | ಕೌಶಿಕಯಜ್ಞಪ ಬಾರೊ | ಹಂಸಡಿಬಿಕನಂತಕ ಬಾರೊ | ಹಂಸವಾಹನನ ಪಿತನೆ ಬಾರೊ 1 ಸಾಸಿರ ಮುಖನ ಪೆತ್ತವನೆ ಬಾರೊ | ಅನುಜ ಬಾರೊ | ಸಾಸಿರ ವದನ ಶಯನ ಬಾರೊ | ಭೂಸುರರಿಗೆ ಪ್ರಿಯನೆ ಬಾರೊ 2 ವಾರಿಧಿಯೊಳು ಪೊಕ್ಕವನೆ ಬಾರೊ | ವಾರಿಧಿಯ ಮಾನಭಂಗನೆ ಬಾರೊ | ವಾರಿಧಿಸುತೆಯ ಪಡೆದ ಕರುಣಾ - | ಸಿರಿ ವಿಜಯವಿಠ್ಠಲ ಬಾರೊ 3
--------------
ವಿಜಯದಾಸ
ಶ್ರೀಹರೀ ಕೃಷ್ಣಮುರಾರಿ ಕೇಶವ ಚಕ್ರಧಾರಿ ಪ ಸುಂದರ ಸುಮನಸ ವೃಂದ ಮುನಿಮಾನಸ ನಂದಗೋವರ್ಧನೋದ್ಧಾರೀ 1 ನಿತ್ಯ ಹಂಸ ಡಿಂಬಿಕ ಚಾಣೂರ ವೈರೀ2 ವಾತ ವತ್ಯ ಪ್ರಲಂಬ ಖ್ಯಾತ ಬಕಧೇನುಕ ಪೂತನಿ ಪ್ರಾಣಾಪಹಾರಿ3 ಕಂತುಪಿತ ಶ್ರೀಲಕ್ಷ್ಮೀಕಾಂತ ಕೃಷ್ಣ ಶ್ರೀಮದ- ನಂತ ಸುದರ್ಶನಧಾರೀ 4 ಸಾರಥಿ ದುರಿತೋತ್ತಾರೀ 5
--------------
ಅನ್ಯದಾಸರು
ವೆಂಕಟಾದ್ರಿವರದ ಶಂಕರನುತಪಾದ ಪ.ಶಂಖಾರಿ ಅಹಿಪರಿಯಂಕಶಾಯಿ ಉದಾರಿಕಿಂಕರಕೋಶ ಸಂಕಟನಾಶಪಂಕಜನಾಭಾಸಂಖ್ಯಾತ ರವಿಭಾ 1ಗಜಬಂಧನ ನಿವಾರಿ ಕುಜಮಸ್ತಕವಿದಾರಿಅಜಮಿಳರಕ್ಷ ನಿಜಜನಪಕ್ಷಕುಜನ ವಿಶಿಕ್ಷಾಂಬುಜ ಪತ್ರಾಕ್ಷ 2ಕಂಸ ಮಥನಕಾರಿ ಹಂಸಡಿಬಿಕವೈರಿಸಂಶಯಹರ ಗೋಪಾಂಸು ಲಿಪ್ತಾಂಗ ಹಿಮಾಂಶುಕುಲೇಶ ಭವಶರಧಿನಾಶ 3ಭೈಷ್ಮೀ ಸತ್ಯಾರಮಣ ಭೂಷಿತ ಅಖಿಳಾಭರಣದ್ವೇಷಕೃತ ದಮಘೋಷಜಹರ ಮಹೀಶೆಜÕ ಭೋಕ್ತಾಗ್ರೇಸರ ಶಕ್ತ 4ಸ್ವಾಮಿ ತೀರ್ಥಕರ್ತ ಕಾಮಿತ ಫಲದಾತಸ್ವಾಮಿ ಪ್ರಸನ್ವೆಂಕಟಾಮಲಮೂರ್ತಿನಾ ಮೊರೆಹೊಗುವೆ ಪ್ರೇಮದ ಪ್ರಭುವೆ 5
--------------
ಪ್ರಸನ್ನವೆಂಕಟದಾಸರು