ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾರಿ ಚೆಲ್ಯದ ನೋಡಿ ಹರಿರೂಪದ ಮಹಿಮ ಧ್ರುವ ತುಂಬಿ ತುಳುಕುತದೆ ಕುಂಭಿನಿಯೊಳು ಪೂರ್ಣ ಇಂಬುದೋರುತಲ್ಯದೇ ಡಿಂಬಿನೊಳಗೆ ತನ್ನ ಹಂಬಲಿಸಿ ನೋಡಿರ್ಯೋ ಗುಂಭ ಗುರುತವ 1 ಬಳೆದುಕೊಂಬುವಂತೆ ಹೊಳೆವುತದೆಲ್ಲ ಕಡಿಯ ಥಳಥಳಗುಡುತ ಸುಳುವು ತೋರುತಲ್ಯದೆ ಝಳಝಳಿಸುವ ಪ್ರಭೆ ಮಳೆಮಿಂಚುಗಳು 2 ಇಡಿದು ತುಂಬೇದ ನೋಡಿ ಅಡಿಗಡಿಗಾನಂದದಲಿ ಅಡಿಮೇಲು ತಿಳಿಯದೆ ಎಡಬಲದೊಳಾದ ಮೂಢ ಮಹಿಪತಿ ಪ್ರಾಣ ಬಿಡದೆ ಸಲಹುತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು