ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈತನೀಗ ವಾಸುದೇವನು ಲೋಕದೊಡೆಯ ಈತನೀಗ ವಾಸುದೇವನು ಪ ಈತನೀಗ ವಾಸುದೇವನೀ ಸಮಸ್ತ ಲೋಕದೊಡೆಯ ದೂತಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ ಅ ದನುಜೆಯಾಳ್ದನಣ್ಣನಯ್ಯನ ಪಿತನ ಮುಂದೆ ಕೌರವೇಂದ್ರನನುಜೆಯಾಳಿದವನ ಶಿರವ ಕತ್ತರಿಸುತ - ತನ್ನಅನುಜೆಯಾಳಿದವನ ಬೆಂಕಿ ಮುಟ್ಟದಂತೆ ಕಾಯ್ದ ರುಕ್ಮನನುಜೆಯಾಳಿದವನ ಮೂರ್ತಿಯನ್ನು ನೋಡಿರೊ1 ನರನ ಸುತನರಣ್ಯದಲ್ಲಿ ಗಿರಿಯೊಳ್ನಿಂತು ತನ್ನ ರೋಷದಿಶರಗಳನ್ನು ತೀಡುತಿಪ್ಪನ ಯೋಚಿಸಿಭರದಲವನ ಕರೆದು ಕುರುಹು ತೋರಿ ಪತ್ರವನ್ನು ಹಾರಿಸಿದವನಶಿರವನ್ನು ಛೇದಿಸಿದ ದೇವ ಕಾಣಿರೊ 2 ವೈರಿ ತೊಡೆಯ ಛೇದಿಸೆಂದು ಬೋಧಿಸಿಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉ-ತ್ಕøಷ್ಟ ಮಹಿಮನಾದ ದೇವ ಕಾಣಿರೊ 3 ಕ್ರೂರವಾದ ಫಣಿಪಬಾಣವನ್ನು ತರಣಿಜನೆಚ್ಚಾಗವೀರ ನರನತ್ತ ಬಪ್ಪುದನ್ನು ಈಕ್ಷಿಸಿ ಧಾರಿಣಿಯ ಪದದೊಳೌಕಿ ಚರಣಭಜಕ ನರನ ಕಾಯ್ದಭಾರಕರ್ತನಾದ ದೇವನೀತ ಕಾಣಿರೊ4 ವ್ಯೋಮಕೇಶನಿಪ್ಪ ದೆಸೆಯ ಸರ್ವ ಜಗಕೆ ತೋರುತಸಾಮಜವನೇರಿ ಬಹನ ಶಕ್ತಿಯನೀಕ್ಷಿಸಿಪ್ರೇಮದಿಂದ ಉರವನೊಡ್ಡಿ ಡಿಂಗರಿಗನ ಕಾಯ್ದ ಸಾರ್ವ-ಭೌಮ ಬಾಡದಾದಿಕೇಶವನ್ನ ನೋಡಿರೊ 5
--------------
ಕನಕದಾಸ
ಪಾದ | ಭೃಂಗನು ಎನಿಸುವಡಿಂಗರಿಗನೆ ಧನ್ಯನೊ ಪ ಧೃತ :ಅಂಗಜನಪಿತ ಕಾ | ಳಿಂಗ ಮರ್ದನತುಂಗ ಮಹಿಮನಪಾಂಗ ಕರುಣನಡಿಂಗರಿಗೆ ಅಭಯಾಂಕ ಹಸ್ತನರಂಗನಂಘ್ರಿ ಸರೋಜ ಭೃಂಗನ ಅ.ಪ. ಮೇದಿನಿ | ಮೌನಿವರ ವರದೇಂದ್ರ ಯತಿಯಲಿ |ಸಾನು ರಾಗದಿ ಜ್ಞಾನವಾರ್ಜಸಿ | ಜ್ಞಾನ ನಿಧಿ ಎಂದೆನಿಸಿ ಮೆರೆದ 1 ವಿಜಯರ ನಿಂದೆಯಿಂದ | ಸಂದಿತು ರೋಗವುನಿಜತನು ತ್ಯಜಿಸುವಂತೇ ||ಅಜನ ನಿಜಪದ ಯೋಗ್ಯ ಪ್ರಾಣನು | ಬಿಜಯಗೆಯ್ಯುತನಿಜ ಸುಸ್ವಪ್ನದಿ |ವಿಜಯದಾಸರ ಪೂಜಿಸೆನ್ನಲು | ಭಜಿಸುತಲಿ ವರವನ್ನೆ ಪಡೆದ 2 ತ್ಯಾಗೀ ಭೋಗೀ ಶೀಲ | ವಿಜಯರ ಸೇವಕಭಾಗಣ್ಣಾರ್ಯರ ಸೇವಿಸೀ ||ಆಗಮಜ್ಞನ ನಾಲ್ದಶಾಯು | ಭಾಗ್ಯವನೆ ತಾಪಡೆದು ಚಂದ್ರಭಾಗದಲಿ ಮೀಯುತಿರೆ ಶಿರಿ | ಜಗದೀಶ ವಿಠಲಾಂಕ ಪಡೆದ 3 ಸ್ವಾದಿ ಸ್ಥಳಕೆ ಪೋಗಿ | ರಾಜರ ಆಜ್ಞೆಯ ಆದರದಲಿ ಕೊಳ್ಳುತಾ ||ಮೋದ ತೀರ್ಥರ ಮತವ ಸಾರುತ | ವೇದ ಶಾಸ್ತ್ರ ಸುಧಾದಿ ಗ್ರಂಥದಸ್ವಾದುರಸ ಪ್ರಾಕೃತದಿ ಬೋಧಿಸಿ | ಶ್ರೀ ಹರಿಕಥೆ ಸುಧೆಯ ಗರೆದ 4 ಲಕ್ಷ್ಯವಿಡುತ ಶುಕ್ಲ | ವರ್ಷವು ಸಿತವೆನ್ನಪಕ್ಷ ಭಾದ್ರ ಪದದೀ ||ದಕ್ಷಿಣಾಯನ ಶುದ್ಧನವಮಿಲಿ | ದೀಕ್ಷೆ ಪಿಡಿಯುತ ಆದಿವಾರದಿಪಕ್ಷಿವಹ ಗುರು ಗೋವಿಂದ ವಿಠಲನ | ಈಕ್ಷಿಸುತ ಭುವಿಯನ್ನೆ ತೊರೆದ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪೊರೆಯಲಿದು ಸಮಯ ಗೋವಿಂದ ದೇವ ಶರಣರಕ್ಷಕ ನೆಂಬ ಬಿರುದು ಮೆರೆದ ಮುಕುಂದ ಪ ಬಂಧನದ ಭವದೊಳಗೆ ನಾನೊಂದು ದಿನ ಸುಖವನರಿಯೆ ಮಂದ ಮತಿಯಲಿ ತೊಳಲಿ ಕಂದಿಕುಂದಿ ಮುಂದು ಗಾಣದೆ ಯಮನ ಬಂಧದೊಳು ಸಿಲುಕಿದನು ಮಂಧರಧರ ಕರುಣಸಿಂಧು ನೀ ಬಂದು 1 ಘೋರ ತಾಪವು ಬಂದು ಸಾರಿ ಎನ್ನನು ಮುಸುಕೆ ಭೋರ ನುರಿಯಲಿ ಬಳಲಿ ಚೀರಿಹಾರಿ ದುರಿತ ವಾರಿಧಿಯೋಳ್ ಬಿದ್ದು ಬಾಯಾರಿ ಮೊರೆಯಿಡುವೆ ನರಕಾರಿ ದಯತೋರಿ 2 ತಂಡತಂಡದಿ ವೈರಿಗಳು ಕೂಡಿ ಕಾಯದೊಳು ಅಂಡುಗೊಂಡೆನ್ನಳೆದು ತಂದು ಕೊಂಡು ಹಿಂಡು ಖಂಡವನು ಸುಟ್ಟುರುವಿ ನುಂಗುವರೆನುತ ಕಂಡು ಕೊಂಡಾನು ಸಾರಿದೆನಿಂದು ಬಂದು 3 ತರಳತನ ದಾಯಸದÀಲಿ ನೊಂದೆ ಮುನ್ನಬಲು ತರುಣಿಯರ ಸಂಗದಲಿ ಮರುಳಾದೆನು ಜರೆಬಂದು ಮುಸುಕಿ ಕಣ್ಗಾದೀ ಪರಿಯಭವ ಶರಧಿಯೊಳು ಮುಳುಗಿ ಮೊರೆಯಿಡುವ ಚಿನ್ಮಯನೆ 4 ಹಿಂಗದಿದು ಭಯವ ಪೇಳಲು ತೀರದೆನಗೆ ಶ್ರೀ ರಂಗನಿನ್ನಧೀನ ಜನವರಿಯಲೂ ಮಂಗಳಾತ್ಮಕ ವಾಯುಜನ ಕೋಣೆ ಲಕ್ಷ್ಮೀಶ ನಿನ್ನ ಡಿಂಗರಿಗನ ಕಾಯ್ವುದೀಗ ಸಮಯ ಕೃಪಾಳೋ 5
--------------
ಕವಿ ಪರಮದೇವದಾಸರು
ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತುಶುದ್ಧ ಶ್ರುತಿ ಪದ್ಧತಿ ನಡೆಸುವೆ ಮಧ್ವೇಶಾರ್ಪಣಮಸ್ತು 1 ವಂದಿಸುವೆನು ಗೋವಿಂದನ ಚರಣಕೆ ಮಧ್ವೇಶಾರ್ಪಣಮಸ್ತುನಿಂದು ಕರಂಗಳ ವಂದಿಸಿ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು 2 ಅಂಬುಜನಾಭನ ನಿತಂಬಿನಿ ಕಮಲಕೆ ಮಧ್ವೇಶಾರ್ಪಣ ಮತ್ತುಡಿಂಗರಿಗನು ನಾಜಗದಂಟೆಯ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು 3 ಸಂಧ್ಯಾದೇವಿಗೆ ವಂದಿಸುತಿರುವೆನು ಮಧ್ವೇಶಾರ್ಪಣಮಸ್ತುಒಂದಿನ ಬಿಡದೆ ತ್ರಿಕಾಲದಿ ಮಧ್ವೇಶಾರ್ಪಣಮಸ್ತು 4 ಚಾಮರ ಹಾಕುವೆ ಶ್ರೀಮನೋಹರಗೆ ಮಧ್ವೇಶಾರ್ಪಣಮಸ್ತುಕೋಮಲ ಶಯನದಿ ಮಲಗಿಸುವೆನು ಮಧ್ವೇಶಾರ್ಪಣಮಸ್ತು 5 ಕೃಷ್ಣನ ಮಲಗಿಸಿ ತೊಟ್ಟಿಲ ತೂಗುವೆ ಮಧ್ವೇಶಾರ್ಪಣಮಸ್ತುಬಿಟ್ಟು ಅಭಿಮತ ಘಟ್ಟಿಸಿ ಪಾಡುವೆ ಮಧ್ವೇಶಾರ್ಪಣಮಸ್ತು 6 ಪರಿ ತೂಗುವೆ ಮಧ್ವೇಶಾರ್ಪಣಮಸ್ತುಗುರು ಪುಷ್ಕರ ಮುನಿ ಸುರದ್ವಾರದಿ ಮಧ್ವೇಶಾರ್ಪಣಮಸ್ತು 7 ಕರ್ಮವು ಸಿರಿಯಂದು ಹರಿಗರ್ಪಿಸುವೆ ಮಧ್ವೇಶಾರ್ಪಣಮಸ್ತುದಾಸರ ಚರಣಕೆ ಶಿರಬಾಗುವೆ ನಾ ಮಧ್ವೇಶಾರ್ಪಣಮಸ್ತು 8 ಕೃತಿ ಇಂದಿರೇಶಗರ್ಪಿಸುವೆ ಮಧ್ವೇಶಾರ್ಪಣಮಸ್ತು ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತು 9
--------------
ಇಂದಿರೇಶರು
ಮೀನಾಕ್ಷಿದೇವಿ ಮಾಮಮ ಮಧುರ ಪ ಸದಾ ನಿನ್ನ ಆನತರಿಗೆ ಡಿಂಗರಿಗನು ನಾನಮ್ಮ ಅ.ಪ ಬಹು ಜನ್ಮದಿಂದ ಮಾಡಿದ ಪುಣ್ಯ ವಿಹಿತ ಫಲದಿಂದ ತವಪದ ಪಂಕೇ ರುಹವ ಕಂಡೆನು ಇಂದಿಗಹಹ ಧನ್ಯನು ನಾನು 1 ಕಲುಷವಿರಹಿತೆ ಕರಪಿಡಿದೀ ಜಲಜಾಕ್ಷನಡಿದಾವರೆಗಳ ತೋರಮ್ಮ 2 ದಾಸರ ದಾಸ್ಯವನು ಕರುಣಿಸಿ ಲೇಸುಪಾಲಿಸೆ ಸುಂದರೇಶನರ್ಧಾಂಗಿಯೆ 3 ಹಿರಿಯರಿಗೆಲ್ಲಾ ವರಗಳ ಕೊಟ್ಟು ಪೊರೆದುದನೆಲ್ಲ ಕೇಳಿ ನಿನ್ನ ಚರಣವ ನಂಬಿದೆ ಸ್ಥಿರ ಮನವನು ಕೊಡೆ 4 ತಾಮಸನರನು ಬಾಲಕನೆಂದು ಪ್ರೇಮದಿ ನೋಡೆ ಗುರುರಾಮ ವಿಠಲನ ತಂಗಿ5
--------------
ಗುರುರಾಮವಿಠಲ
ಹೂವ ತರುವರ ಮನೆಗೆ ಹುಲ್ಲ ತರುವೆ ಪ ಆವ ಪರಿಯಲಿ ಸಲಹೊ ದೇವ ಚಿನ್ಮಯನೆ ಅ ಈರೇಳು ಜನ್ಮದಿಂ ದಾಸನಾಗಿಹೆ ನಾನುಸೇರಿದೆನೊ ತವ ಶರಣರ ಸೇವೆಗೆಘೋರ ದುರಿತಗಳೆಂಬ ವಾರಿಧಿಯ ಬತ್ತಿಸಿನಾರಸಿಂಹನೆ ಕಾಯೊ ನಮ್ಮ ಕುಲಸ್ವಾಮಿ 1 ರಂಗನಾಥನೆ ನಿನ್ನ ಡಿಂಗರಿಗನೋ ನಾನುಡಂಗುರವ ಹೊಯಿಸಯ್ಯ ದಾಸನೆಂದುಭಂಗಪಡಿಸದೆ ನಿನ್ನ ಶರಣರೊಳಗಿಂಬಿಟ್ಟುಗಂಗೆ ಜನಕನೆ ಕಾಯೊ ಚರಣಕ್ಕೆ ಶರಣು 2 ಎಷ್ಟು ಮಾಡಲು ನಿನ್ನ ಬಂಟನೋ - ವೈಷ್ಣವರಹುಟ್ಟು ದಾಸಿಯ ಮಗನು ಪರದೇಶಿಯೋಸೃಷ್ಟಿಗೊಡೆಯ ಕಾಗಿನೆಲೆಯಾದಿಕೇಶವನೆ - ಕೈಬಿಟ್ಟೆಯಾದರೆ ನಿನಗೆ ಹರಿದಾಸರಾಣೆ 3
--------------
ಕನಕದಾಸ