ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೆನ್ನನು ಪಾಹಿ ಪಾರ್ವತೀಶ ಈಶ ಕಾಲಕರ್ಮವಿದೂರಪಾಪನಾಶ ಪ ಪರಮ ಪುರುಷ ಪರೇಶ ಪರಮಾತ್ಮ ಪರಿಪೂರ್ಣ ವರ ಪರಂಜ್ಯೋತಿ ರೂಪಾತ್ಮನೇ ಕರಿ ಚರ್ಮಧರ ಭಸ್ಮ ಭೂಷಣ ದಿಗಂಬರನೇ ಶರಣು ಜನಸುರಧೇನು ನಿಸ್ಸಂಗನೇ 1 ಉಮೆಯರಸ ಪಂಚವದನ ನಿರ್ಮಲನೆ ವಿಮಲತರ ಗಂಗಾಜೂಟಧರನೇ ಅಮಿತಬಲ ವೃಷಭವಾಹನನೆ ಶಾಶ್ವತನೆ ಕಮಲ ಪಿತ ಸುತ ಹರನೇ ಶಿವರೂಪನೇ 2 ವರವ್ಯಾಘ್ರ ಚರ್ಮಧರ ಇಂದುಶೇಖರ ಹರನೆ ಕರದಿ ಡಮರುಗಧರನೇ ಶೂಲ ಪಾಣಿ ಮೆರೆವ ನಾಗಾಭರಣ ಗಿರಿಜೆವರ ಯೋಗೀಶ ಮೂರ್ತಿ ಶ್ರೀ ಶಂಭು ಶಂಕರನೆ 3
--------------
ಕವಿ ಪರಮದೇವದಾಸರು