ಒಟ್ಟು 76 ಕಡೆಗಳಲ್ಲಿ , 45 ದಾಸರು , 69 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಷರ ಮಾಲಾ ಅದ್ವೈತ ಅಗಣಿತಆದ್ಯಂತ ರಹಿತಇಹ ಪರಕೆ ವರ್ಜಿತಈಶ್ವರಯ್ಯ |ಉದಯಾಸ್ತಗಳಿಲ್ಲಊ(ಉ)ಚ್ಚ ನೀಚಗಳಿಲ್ಲಋಷಿಯ ಮೂಲವ ಬಲ್ಲವರಾರಿಲ್ಲಲೃ ಚೇಕಗಳಿಲ್ಲಲñ ಗಳಿಲ್ಲಏಕಮೇವ ತಾನೆಲ್ಲಐಕ್ಯ ಮೊದಲಿಗಿಲ್ಲ ಸೌಖ್ಯಾನಂದಓದಲಿಕೆ ಅಳವಲ್ಲಔದಾಸೀನ ಶೀಲಅಂತ ತಿಳಿಯದು ಬಹಳಅ:(ಹ)ರ್ನಿಶಿಯಲಿ || ಹರ ಹರಾ ಮಹಾದೇವ ಶಿವ ಶಿವ ಮಹಾದೇವ ಶಂಕರಾ ಮಹಾದೇವ ದೇವ ದೇವಾ 1 ಕರುಣ ಸಾಗರ ಗುರುವೆಕಾರುಣ್ಯ ಮೂರ್ತಿ ನೀಕಿರಣ ಕೋಟಿ ಪ್ರಕಾಶ ಮಹಿಮ ಕೀರ್ತಿ ನಿಮ್ಮದು ಬಹಳಕುಳಿತಲ್ಲಿ ನಿಂತಲ್ಲಿಕೂ(ಖೂ)ನ ನಾ ತಿದ್ದದೆ ಕಾಲಿಲೊದ್ದುಕೇಳಿ ಬಂದೆನು ಮಹಿಮೆಕೈ ಮುಗಿದು ಶರಣೆಂಬೆಕೋಟಾಳ (ಕೋಟಲೆ) ನಮ್ಮದು ಬಿಡಿಸು ದೇವಾಕೌ (ಕವಿ)ದು ಕೊಂಡಿದೆ ಮಾಯೆಕಂಬನಿಯ ತೆರೆ ಗುಡಿದುಕಃ(ಷ)ಷ್ಟ ಕಷ್ಟ ಜನ್ಮ ಬಹಳ ಕಷ್ಟ || ಹರಹರಾ 2 ಖಳರ ಸಂಗತಿಯಿಂದಖಾತಿಗೆ ನಾ ಬಿದ್ದೆಖಿನ್ನನಾದೆ ಅಳುಕಿ ಭಿನ್ನನಾದೆ ಖೀ(ಕೀ) ಸುತಿದೆ ಬಲು ಬಯಕೆಖುರ ಖುರಿ ಗುಟ್ಟುತಲಿಖೂನ ತೋರಿಸಿ ನಮ್ಮ ಕಡೆದಾಟಿಸು ಖೇದವನು ಬಡಲಾರೆಖೈರದ ಮನೆಯಲಿಖೋಡಿತನ ನಮ್ಮದು ಬಿಡಿಸು ದೇವ ಖೌ(ಖವ)ಟ ಮನವನು ಬಿಡಿಸಿಖಂ ಮಗೆ (ಖಮಂಗ) ಮಾಡಯ್ಯಖಃಖಃ ಎನುತಲಿ ಕೆಮ್ಮಲಾರೆ || ಹರಹರಾ 3 ಗದ್ದಲ ಮನದಿಂದ ತಿದ್ದಲಾರದೆ ಹೋದೆಗಾವಿಲ ನಾನಾದೆ ಕರುಳನಾದೆಗಿರಿಜೇಶ ನೀ ಕೇಳು ಪ್ರಳಯಕ್ಕೆ ಒಳಗಾದೆ ಉಳಿದುಕೊಂಡರೆ ನಿಮ್ಮ ಮರೆಯೆನೆಂದು |ಗೀತ ಹಾಡಿದರೇನು ನಾಥನನು ಕೊಳಲಿಲ್ಲ ಪ್ರೀತಿಗಳು ನಡಲಿಲ್ಲ ಗುರುವಿನಲ್ಲಿ | ಗುಣಕರ್ಮಕಾಡುತಿದೆ ಗೂಳಿಯನೆ ಮಾಡುತಿದೆ ಗೆಲವ ಹಾದಿ ಬಯಲ e್ಞÁನವಿಲ್ಲ |ಗೈಯಾಳ ತನದಿಂದ ಹೈಯಾಲಿಕೆಗೆ (ಹುಯಿಲಿಕೆಗೆ) ಬಿದ್ದು ಗೊಡ್ಡತನ ಎಷ್ಟೆಂತು ಹೇಳಲಯ್ಯಗೌಪ್ಯದ ಮನೆಯೊಳಗೆಗಂಭೀರತನ ಬಿಟ್ಟುಗಃ(ಗಾಹ)ಳ ಹರಿಸೊ ಬಹಳ ಕೃಪೆಯಿಂದಲಿ || ಹರಹರಾ 4 ಘ(ಗ)ಳಿಸಲಾರೆನು ಪರವುಘಾ(ಗಾ)ಳಿಯಾಗಿದೆ ಮನಸುಘಿಲಕೆಂದರೆ ಬೆದರಿಘೀರಿಡುತಲಿಘುಮ್ಮರಿ ಸಿಕ್ಕುತದಘೂ(ಗೂ)ಳಿ ಸೊಕ್ಕಿದ ಹಾಗೆ ಘುರಘೂರಿಯ ತಪ್ಪಿಸಿಹರವ ಮಾಡು ||ಘೇರಿ ಬಂದೆರಗಿತುಘೃರಿಸುವರಿನ್ನಾರುಘೋರದಲಿ ಮುಳುಗಿದೆ ತಾರಿಸಯ್ಯಘೌ(ಗೌ)ರವನು ಮಾಡೆನಗೆಘಂಮನೆ ವರವಿತ್ತುಘಃ(ಘಾ)ಸಿಯಾಗಿಸಬೇಡ ಯಮನ ಬಾಧೆಯಲಿ || ಹರಹರಾ 5 e್ಞÁನದ ಹಾದಿಯಿಲ್ಲ ಅ-e್ಞÁನಿ ನಾನಾದೆ ಸ್ವಾನುಭವವೆಂದರೆ ಏನೋ ಎಂತೋe್ಞÁನವೆಂದರೆ ದೀಪ ಬೆಳಕಿಲಿ ನೋಡಿಪ್ಪe್ಞÁನದ ಸ್ವರೂಪ ಸಾರ ಗುಹ್ಯ e್ಞÁನಿ ಸಂಗದ ಗೋಷ್ಟಿe್ಞÁನಿಗೇ ಪರಿಪಾಟಿe್ಞÁನಿಯೆಂದರೆ ಕೋಟಿ ಕೋಟಿ ಪುಣ್ಯ e್ಞÁನಕ್ಕೆ ಸರಿಯಿಲ್ಲe್ಞÁನಿಯಾದವ ಬಲ್ಲe್ಞÁನಿಯೆಂದರೆ ಕಲ್ಲು ಹಾಕುತಾರೆ || ಹರಹರಾ 6 ಚರಣವನು ಪಿಡಿಯಾದೆಚಾರ್ವಾಕ ನಾನಾದೆಚಿರಕಾಲ ಬದುಕುವಚೀ(ಚಿ)ಹ್ನ ವಿಲ್ಲ ಚುಲಕ ಬುದ್ಧಿಯ ಹಿಡಿದುಚೂಕ (ಚುಕಾ)ರಾದೆನು ಬಹಳಚೇರಿಗೇಡಿತನವನು ಬಿಡಿಸು ದೇವಾ |ಚೈತನ್ಯನೆಂಬವನು ಒಳ ಹೊರಗೆ ಐದಾನೆಚೋರತನವನು ಮಾಡಿ ಕದ್ದನನ್ನಚೌಖಂಡಿ ಒಡೆದನೊಚಂನಾಗಿ ಹಗಲವೆಚಃ(ಚಾ)ಡಿ ನೋಡುತಲಿದ್ದೆ ಉಲವಿಲ್ಲವು ಹರಹರಾ 7 ಛಲದ ಬುದ್ದಿಯ ಹಿಡಿದುಛಾನಸ ನಾನಾದೆಛಿಛೀ ಎಂದರು ಸಾಧು ಜನರುಛುಲಕತನಕೆಲ್ಲಛೂರಿಯನೆ ಹಾತುತಲಿಛೇದಿಸಲು ತಡವಿಲ್ಲಛೈ ತಾಳಿಸಿಛೋದವನು ಬಡುವರು ಭಕ್ತರಾದವರೆಲ್ಲಛೌಕಂಠ ನಮ್ಮಯ್ಯ ಕೂಡಿಕೊಂಡಛಂದಾಗಿ ಸಲಹಯ್ಯ ಆನಂದ ಪದವಿಯ ಕೊಟ್ಟುಛತ್ರವನು ಮೇಲಿಟ್ಟು ಛಃ(ಛಾ)ಯ ವಾಗೋ ಹರಹರಾ 8 ಜಪ ತಪಗಳ ನಾ ಮಾಡಿಜಾಗ್ರತ ನಾನಾದೆಜಿತೇಂದ್ರಿಯಾದೆನೊಜೀವದಿಂದ ಜುಗಳನೆಲ್ಲವನುಜೂಜನಾಡಿ ಗೆದ್ದೆಜೇನವನಿಕ್ಕಿದೆ ನೆಲಕಬ್ಬಿಗೆಜೈ ಜಯಾಕಾರವನು ಜಗವೆಲ್ಲ ಮಾಡುವರುಜೋಗುಳ ಹಾಡುವರು ಪ್ರೇಮದಿಂದಜೌನಾಗಳೆ (ಯೌವನಾಗಲೆ) ಹೋಗಿಜಂಬುಲಿಂಗನ ಕೂಡಿ ಜಃ(ಹ)ಜ ನಾಡಿ ಹರಹರಾ 9 ಝ(ಜ)ಳಕವನು ಮಾಡಿದೆಝಾರಿ ಬ್ರಹ್ಮನ ಕೈಯ ಉದಕವೇ ಉಷ್ಣವನು ಬಿಡಿಸಿತಲ್ಲಝಿಂಜ ಬೀಜ ಮಲ ತೊಳೆದುಝೀ ಎಂಬ ಖಣಿಯೊಳಗೆಝುಣಿಝೂಣಿಸುವನಾದಝೇಲಿಸಿಕೊಂಡಝೈಯ ರಾಗದ ಯೋಗಝೋತಿ ಮಾಡಲಿ ಬೇಕುಝೌಗರದ ಒಳ ಮೊಲಿಯ ಭಾರಿಡುತಲಿ ಝಂಮನೊದಗಿತು ಮೇಘ ಝಳಮಳ ಮಿಂಚೇರಿಝಃಗ ಝಗಿಸುವ ದಿವಾ ರಾತ್ರಿಯಲಿ ಹರಹರಾ 10 ಟಕಮಕನೆ ನೋಡ್ಯಾಡಿಟಾಳಿ ಬಲಿತು ಕೊಂಡ ಹೊತ್ತರು ಆತ್ಮe್ಞÁನಿಗಳು ಟೀಕು ಆಯಿತು ಹೀಗೆಟುಕಿಲಿ ತಿಳಕೊಳ್ಳಿಟೂಕ ಮಾಡಲಿ ದೇಹ ಮೋಕ್ಷವಿಲ್ಲ ಟೇಕದ ಮೇಲೇರಿ ಜಾರಿ ಬಿದ್ದರೆ ಕೇಡುಟೈಳತನದಲಿಟೊಂಕ ಮುರಿದುಕೊಂಡಟೌಕರಕ ಗತಿಗಾಣಟಂಮನೆ ಕೆಲಸಕ್ಕೆಟಃ(ಟಾ)ಹ ಬಡೆವವರಿಲ್ಲ ಹುಟ್ಟಮೂಕಗೆ ಹರಹರಾ 11 ಠಮಕದಲಿ ದಂಭಕಗಠಾವಿಕ್ಯಾಗಲು ಶಿವನುಠಿಸಳ ಮನದವನುಠೀವಿ ಹೊಕ್ಕ ಠುಮಠೂಮಿಗುಟ್ಟುತಲಿಠೇವೇನೆ ಕಳಕೊಂಡಠೈ(ತೈ)ಳ ಬುದ್ಧಿಯ ಲಂಡ ಸಾಕುಸಾಕುಠೊಂಬಿಯ ಮತದವನುಠೌಳಿಕಾವನು ಬದ್ಧಠಂಮೆಂದರೆ ನಮ್ಮರಸು ಸಿಕ್ಕಠಃ (ಠಾ)ವು ಬಲ್ಲಿದವನಲ್ಲ ಠಾಣೇ ಕುಳಿತವನಲ್ಲ ಠಾಕುರಾಯಿಕಾದು ಗೋವ ನಾದ ಹರಹರಾ 12 ಡಗಳ ಮುದ್ರಿಯ ಹಾಕಿಡಾಗಿನ ಪಶುವಾಗಿಡಿವರಿ ಎಂದರೆ ಖೋ ಎನುತಲಿ ಡೀಂಗರಿಗಲ್ಲದೆಡುರುಕು ಹಾಕುತಲಿದೆಡೂ(ಡು)ಳಿಕಿಸುತಲಿಹ ಸೊಕ್ಕಿನಲ್ಲಿ ಡೇಗಣಿ ಕಟ್ಟದೆಡೈಳತನ ಹೋಗದುಡೊಂಗ ತಟ್ಟಿದ ಬಳಿಕ ನೋಡು ಅಳುಕಡೌಲಿಸಿದ ಮಡವಿನಲಿ ನೀರ ಕುಡಿಯಲು ಹೋಗಿಡಂಕ ಮೊಸಳಿಯ ಕಂಡುಡಃ(ಡ)ಳಮಳಿಸಿತು ಹರಹರಾ 13 ಢಣಿಢಣಿಸುವ ಜ್ಯೋತಿಢಾಳಾಗಿ ತೋರುತದೆಢಿಳಿಗ್ಯಾತಕ ಹೋದಿ ಇಲ್ಲಿ ನೋಡು ಢೀಗು ಬಿದ್ದ ಮುನ್ನೆಢುಮಿಢೂಮಿಗುಟ್ಟುತಲಿಢೇಕರವ ಕೊಟ್ಟುಂಡು ತೃಪ್ತನಾಗೊ ಢೈಯಾಳಿತನದಿಂದಢೋಗರ ಬೀಳಲಿ ಬೇಡಢೌಳಿ (ಡೌಲು) ಮಾಡಲಿ ಬೇಡ ಸಾಧುರೊಳಗೆ ಢಂಮನಾಗಿರ ಬೇಡ ಅಹಂಕಾರ ತಲೆಗೇರಿಡಃ(ಢಾ)ಣಕ ನೀಗವಲ್ಲದೆ ಬಳಲುವಿ ಹರಹರಾ 14 ತವನಿಧಿಗಳ ನೋಡುತಾರಕ ಬ್ರಹ್ಮನ ಕೂಡುತಿಳಿದವನು ನೀ ನೋಡುತೀಂ(ತಿ)ತಿಣಿಯನು ತುಂಬಿ ಕೊಂಡಿದೆ ನೋಡುತೂ (ತು)ಳಕುವ ತೆರೆ ನೋಡುತೇಲಿ ಬರುತದೆ ನೋಡುತೈ ಧಾಂಗೆ (ತೆಯ್ಧಾಂಗೆ)ತೊಳೆದ ಮುತ್ತನು ನೋಡುತೌರಮನೆಯನು (ತವರಮನೆಯನು) ಕೂಡುತಂದೆ ಶಿವರಾಯನ ಆನಂದ ನೋಡುತಃ(ತಾಹ) ಕುಡುತದೆ ನೋಡು ಬಹಳ ಅಭ್ಯಾಸ ಮಾಡುದೇಹವಳಿದು ಆತ್ಮನೊಡಗೂಡು ಹರಹರಾ 15 ಥರ ಗೊಳಿಸುವ e್ಞÁನಸ್ಥಾ(ಸ್ಥ)ಳವ ಶುದ್ಧ ಮಾಡುಸ್ಥಿರವಾದ ಮನಸಿನ ಸೂತ್ರವಿಡಿದುಸ್ಥೀ(ಸ್ಥಿ)ತಿ ಉತ್ಪತ್ತಿ ಪ್ರಲಯ ಮೀರಿದ ಮುಹೂರ್ತದಲಿಕೇಸರಗಳ ಹಾಕಿದರು ಯೋಗಿಗಳು ಉಪ್ಪಾರ ಈಶ್ವರಣ್ಣ ಬಡಿಗೇರಬೊಮ್ಮಣ್ಣ ಕಟ್ಟಲೀ ಜಾಣರು ಸೃಷ್ಟಿರಚನಾ ಮುಟ್ಟಿತು ಮುಗಿಲಿಗೆ ದಟ್ಟಿಸಿತು ಭೂಮಿಗೆಪಟ್ಟದರಸನು ನಮ್ಮ ಗುರುರಾಯನು ಹರಹರಾ 16 ದಗಿಯ ಬೀಳಲಿ ಬೇಡದಾ(ದ)ಯದ ಮನೆಯನು ಗಳಿಸುದಿನ ದಿನಕ ಭಕ್ತಿಯಿಂದೀರ್ಘವಾಗಿದುಗುಣಿಸಿದ ಪ್ರೇಮಗಳುದೂರ ಬೀಳದ ಹಾಗೆದೇವರಿಗೆ ಅರ್ಪಿಸಿದೈವ ಪಡೆಯೊ ದೊರಕೊಂಬ ತಡವೇನುದೌಲಿತನ ಹೋದರೆದಂಭವೆಂಬುದು ಎಲ್ಲದಃ(ಹ)ನವಾಗಿ ದಾವ ದರಶನದೊಳಗೆ ದೇವದರ್ಶನ ಮೇಲು ನೀನ್ಯಾಕ ಕೊಳವಲ್ಲಿ ಏನು ಬಂತೋ ಹರಹರಾ... 17 ಧನಕೆ ಹೆಣಗಲಿ ಬೇಡಧಾರುಣಿಗಂಜ ಬೇಡಧಿಗಿ ಧಿಗಿಗೊಳ ಬೇಡಧೀರನಾಗೊಧುಗಿ ಧುಗಿಸಲಿ ಬೇಡಧೂಳಿ ಕೂಡಲಿ ಬೇಡಧೇನು ಕರೆವುತಲಿದೆ ಸಂತರಲ್ಲಿಧೈರ್ಯವನು ಬಿಡಬೇಡ ಧೊ(ದೊ)ರೆಗೆ ಶರಣೋಗ ಬೇಡಧೌತ ರಂಗದ ಬಿರುದುಧಂಮ ಧಂಮಿಸುತಧಾ(ಧಃ)ಹಕಿಲ್ಲ ಮೃತ್ಯುವಿನ ಸೋಂಕಿಲ್ಲ ಜನ್ಮದ ಏಕಾಂತದಲಿರುತಿಹ ಶಿವಶರಣನು ಹರಹರಾ 18 ನರದೇಹಿ ಆದುದಕೆನಾಗಭೂಷಣನ ಭಜಿಸು ನಮ್ಮನಿª6Éಲ್ಲರಿಗೆ ಮೋಕ್ಷ ನೀರ ಮುಣುಗಲಿ ಯಾಕೆನುಡಿಯ ಬಂಧನವ್ಯಾಕೆನೂರಾರ ಶರಣ್ಯಾಕೆ ಬೆಂಡಾಗುತನೇಮ ಕೊಳಬೇಕ್ಯಾಕೆನೈಷ್ಠಿಯ ಕಟ್ಟಲ್ಯಾಕೆನೊಗನ ಹೊತ್ತಾನಂತ ನೆನಿಸಲ್ಯಾಕೆನೌಸರದ (ನವಸಿಗರ) ಪರಿಯಾಕೆನಂಮಯ್ಯನಗಲಲ್ಯಾಕೆನಃ(ನಾ)ನಾತ್ವವನಳಿದರೆ ಅಷ್ಟೇ ಸಾಕು ಹರಹರಾ 19 ಪರಮ ಗುರುವಿಗೆ ಶರಣುಪಾಪನಾಶನೆ ಶರಣುಪಿರಿದು ಪರಿಣಾಮದ ದೊರೆಗೆ ಶರಣು ಪೀಠದರಸನೆ ಶರಣುಪುಣ್ಯ ಪುರುಷನೆ ಶರಣುಪೂತ ಪಾವನ ಮೂರ್ತಿ ಶರಣು ಶರಣು ಪೇತು ಪತಿಗೆ ಶರಣುಪೈಜ ಗೆದ್ದವಗೆ ಶರಣುಪೊಡವಿ ಕೈಲಾಸದ ನಿಧಿಗೆ ಶರಣುಪೌರೋಹಿತನೆ ಶರಣುಪಂಥ ದುರಿತನೆ ಶರಣುಪಃ(ಪಾ)ರ್ವತಿ ಕಾಂತನ ಪಾದಕ್ಕೆ ಶರಣು ಹರಹರಾ 20 ಫಲವ ಬಯಸಲಿ ಬೇಡಫಾಸಿ (ಪಾಶದಿ) ಬೀಳಲಿ ಬೇಡಫಿರ್ಯಾದಿಗಳ ಹಳಿತಲ ಬೇಡಫೀ (ಫಿ)ತವಿ ಮಾಡಲಿ ಬೇಡಫುಗಸಾಟಿ ಕೆಡಲಿ ಬೇಡಫೂರಸೊತ್ತಿತೆನಬೇಡ ಶಿವ ಶಿವಗೆ ಫೇಡಿ ಮಾಡಲಿ ಬೇಡಫೈಣ್ಯ ಹೂಡಲಿ ಬೇಡಫೋಡಣಿ ಕೊಡಬೇಡ ಸಮುದ್ರಕೆಫೌಗೊಂಡ ಹೂವಿನಫಂಗಡಿಯನೆ ತಂದುಪಃ(ಫಾ)ರ ಪರಮಾತ್ಮಂಗೆ ಅರ್ಪಿಸಯ್ಯ ಹರಹರಾ 21 ಭರವಸವು ನಿನಗೇನುಭಾಗ್ಯ ಬಂದೀತೆಂದುಭಿಕ್ಷೆ ಬೇಡುವಗಿನ್ನುಭೀತಿಯಿಲ್ಲ ಭುವನದೊಳಗಿದಿರಿಲ್ಲಭೂತಾಳ ಕೆಳಗಿರಲಿಭೇದವಿಲ್ಲದೆಭೈರವನು ಕಾವ ಭೋಜನಂಗಿರುತಿಹನುಭೌತ್ಯ ವ್ಯಾಳೆ ಬಂದದಕೆಭಂಗ ಬಡಿಸಿಲಕಿಲ್ಲ ಸಂಗ ಸಿಲುಕಿ ಭಃ(ಭಾ)ಲ ಲೋಚನ ಚಂದ್ರಶೇಖರನ ಸ್ಮರಣೆಗೆ ಭಾರನಿಳುಹಿ ಭೂಮಿಯ ಹೊರಗಾಗಿ ಹರಹರಾ 22 ಮರಣ ಬರುತದೆ ಕೊಮಾರಗಳ ಹಾಕುತಲಿಮಿ (ಮೀ)ರಲಿಕ್ಕಲಿದುಮೀ(ಮಿ)ಥ್ಯಾವಲ್ಲ ಮುನಿಯು ಆದರೆ ಏನುಮೂರು ಕಣ್ಣಿರಲೇನುಮೇರು ಸಹಿತಾಗಿದು ನುಂಗುತದೆ ಮೈಯ ತಾಳಿದ ಬಳಿಕಮೋಕ್ಷ ಪಡೆಯಲು ಬೇಕುಮೌನವ ಹಿಡಿದಂಗೆ ದೇಶ ಭಂಗಮಃ(ಮ)ಹಾ ಪ್ರಲಯಕೆ ಹೊಂದದ ಮಹಾತ್ಮಂಗೆ ಭಯವೇನುಮಹಾದೇವನ ಮೈಯ ಕೂಡಿಕೊಂಡ ಹರಹರಾ 23 ಯದಿಯ (ಎದೆಯ) ಬಲ್ಲಿದನಾಗುಯಾತ್ಯಾತಕಂಜದೆಯಿ(ಈ) ತನೆಯೀ(ಈ)ಶ್ವರನು ಈಶ ಗುಣದಿ ಯುವತಿ ಇದ್ದರು ಏ£4ಯೂ(ಯು)ಗದ ಅಂಜಿಕೆ ಏನುಯೇ(ಏ)ಸೊಂದು ಗ್ರಹಗಳು ಬಂದರೇನುಯೈ(ಐ)ದಿಸಿ ಸಾಯೋಜ್ಯಯೋಗಿಯಾದ ಬಳಿಕಯೌವನಾಗಿರುತಿರಲಿ ಬಹು ವೃದ್ಧನುಯಂ(ಎಂ)ಮ ಬಸವನ ತಮ್ಮನಾಗಲಿಕೆ ಪರಬೊಮ್ಮಯಃಕಾಕಸಾರೆ ನಿಮ್ಮಯೇಕಾಕನಂದ ಹರಹರಾ 24 ರಮಣ ನಾಯಕತೆಯರುರಾಗವನೆ ಮಾಡುವರು ಸ-ರಿಗದಲಿ (ಸರಿಗಮದಲಿ) ಹಾಡುವರುರೀತಿಯಿಂದರುಣಿ ಝಣಿಸುವ ತಂತಿರೂಪದ ಮೃದಂಗರೇಖ್ಯಕೊಳಗಾಗದೆರೈಷಕೂಡಿರೋಮಾಂಚ ಗುಡಿಗಟ್ಟಿರೌದ್ರಾವತಾರದಲಿರಂಗ ದಾರಿಗೆ ಸಿಲುಕಿರಃ(ರಾ)ಹಣ ಒದಗಿ ರಾಯಪಂಚಾಕ್ಷರವ ಪರಶಿವನ ಕೊಂಡಾಡಿವರವ ಪಡೆದರು ಪ್ರತ್ಯಕ್ಷವಾಗಿ ಹರಹರಾ 25 ಲವಲವಿಕೆ ನನಗೆ ಹುಟ್ಟಿಲಾವಕೆ ಹೆಣಗಿದೆಲಿಂಗವನು ಗಳಿಸಿದೆಲೀಲೆ ಗಮನೆಲುಪ್ತವಾದೀತೆಂದುಲೂಟನೆ ಮಾಡಿದೆಲೇಸು ಲೇಸೆಂದರು ಭಕ್ತರೆಲ್ಲ ಲೈಕ್ಯದ ಹೆಸರೇನುಲೋಕದಂತಾಗದೆಲೌಸಡಿಯಿಲ್ಲದೆಲಂಭತನವೇ ಶಂಭುಶಂಕರ ನಿಮ್ಮಲಃ(ಲಾ)ಹಣೆವು ನರಗುಂಟು ಲೋಹ ಪರಿಸಕೆ ತಾಸೋಂಕಿದಂತೆ ಹರಹರಾ 26 ವಶವಾದ ಪರಬ್ರಹ್ಮವಾಸವಾಗಿರಲಿಕ್ಕೆವಿಷಯ ತಪ್ಪಿಸಿದೆನುವೀ(ವಿ)ಪರೀತ ಕೇಳಾ ವು(ಉ)ದಾಸವಿಲ್ಲದೆವೂ(ಉ)ಪರತಿಯ ಹೊಂದದೆವೇದವನು ಫುಂದದೆವೈದಿಕನೆ ಓದಿದ ಫಲವೇನುವೌಂ(ವಂ)ಶಿತ ನಾಗದೆವಂಮನವ ಬೀರದೆ ದೊಡ್ಡತನವೇ ವಃ(ವೋಹ)ಳ ಸೋಹಳವುಂಟು ತಾಮಕರ ದಾಮ ನಂಟುವಾಸುದೇವನ ಗಂಟು ಕಟ್ಟಿಕೊಳ್ಳಿ ಹರಹರಾ 27 ಶಮದಮಗಳಿಂದಶಾಶ್ವತ ಪದಕೇರಿಶಿವನ ಒಲಿಸಿಕೊಂಡಶೀಲಶುಂಡಶೂರ ನಿರ್ಧಾರ ಬಹು ಮೇಲುಳ್ಳವನುದಾರಶೇರಿ ಬಂದನುಶೈವ ಮಾರ್ಗ ಹೊಂದಿಶೋಭನದ ಮನೆಯಿಂದಶೌ(ಸೌ)ಭಾಗ್ಯವಾಯಿತುಶಂಭು ಶಂಕರ ಶರಣು ಸಹಸ್ರ ಶರಣುಶಃ(ಶ)ರಚಾಪವಿಲ್ಲದೆ ಕಾದಿ ಶರಣನು ಗೆದ್ದ ತಿಮಿರನಿದ್ರಿ ಕಣ್ಣು ತೆರೆದ ಹರಹರಾ 28 ಸಕಲ ಶಾಸ್ತ್ರವನೋದಿಸಾಕಾರ ತಿಳಿಯದು ನಿರಾಕಾರ ಎಂಬುದು ಬಹಳ ದೂರಸಿದ್ಧವಾಗಿದ್ದದ್ದುಸೀ(ಸಿ)ಕ್ಕದು ಕೈಯೊಳಗೆಸುಳವಿಲ್ಲ ಕಳವಿಲ್ಲಸೂಕ್ಷ ಘನವು ಸೇರಿ ಬಾರದ ನುಡಿಗೆಸೈರಾವೈರಾವೆಲ್ಲಸೊನೆ ಸೊನೆ........ಸನ್ನಿಹಿತನುಸೌರಸಾ(ಸುರಸ)ವಾದನುಸಂಮ್ಯಗ್ e್ಞÁನವು ಬಲ್ಲಸಃ(ಸಹ)ಜಾನಂದ ತುಂಬನು ಲೌಕಿಕಕ್ಕೆ ಹರಹರಾ 29 ಹರ ಹರಾ ಎನುತಲಿ ಶಿವನಹಾಡಿಕೊಂಡೆಹಿತವು ತೋರಿತು ಘನಾಹೀ(ಹಿ)ತಕಾರಿಗೆಹುಗವರಿ ಕೇಳೊಲ್ಲಹೂ(ಹು)ಸಿಯ ತೀರ್ಥ3ಮಿಂದುಹೇತುವರ್ಜಿತನೆಂದು ಫಲವು ಕೊಂಡಹೈಯೆಂದು ನಿಂತಿತುಹೊಂಗಲ್ಲವಾ ಹಾಡುಗಳುಹಂಸ ಅರಿತುದಿಲ್ಲ ಬಲ್ಲ ತನವೇ ಹಮ್ಮು ನಡಿಯದು ಇಲ್ಲಿಹಃ(ಹಾಹಾ)ಕಾರ ಮಾಡಿದರೆ ಹಸಿದವನು ಉಣಬೇಕು ಬ್ರಹ್ಮರಸವ ಹರಹರಾ 30 ಕ್ಷಣ ಕ್ಷಣಕೆ ಶಿವನಿನ್ನಕ್ಷಾ (ಖ್ಯಾ)ತಿ ಕೊಂಡಾಡಿದಕ್ಷಿತಿಯ ಮೇಲಿಹುದುಕ್ಷೀರ ಉದಧಿಕ್ಷುದ್ರ ಕರ್ಮಿಗಳುಕ್ಷೂ(ಕ್ಷು)ದ್ರನೆ ಎನಿಸುವರುಕ್ಷೇಮ ಕಲ್ಯಾಣವ ಪಡೆಯರೆಂದೂಕ್ಷೈ(ಕ್ಷಯ) ವ್ಯಾಧಿ ಹೊಡೆದವನುಕ್ಷೋಭೆಯನು ಬಡುವನುಕ್ಷೌತಿಯನು ಕೂಡುತಿಹ ಜನ್ಮ ಜನ್ಮಕ್ಷಂ(ಕ್ಷೇ)ಮ ಸಾಯೋಜ್ಯಕ್ಕೆಕ್ಷಃ(ಕ್ಷಾ)ಳ ಸಕಲಪಾಪ ಪರಮಾತ್ಮ ಗತಿಗೆ ಕೋಪಪರಮ ಸಾಧು ಹರಹರಾ 31 ಗುರು ತ್ರಿಪುರಾಂತಕನಅರುವಿನ ಪದವಿದುಅರಿತವಗೆ ಅರಿದು ಅಕ್ಷರ ಮಾಲೆಕೊರತೆ ಆದ ಮಾತಿಗೆಹೊರತಾದ ಮಾತುಗಳಮುರುತಾದ ವೇದಗಳು ಗುರು ಗಮ್ಯವುಹಿರಿಯರಿಗೆ ಸಂಬಂಧಪರಕೆ ಪರಮಾನಂದಕರದ ಅಮೃತ ಬಿಂದು ಪ್ರಕಾಶ ತಾನು ಶರಣರಿಗೆ ಇದು ಬೇಕು ಚರಣ ಸಾರಿದ ಟೀಕುಪರಬ್ರಹ್ಮದಾ ತೂರು ತೂಗಿಕೊಳ್ಳಿ 32 ಹರಹರಾ ಮಹಾದೇವ ಶಿವ ಶಿವಾ ಮಹಾದೇವಶಂಕರಾ ಮಹಾದೇವ ದೇವ ದೇವಾ ||
--------------
ಸಿದ್ಧಗುರುತ್ರಿಪುರಾಂತಕ
ಸಕಲವೆಲ್ಲವು ಶಿವನ ಲಿಂಗದೊಳಗಡಗಿದುದು ಲಿಂಗವೆ ಮಾಲಿಂಗವಾಗಿ ತೋರುವುದು ಪ ಭಕುತಿಕರು ಮಮತೆಯೊಳು ಸ್ಥಾಪಿಸಿಯೆ ಅರ್ಚಿಸಲು ಸುಕೃತಫಲವನು ಅಳೆವ ಕೊಳಗವನು ಕಾಣೆ ಅ.ಪ ಆ ಮಹಾ ಸಹಸ್ರನಾಮದೊಳಗತ್ಯದಿಕ ಸೊಮೇಶನೆಂದೆಂಬ ಸ್ವಾಮಿಯನು ಕಂಡು ಸೋಮವಾರದ ದಿವಸ ಸಾಮರುದ್ರವ ಜಪಿಸಿ ನೇಮದಿಂ ಪೂಜಿಸಲು ಕಾಮಿತದ ಫಲವು 1 ಇನ್ನೇನ ವರ್ಣಿಸುವೆ ಈಶ ನಿನ್ನಯ ಮಹಿಮೆ ಉನ್ನಂತವಾಗಿ ಜಗದೊಳು ಚರಿಸಿತು ಪನ್ನಗೇಶನ ಬಲದ ಪಶ್ಚಿಮದ ದೆಸೆಯೊಳ್ ಪ್ರ- ಸನ್ನವಾದನು ಸೋಮನಾಥನೆಂದೆನುತ2 ಪಾದ ಪ್ರತ್ಯಕ್ಷವಾಗಿಯೆ ಸೋಮೇಶನೆಂದೀಗ ತಾ ಮೆರೆದುದು ಭುಕ್ತಿ ಮುಕ್ತಿಯನಿತ್ತು ಪ್ರೇಮದಿಂ ಸಲಹುತ್ತ ಕಾಮಿತಾರ್ಥವನೀವ 3 ಲೋಕೋಪಕಾರಕ್ಕೆ ಸೋಮೇಶ ನೀ ಬಂದೆ ಗೋಕರ್ಣ ಶ್ರೀಶೈಲ ಕಾಶಿ ರಾಮೇಶ್ವರವು ಬೇಕೆಂಬುದಿಲ್ಲಿನ್ನು ಎನ್ನ ಭೀತಿಯ ಗಿರಿಯ ಕುಲಿಶ ನೀನು ಜಗದೀಶ 4 ಜೋಕೆಯೊಳು ಮನದೊಳಗೆ ಅಡಗಿಸಿಯೆ ಭಜಿಸಿದರೆ ಯಾಕೆ ಮನದೊಳು ಬಿಡುವೆ ಶಿವನಾಮವನು ನೀನು ಏಕೆ ಕಡೆಯಲಿ ಕೆಡುವೆ ಮರುಳು ಜೀವನವೆ 5 ಸಡಗರದಿ ಸರ್ವವೂ ನಿನ್ನಲ್ಲಿ ಅಡಗಿದುದು ಜಡೆಯೊಳಗೆ ಅಡಗಿದುದು ಪೊಡವಿಗುತ್ತಮ ನದಿಯು ಉಡುಪತಿಯು ಅಡಗಿದನು ಊಧ್ರ್ವ ಫಣೆಯೊಳಗೆ ಪಿಡಿಯೊಳಗೆ ಅಡಗಿದುದು ವೇದ ಮೃಗರೂಪಾಗಿ 6 ಕಿಚ್ಚು ಅಡಗಿತು ಅವನ ಅಚ್ಚ ಹಣೆಗಣ್ಣಿನೊಳು ಮುಚ್ಚಿ ತೆರೆವಕ್ಷಿಯೊಳು ಮೂಜಗದ ಬೆಳಕು ಬಿಚ್ಚಿಟ್ಟಿ ವಿಷಕಂಠದೊಳು ಲೋಕವನು ಎಚ್ಚರಿಪ ಮಂತ್ರಗಳು ಬಾಯೊಳಗಡಗಿದುದು 7 ಶುದ್ಧ ಸ್ಫಟಿಕ ಥರದ ಕಾಯಕಾಂತಿಗಳುಳ್ಳ ಬದ್ಧುಗೆಯ ದಾರದಂದದಿ ಉರಗನೊಪ್ಪುಗಳು ಉದ್ದಿಶ್ಯವಾಗಿ ಭಜಿಸಿದ ಭಕ್ತರುಂಡಗಳು ತಿದ್ದಿಟ್ಟಿ ಆಭರಣ ತಿರಿಶೂಲಧರಣ 8 ಪುಲಿಕರಿಯ ಪೊಳವುಗಳು ನಳನಳಿಪ ವಸನಗಳು ಹೊಳೆವ ಮುಖತೇಜಗಳು ನಳಿನನೇತ್ರಗಳು ನಲಿವಗಣ ಕೋಟಿಗಳ ಮಧ್ಯದೊಳು ಕೈಲಾಸ ಇಳಿದು ಬಂದನು ನಮ್ಮ ಬಳಿಗೆ ಸೋಮೇಶ 9 ನಾಸಿಕದಿ ಕೌಮಾರಿಗವಧಿಯಾಗಿಹ ಸ್ಥಳ ವಿ- ಶೇಷವಾಗಿಹ ಶುದ್ಧ ರೌಪ್ಯಪುರದೊಳಗೆ ಭೂಸುರೋತ್ತಮಗೊಲಿದು ಭೂರಿಭಾಗ್ಯವನಳೆದು ವಾಸವಾದೆಯೊ ಜಗದೀಶ ಸೋಮೇಶ 10 ಭಾಳನೇತ್ರನೆ ನೀಲಕಂಠ ಶೂಲಾಸ್ಥಿಧರ ಕಾಲರುದ್ರ ವ್ಯಾಳಭೂಷ ಸರ್ವೇಶ ಲಾಲಿಸೈ ಬಿನ್ನಪವ ಪಾಲಿಸೆನ್ನನು ಬೇಗ ಬಾಲಕನು ಅಲ್ಲವೇ ಭಕ್ತಸುರಧೇನು 11 ಸಾರಿ ನೋಡಿರೊ ಮೂರು ಲಿಂಗವನು ನೀವೀಗ ಧಾರುಣಿಯಳೊಂದು ಶಿವಲಿಂಗವನು ಬೇಗ ಮೇರುವಿಗೆ ಸಮವಾದ ಹೇಮವನು ವಿಪ್ರರಿಗೆ ಧಾರೆಪೂರ್ವಕವಾಗಿ ಇತ್ತ ಫಲ ಒದಗುವುದು 12 ಶಿವನ ಪೂಜೆಯೆ ಭಕ್ತಿ ಶಿವನ ಪೂಜೆಯೆ ಮುಕ್ತಿ ಶಿವಮಂತ್ರವೆ ಶಕ್ತಿ ಶಿವನೆ ಪರಶಕ್ತಿ ಶಿವನಾಮವನು ಭಜಿಸಿ ಸಿರಿಯ ಪಡೆದನು ಹರಿಯು ಶಿವನ ಮರೆಯದೆ ಭಜಿಸು ಇಹಪರವ ಸೃಜಿಸು13 ನಿನ್ನನೇ ನಂಬಿದೆನು ಉನ್ನತಾನಂತೇಶ ಮನ್ನಿಸಿ ದಯದೋರು ಚಂದ್ರಮೌಳೀಶ ಇನ್ನು ಭಯವಿಲ್ಲೆನೆಗೆ ಹರಸೆನ್ನ ಸೋಮೇಶ ಎನ್ನೊಡೆಯ ಶ್ರೀಕೃಷ್ಣ ವರಾಹತಿಮ್ಮಪ್ಪ 14
--------------
ವರಹತಿಮ್ಮಪ್ಪ
ಸಿದ್ಧಬಸವ ಪ್ರಸಿದ್ಧನ ಮಹಿಮೆಯ ಕೇಳಿರಿ ನೀವಿನ್ನು |ವಿದ್ಯಾ ಬುದ್ಧಿ ಧನ ಧಾನ್ಯವನು ಸಿದ್ಧಿಸುವವಿನ್ನೂ ಪ ಶಿವನ ಅಪ್ಪಣೆ ತೆಗೆದುಕೊಂಡು ಶಿವಕಂಚಿಯೊಳಗೆ |ಪಾವನ ಚರಿತ ಬ್ರಾಹ್ಮಣನಲ್ಲಿ ಪುಟ್ಟಿದನು ಬೇಗ ||ದಿವಸ ದಿವಸಕೆ ಬೆಳೆದನು ಬಿದಗಿ ಚಂದ್ರಮನ ಹಾಗೆ |ಜಾವ ಜಾವಕೆ ಶಿವನ ಧ್ಯಾನವ ಮಾಡುವ ಮನದೊಳಗೆ 1 ಮುಂಜಿ ಮಾಡಿಸಿಕೊಂಡನು ಸಿದ್ಧನು ಮದುವೆಯಾಗಲಿಲ್ಲ |ರಂಜಿಸುತಿಹನು ಸೂರ್ಯನಂತೆ ತೋರುವ ಜಗಕೆಲ್ಲ ||ಬಂಜೆ ಒಬ್ಬಳು ಇದ್ದಳು ಆಕೆಗೆ ಮಗನ ಕೊಟ್ಟನಲ್ಲ |ಸಂಜೆ ಹಗಲು ಕಾಣದ ಕುರುಡಗ ಕೊಟ್ಟನು ಕಣ್ಣುಗಳ 2 ತಂದೆ ತಾಯಿಗೆ ಹೇಳಿದನಾಗ ಪೋಗುವೆ ನಾನೆಂದು |ಕಂದ ನಮ್ಮನು ಬಿಟ್ಟು ಪೋಗುವದುಚಿತವೆ ನಿನಗೆಂದು ||ಅಂದ ತಾಯಿಗೆ ವಂದಿಸಿ ಹೇಳಿದ ಮಗನಾಗುವೆನೆಂದು |ಸಂದೇಹವು ಬೇಡೆಂದು ಪೇಳುತ ತೆರಳಿದ ದಯಾಸಿಂಧು 3 ಮಹಾಶಿವಾಲಯ ಕಂಡನು ಸಿದ್ಧನು ದೇಶ ತಿರುಗುತಲಿ |ಆ ಸೀಮೆಯಲಿ ಹಳ್ಳದ ನೀರು ನಿರ್ಮಲ ನೋಡುತಲಿ ||ಆಸನ ಹಾಕಿ ಕುಳಿತನು ಶಿವನ ಧ್ಯಾನವ ಮಾಡುತಲಿ |ಆ ಸಮಯದಿ ಬಂದನು ಕರಣಿಕ ಹೊಲಗಳ ನೋಡುತಲಿ 4 ಉದ್ದಂಡ ಸಂತತಿ ಆಗಲಿ ಇನ್ನು 5 ನಿನ್ನಯ ಪೂಜೆಯ ಮಾಡುವದ್ಹೇಗೆ ಹೇಳೋ ನಮಗೀಗ |ಮನ್ನಿಸಿ ಅವಗೆ ಪೇಳಿದ ಸಿದ್ಧ ಪುರುಷನು ತಾ ಬೇಗ ||ಸಣ್ಣ ಬಿಂದಿಗೆಯನಿಟ್ಟು ದ್ವಿಜರ ಪಾದೋದಕವೀಗ |ಸಂಖ್ಯೆಯಿಲ್ಲದ ಕೊಡಗಳ ಹಾಕಲು ತುಂಬದು ಎಂದೀಗೆ 6 ಅಂದಿಗೆ ಉಂಟು ಇಂದಿಗೆ ಇಲ್ಲ ಎನಲಾಗದು ನೀನು |ಸಂದೇಹವಿಲ್ಲ ಆಶ್ವೀನ ವದ್ಯ ದ್ವಿತೀಯದ ದಿನವು ||ಇಂದಿಗೆ ಕರಣಿಕ ವಂಶದವರು ಮಾಡುತಾರೆ ಇನ್ನೂ |ಮುಂದಕೆ ತೆರಳಿ ಕೊಳಕೂರಕೆ ಬಂದ ಸಿದ್ಧ ತಾನು 7 ಗಾಣಿಗರ ಮನೆಯೊಳಗಿದ್ದು ಗಾಣಾ ಹೂಡಿದನು |ಪ್ರಾಣ ತೊಲಗಿದ ಹೆಣ್ಣುಮಗಳಿಗೆ ಪ್ರಾಣವನಿತ್ತಾನು ||ಗೋಣಿಯೊಳಗೆ ಹೊಲಿದು ನದಿಯಲಿ ಪಾಚ್ಛಾ ಹಾಕಿದನು |ಕಾಣಿಸದಂತೆ ಬೇಗನೆ ಹೊರಗೆ ಹೊರಟು ಬಂದಾನು 8 ಹೆಸರು ನಿನ್ನದು ಏನು ಎಂದು ಪಾಚ್ಛಾ ಕೇಳಿದನು |ಹೆಸರು ನನಗೆ ಬಸವನೆಂದು ಕರೆತಾರೆ ಇನ್ನು ||ಪಶು ನೀನಾದರೆ ಸೊಪ್ಪಿಯ ಬೇಗ ತಿನಬಾ ಎಂದನು |ನಸು ನಗುತಲಿ ಸೊಪ್ಪಿಯ ತಿಂದು ಡುರಕಿ ಹೊಡೆದಾನು 9 ಗೊಂಬಿಗೆ ವಸ್ತಾ ಸೀರೆಯನುಡಿಸಿ ಸಿಂಗಾರ ಮಾಡಿದನು |ರಂಭೆಗೆ ಸರಿ ಈ ಹೆಣ್ಣು ಮಗಳಿಗೆ ಮದುವ್ಯಾಗೋ ನೀನು ||ಅಂಬುಜ ಮುಖಿ ಬಾರೆಂದು ಕರೆದನು ಸಿದ್ಧ ಮುನೀಶ್ವರನು |ತುಂಬಿದ ಬಸುರೊಳು ಮಗನ ಪಡೆದಳು ವಂಶಾದೆ ಇನ್ನು 10|| ನೇಮವ ಮಾಡಿ ಕೊಳಕೂರದಿ ಇರುವೆನು ನಾನೆನುತ |ಈ ಮಹಿಮೆಯೊಳಗೆ ಭೀಮಾ ದಕ್ಷಿಣವಾಹಿನಿ ಮಹಾಕ್ಷೇತ್ರ ||ಗ್ರಾಮಸ್ಥರನು ಕರೆದು ಹೇಳಿದನು ಅಡಗುವೆ ನಾನೆನುತ |ನೀವು ಮಾತ್ರ ನಾವಿದ್ದ ಸ್ಥಳವನು ನೋಡಬೇಡೆನುತ 11 ಕಲಿಕಾಲವನು ಕಂಡು ಸಿದ್ಧನು ಅದೃಶ್ಯನಾದನು |ತಿಳಿದು ಭಕ್ತಿ ಮಾಡಿದವರಿಗೆ ವರಗಳ ಕೊಡುತಿಹನು ||ಸುಳಿವನು ಕಣ್ಣಿಗೆ ಸತ್ಪುರುಷರಿಗೆ ಸಿದ್ಧ ಬಸವ ತಾನು |ಹಲವು ಹಂಬಲ ಮಾಡಲು ಬೇಡರಿ ಇರುವೆ ನಾನಿನ್ನೂ 12 ಹನ್ನೆರಡು ನುಡಿ ಸಿದ್ಧನ ಸ್ತೋತ್ರವ ಕೇಳಿದವರಿಗೆ |ಮುನ್ನ ಮಾಡಿದ ಪಾಪವು ನಾಶಾಗಿ ಹೋಗುವದು ಬೇಗ ||ಧನ್ಯನಾಗುವ ಕೀರ್ತಿ ಪಡೆಯುವ ಲೋಕದ ಒಳಗ |ಚನ್ನಾಗಿ ಶ್ರೀಪತಿ ಗುರುವಿಠ್ಠಲನು ಒಲಿವನು ತಾ ಬೇಗ 13
--------------
ಶ್ರೀಪತಿ
ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
(ಈ) ಯತಿವರ್ಯರು ಶ್ರೀ ವ್ಯಾಸರಾಯರ ಸ್ತುತಿ ಇದಿರ್ಯಾರೊ ಗುರುವೆ ಸರಿಯಾರೊ ಯತಿಗೆ ಸಮರ್ಯಾರೊ ಪ ದುರುಳ ವಾದಿಗಳನ್ನು ಮರುಳು ಮಾಡೋರನ್ನ ತರಿದಟ್ಟಿ ಚಂದ್ರಿಕೆ ಗ್ರಂಥವ ರಚಿಸಿ ಧರಣಿ ಸುರರ ಪರಿವೃಢರ ಸುನಿಕರಕೆ ಪರಿಪರಿಯಲಿ ಉಪದೇಶಿಸುತಿಪ್ಪಗೆ 1 ಕನಕ ಕಶಿಪುತನಯನ ಘನ ಅಂಶದಿ ಫಣಿಗಣ ರಮಣನಾವೇಶದಿ ಪೊಳೆಯುತ ದಿನದಿನದಲಿ ಹರಿಮನ ತಣಿಸುತಲಿಹ ಘನ ಮಹಿಮನೆ ಶ್ರೀ ಯತಿಕುಲತಿಲಕಾ 2 ಉದ್ದಂಡ ವಿತಂಡಕೆ ಗಂಡುಸಿಂಹ ತರ್ಕದೆ ತಾಂಡವ ಯುಕ್ತಿಯ ದಂಡುಗಳನೆ ಕಟ್ಟಿಕೊಂಡು ತಾರ್ಕಿಕರ ಷಂಡಗಳನೆ ಖಂಡಿಸುತಿಹ ಯತಿಯೆ 3 ಬ್ರಹ್ಮಣ್ಯತೀರ್ಥರ ಕರಕಮಲದಿ ಪುಟ್ಟಿ ಬ್ರಹ್ಮಜನಕ ನರಸಿಂಹ ಮೂರುತಿಯ ಹೃ- ದ್ಗಂಹ್ವರದಲಿ ಧ್ಯಾನಿಸುತಿಹ ವ್ಯಾಸರಾ ಹೃದಯಾಂಬುಧಿಯೊಳು ಮೆರೆವಗೆ 4 ದಶದಿಶೆಯಲಿ ದಶರಥಸುತ ಮಹಿಮೆಯ ಕುಶಲದಿಂದಲಿ ಸಭೆಯೊಳಗೆ ಸ್ಥಾಪಿಸುತ ಹೊಸ ಹೊಸ ಬಿರುದು ಸಂದ್ಹೆಸರುವೆತ್ತಿರುವಂಥ ವಸುಧಿಯೊಳಗೆ ಸುಕರ ಸುಚರಿತೆಗೆ 5 ಹೊಳೆಯುತಲಿರುವ ರುಕ್ಮಿಣಿಪತಿ ಕೃಷ್ಣನು ನಲಿಯುತ ಕುಣಿಕುಣಿದಾಡುತಲಿಪ್ಪನು ಥಳಥಳಿಸುವ ರಾಮ ವೇದವ್ಯಾಸರು ನಿಮ- ಗಿಳೆಯೊಳಮೂಲ್ಯ ಪ್ರಸಾದವನೀವರು 6 ಅಡಿಗಡಿಗತಿ ದೃಢತರ ಯುಕ್ತಿಗಳಿಂದ ಸಡಗರದಿಂದಲಿ ಬಿಡದೆ ನುಡಿಯುತ ನಡದದ್ವೈತದಡವಿಯೊಳಗೆ ಪೊಕ್ಕು ಕೆಡಗುತಿಹ ನ್ಯಾಯಾಮೃತಾಚಾರ್ಯರಿಗೆ 7 ಶ್ರೀದವಿಠಲಗತಿ ಪ್ರೀಯರಾದ ಶ್ರೀ- ಪಾದರಾಯರಲಿ ಓದಿ ಗ್ರಂಥಗಳ ವಾದಿರಾಜ ವಿಜಯೀಂದ್ರ ಪ್ರಮುಖರಿಗೆ ಆದರದಲಿ ಪಾಠ ಹೇಳುತಲಿಪ್ಪಗೆ 8
--------------
ಶ್ರೀದವಿಠಲರು
(ಊ) ಆತ್ಮನಿವೇದನೆ ಇಟ್ಟಂತೆ ಇರುವೆನೊ ಹರಿಯೇ ನೀನು ಕೊಟ್ಟದ್ದನ್ನುಣ್ಣುವೆ ಮತ್ತೇನು ಧೊರೆಯೇ ಪ ಪಟ್ಟೆಪೀತಾಂಬರ ಕೊಟ್ಟರೆ ಉಡುವೆನುಬಟ್ಟೆಯಿಲ್ಲದಿರೆ ಚಿಂದಿತೊಟ್ಟು ನಾನಿರುವೆನೊಮೃಷ್ಟಾನ್ನ ಭೋಜನವಿತ್ತರೆ ಉಣ್ಣುವೆ ಉ-ಚ್ಛಿಷ್ಟನ್ನವನಿತ್ತನೆ ತುಷ್ಟಿಲೆ ತಿನ್ನುವೆ 1 ಹಾಸಿಗೆ ಕೊಟ್ಟರೆ ನಾ ಮಲಗುವೆಭೂಶಯನವಿತ್ತರೆ ಅಲ್ಲಿಯೆ ಒರಗುವೆಆ ಶಾಲು ಕೊಟ್ಟರೆ ಹೊದೆಯದೆ ಬಿಡದಾಕಾಶವ ಹೊದಿಯೆಂದರೆ ಹೊದೆಯುವೆ ಬರಿಯೆ 2 ನೀಕೊಟ್ಟರುಂಟು ಕೊಡದಿದ್ದರೇನುಂಟುಬೇಕು ಬೇಡಗಳು ನಿನ್ನಿಚ್ಛೆಯಾಧೀನಲೋಕೇಶ ಗದುಗಿನ ವೀರನಾರಾಯಣಸಾಕು ಬಿಡಿಸಯ್ಯ ನರಜನ್ಮದ ಗಂಟು 3
--------------
ವೀರನಾರಾಯಣ
|| ಶ್ರೀ|| ಪದ್ಯ|| ಮುಂದೆ ತುಳುಜಾ ದೇವಿ ಬಂದು ನಿಂತಿರಲು ತ್ವರದಿಂದ ನೋಡ್ಯನುಭೂತಿ ಬಂದಂಥ ದೇವಿಯ ಚಂದದ ಬಹು ತೇಜವೆಂದು ತಿಳಿಯದೆ ಎನ್ನ ಮುಂದೆದುರಿಗೆ ಏನು ಬಂದಿರುವುದೆಂದು ತ್ವರದಿಂದ ನಡುಗಿದಳು|| ಮುಂದ ಆದೇವಿ ತಾ ಮುಂದಕ್ಕೆ ಕರೆಯುತಲೇ ಕುಂದರದನಿಯೇ ಕೇಳು ಕುಂದು ನಿನ್ನಲ್ಲಿ ಇಲ್ಲ ಎಂದು ನಿನ್ನ ಭಕ್ತಿಗೆ ಚಂದಾಗಿ ಅಭಯದ ಕೂಟ್ಟಂದಳೀಪರಿಯ||1 ಪದ ರಾಗ:ಕಾನಾಡ ಆದಿತಾಳ ಬೇಡು ಬೇಕಾದ್ದು ಬ್ಯಾಗನೇ|| ಅನುಭೂತಿ|| ಬೇ|| ನೀಡುವೆ ನಾನು|| ಪ ಮಾನಸ ದುಃಖವ್ಯಾಕಿದು || ನಿನ್ನ ಭಿಮಾನವೆಂಬುದು ನನ್ನದು|| ಮಾನಿತರೊಳ್ಹಗತಿ ಮಾನವಂತೆಯೇ ಮಾನುನಿ ಮಣಿ ಅನುಮಾನವ ಬಿಟ್ಟು|| 1 ಎಷ್ಟು ಸ್ನೇಹವ ತೋರಲಿ|| ಬಂದೆ ಸಂತುಷ್ಟಳಾಗುತ ನಿನ್ನಲಿ|| ಶಿಷ್ಟಳೆ ನೀ ಕೇಳಸ್ಪಷ್ಟದಿ ನಿನಗೆ ದೃಷ್ಟಿಗೆ ಬೀಳಲು ಕಷ್ಟಗಳುಂಟೆ|| 2 ಚಿಂತಿಸಿದಿ ಯಾಕೆನ್ನನು|| ಬಂದಂತಹ ಚಿಂತೆ ಎಲ್ಲಾನೂ ಕಳೆವೆನು|| ಸಂತೋಷದಲಿ ಅನಂತಾದ್ರೀಶನ ಚಿಂತನದಿಂದಿರು ಚಿಂತೆಯನು ಬಿಟ್ಟು|| 3 ಆರ್ಯಾ ಅತಿ ಹಿತ ವಚನವನು ಕೇಳಿ || ಅತಿ ಹರುಷಿತಳಾದಳಾಗ ಆ ಬಾಲೆ ಹಿತವಾಯಿತು ಎನಗೆಂದು || ನತಿಸುತ ಮಾತಾಡಿದಳು ಹೀಗೆಂದು|| 1 ಪದ ರಾಗ:ಮುಖಾರಿ ಆದಿತಾಳ ತುಳುಜಾದೇವಿಯೇ|| ಪ ನಮೋ ಎಂಬೆ ಮತ್ತು ಜಗದ್ಥಾತ್ತಿಯೆ || ಬಹುಪ್ರಮಿತಾ ಹಿಮಾಚಲನ ಪುತ್ರಿಯೇ || ಸುಮಹಿಮ ಸುಂದರಗಾತ್ರಿಯೇ|| ಮನದಾ ಅಮಿತಾರೋಗಕ್ಕೆ ಮಹಾಮಾತ್ತಿಯೇ|| 1 ತ್ವರಿತಾದಿಂದಲೇ ಬಂದಂಥಾಕಿಯೇ || ಎಂದು ತ್ವರಿತಾ ತ್ವರಿತಾದೇವಿಯು ಎನಿಸು ವಾಕೆಯೆ|| ಮರೆತಿರಲಾರೆ ನಾ ನಿನ್ನಕಿಯೇ || ಸ್ನೇಹಾಭರಿತಾಗಿ ಭಕ್ತರನ ಸಲಹವಾಕಿಯೇ|| 2 ಚಿಂತಿ ಮಾಡಲು ಬಂದು ನಿಂತಿಯೇ || ಎನಗೆ ಚಿಂತಿಯು ಮಾಡಬ್ಯಾಡಂತಿಯೇ|| ಎಂಥಾಕಿ ನೀನು ದಯಾವಂತಿಯೇ || ವರದಾ ನಂತಾದ್ರೀಶನ ಸಖನ ಕಾಂತಿಯೇ|| 3 ಆರ್ಯಾ ಕರ ಮುಗಿದು|| 1 ಪದ ರಾಗ :ಆನಂದ ಭೈರವಿ ವರಕೊಡು ಎನಗಿದು ತ್ವರಿತದಿ ತಾಯಿ|| ಮರೆಯ ದೆಂದೆಂದೂ ಹಗಲಿರುಳು ನೀ ಕಾಯಿ|| ಪ ಮಂದ ಮತಿಯು ದೈತ್ಯ ಬಂದಿಹನೋಡು|| ಕೊಂದವನ ಎನಗಾನಂದವ ನೀಡು 1 ಮಾಡುವ ತಪಸ್ಸಿಗೆ ಕೇಡು ತಂದಿಹನು|| ಮಾಡಲಿನ್ನೇನು ನಿನಗೆ ಬೇಡಕೊಂಬುವೆನು|| 2 ಪತಿಯ ಸೇವಿಸುವಂಥ ಸತಿಯು ಬೇಡುವೆನೂ|| ಸತತಾನಂತಾದ್ರೀಶನಾ ಸ್ವøತಿಯು ಮಾಡುವೆನು|| 3 ಅನುಭೂತಿಯ ವಚನವನು || ಅನುಸರಿಸುತ ಬ್ಯಾಗಕೊಟ್ಟು ಎನಗಿಲ್ಲೆಂತ್ಯಂದಳಾಗ ಜಗದಂಬಾ|| 1 ಮಾಡಿದಳು|| ಹುಂಕಾರ|| 2 ಒಗೆದಾನು ಯುದ್ಧದಲ್ಲಿ ಜಾಣಾ|| 3 ಸಾರಶಕ್ತಿಯನು ತೆಗೆದಾ ಶೌರ್ಯದಿ ಮತ್ತಾಕೆಯಲ್ಲೇ ಒಗೆದಾ|| 4 ಎದೆಗ್ಹೊಡೆದಳು ಶೂಲದಲೆ||ಅದುರೂಪವು ಬಿಟ್ಟು|| ತನ್ನಕ ಪಟದಲೆ ಕುದುರೆಯ ರೂಪವ ಧರಿಸಿ|| ಒದರುತ ನಿಂತಾಗ ಮುಂದ ಖ್ಯಾಕರಿಸಿ|| 5 ಗಾಢನೆ ಮಹಿಷಾಗಿ ಬಂದ ಬದಿಯ್ಮಲೇ 6 ತೋರುವ ಬಹುಬೆಟ್ಟಗಳ|| ಕೊಡಗಳಿಂದಲೇ ಕೊಡಗಳ್ಹಗಳು| ಮಾಡುವ ವೃಷ್ಟಿಯದೆಷ್ಟು|| ಕಾಡುವ ಕಪಟದಿಂದ ಮತ್ತಿಷ್ಟು 7 ಶೃಂಗಗಳಿಂದ ಹಿಡಿದಳು ದÉೈತ್ಯಬಾಯಿಬಿಡುವಾ|| 8 ಅವನ ಮುರದೊತ್ತಿ 9 ಕಡೆದಳು ಆಗವನ ಬಿಲ್ಲುಬಾಣದಲೆ|| 10 ದಾನವನು|| ಹುಟ್ಟಿದ ಸೈನ್ಯವು ಎಲ್ಲಾ|| ಪೆಟ್ಟು ಹಾಕುತ ಬಂತು ಭೂತಗಳಿಗೆಲಾ||್ಲ 11 ತಡಿಯದೇ ಅವನ ಹುಡುಕುತಲಿ || ಕಡಿದಳು ಶಿರ ಕಡೆದಳು ಮತ್ತವನ ಶಿರವು ಖಡ್ಗದಲೇ|| 12 ಸುರರು ಥಟ್ಟನೆ ಕರೆದರು ಪುಷ್ಪ ದೃಷ್ಟಿಯನು|| 13 ಪದ್ಯ ರಾಗ:ದೇಶಿ ಅಟತಾಳ, ಸ್ವರ ಷಡ್ಜ ಓಡಿ xಟ್ಟನೆ ಹಿಡಿದರಾಗ|| 1 ಕುಕ್ಷಿಗಿಲ್ಲದಲೆ ಬುಭೂಕ್ಷಿತರದು ಎಲ್ಲಾ ಭಕ್ಷಣ ಮಾಡುವರು|| ಅಕ್ಷಯ ಬಲದಿಂದ ದಕ್ಷರು ಎಲ್ಲಾರು ರಾಕ್ಷಸರಾದರು|| 2 ಭೈರವಾದಿಗಳು ಎಲ್ಲಾರು ದೇವಿಯ ಪರಿಚಾರಕರಾದವರು ಸೇರಿ ಸೈನ್ಯದಲ್ಲಿ ಅಪಾರ ಸಂಭ್ರಮದಲ್ಲಿ ಹಾರ್ಯಾಡುತಿರುವರು3 ಆ ತಾಳಮೊರದಂಥ ಬೇತಾಳ ಗಣಗಳು ಪ್ರೇತ ಪಿಶಾಚಿಗಳು|| ಯಮದೂತರಸಮರವರು|| 4 ರಕ್ತ ಪಾನವ ಮಾಡಿದರು|| 5 ದುರುಳರನೆಲ್ಲನು ಹೊರಳಿಸಿ ಹೊಟ್ಟೆಯ ಕರಳವ ಬಗಟಿದರು| ಸರಳವಾದ ಆ ಕರಳ ಮಾಲೆಯ ಮಾಡಿ ಕೊರಳೊಗ್ಹಾಕಿದರು||6 ಹಾಕಿಕೊಂಡು ಕುಣಿದಾಡಿದರು||7 ಕಂಕಲಾದಿಗಳು ಭಯಂಕರರವರು ಅಸಂಖ್ಯಾಕರಾಸವರು|| ಶಾಂಕರೀ ದೇವಿಯ ಕಿಂಕರರಿಂಥ ಅಲಂಕಾರಗಳನಿಟ್ಟರು || 8 ಅವನಂತವ ಅರಿಯೇ ನಾನು|| 9 ಆರ್ಯಾ ಬಲ್ಲಿದ ದೈತ್ಯದ ಕೊಂದು || ನಿಲ್ಲದೆ ಅನುಭೂತಿ ಬದಿಯಲೇ ಬಂದು || ಅಲ್ಲಿಹಳು ಮಹಾಮಾಯಾ|| ಇಲ್ಲಿ ಗೆ ಪೂರ್ಣಾಯಿತು ಎರಡು ಅಧ್ಯಾಯಾ || ಶ್ರೀ ಹರೇಪ್ರಸೀದ||
--------------
ಅನಂತಾದ್ರೀಶ - ಕಥನಕಾವ್ಯಗಳು
ಅಂಕಿತನಾಮ ಸ್ತುತಿಮಂಗಳ ತಿರುಪತಿಯರಸಗೆ ಜಯಮಂಗಳ ವೆಂಕಟರಮಣನಿಗೆ ಪವಟಪತ್ರಶಯನಗೆ ಕೈಟಭ ರಿಪುವಿಗೆಸ್ಫುಟನಾಭಿ ಕಮಲಸಂಭವಪಾಲಗೆಘಟಸಿ ಬ್ರಹ್ಮಾಂಡಗಳಗಣಿತಗಳನಲ್ಲಿನಟಿಸಿ ಪ್ರಾಣಿಗಳಲ್ಲಿ ನಲಿವನಿಗೆ 1ನಿಗಮವ ತಂದಗೆ ನಗವ ತಾಳಿದನಿಗೆಜಗತಿಯ ದಂಷ್ಟ್ರದಿ ಧರಿಸಿದಗೆಭುಗಿಲೆಂದು ಕಂಭದಲುದಿಸಿ ಪ್ರಹ್ಲಾದನಮಗನೆಂದಂಕದೊಳಿಟ್ಟ ನರಸಿಂಹಗೆ 2ಅದಿತಿ ಗರ್ಭದಿ ಬಂದು ವಟುರೂಪನಾದಗೆ ಮುದದಿಂದ ಜಮದಗ್ನಿ ಸುತನಾದಗೆಪದುಮಜೆಯರಸ ಶ್ರೀ ರಘುರಾಮಚಂದ್ರಗೆಯದುಕುಲೋದ್ಭವನಾದ ಶ್ರೀ ಕೃಷ್ಣಗೆ 3ಪುರಮೂರ ಗೆಲಿದಗೆ ತುರಗ ರೇವಂತಗೆಪರಿಪರಿ ರೂಪಿನ ಪರಮಾತ್ಮಗೆಶರಧಿಸುತಾ ಮುಖಚಂದ್ರ ಚಕೋರಗೆಸುರಸಿದ್ಧ ವೃಂದವಂದಿತ ಪಾದಗೆ 4ತಿರುಪತಿಯಲಿ ನಿಂದು ಚರಣ ಸೇವಕರಿಗೆವರವಿತ್ತು ಪೊರೆವ ಕರುಣಾನಿಧಿಗೆಸ್ಮರಣೆಮಾತ್ರದಲಘತಿಮಿರ ಸಮೂಹಕ್ಕೆತರಣಿ ಶ್ರೀ ವೆಂಕಟರಮಣನಿಗೆ 5ಓಂ ದೇವಕೀನಂದನಾಯ ನಮಃ
--------------
ತಿಮ್ಮಪ್ಪದಾಸರು
ಅಕ್ಷರ ಮಾಲಾ ಅದ್ವೈತ ಅಗಣಿತಆದ್ಯಂತ ರಹಿತಇಹ ಪರಕೆ ವರ್ಜಿತಈಶ್ವರಯ್ಯ |ಉದಯಾಸ್ತಗಳಿಲ್ಲಊ(ಉ)ಚ್ಚ ನೀಚಗಳಿಲ್ಲಋಷಿಯ ಮೂಲವ ಬಲ್ಲವರಾರಿಲ್ಲಲೃ ಚೇಕಗಳಿಲ್ಲಲñ ಗಳಿಲ್ಲಏಕಮೇವ ತಾನೆಲ್ಲಐಕ್ಯ ಮೊದಲಿಗಿಲ್ಲ ಸೌಖ್ಯಾನಂದಓದಲಿಕೆ ಅಳವಲ್ಲಔದಾಸೀನ ಶೀಲಅಂತ ತಿಳಿಯದು ಬಹಳಅ:(ಹ)ರ್ನಿಶಿಯಲಿ || ಹರ ಹರಾ ಮಹಾದೇವ ಶಿವ ಶಿವ ಮಹಾದೇವ ಶಂಕರಾ ಮಹಾದೇವ ದೇವ ದೇವಾ 1 ಮೂರ್ತಿ ನೀಕಿರಣ ಕೋಟಿ ಪ್ರಕಾಶ ಮಹಿಮ ಕೀರ್ತಿ ನಿಮ್ಮದು ಬಹಳಕುಳಿತಲ್ಲಿ ನಿಂತಲ್ಲಿಕೂ(ಖೂ)ನ ನಾ ತಿದ್ದದೆ ಕಾಲಿಲೊದ್ದುಕೇಳಿ ಬಂದೆನು ಮಹಿಮೆಕೈ ಮುಗಿದು ಶರಣೆಂಬೆಕೋಟಾಳ (ಕೋಟಲೆ) ನಮ್ಮದು ಬಿಡಿಸು ದೇವಾಕೌ (ಕವಿ)ದು ಕೊಂಡಿದೆ ಮಾಯೆಕಂಬನಿಯ ತೆರೆ ಗುಡಿದುಕಃ(ಷ)ಷ್ಟ ಕಷ್ಟ ಜನ್ಮ ಬಹಳ ಕಷ್ಟ || ಹರಹರಾ 2 ಖಳರ ಸಂಗತಿಯಿಂದಖಾತಿಗೆ ನಾ ಬಿದ್ದೆಖಿನ್ನನಾದೆ ಅಳುಕಿ ಭಿನ್ನನಾದೆ ಖೀ(ಕೀ) ಸುತಿದೆ ಬಲು ಬಯಕೆಖುರ ಖುರಿ ಗುಟ್ಟುತಲಿಖೂನ ತೋರಿಸಿ ನಮ್ಮ ಕಡೆದಾಟಿಸು ಖೇದವನು ಬಡಲಾರೆಖೈರದ ಮನೆಯಲಿಖೋಡಿತನ ನಮ್ಮದು ಬಿಡಿಸು ದೇವ ಖೌ(ಖವ)ಟ ಮನವನು ಬಿಡಿಸಿಖಂ ಮಗೆ (ಖಮಂಗ) ಮಾಡಯ್ಯಖಃಖಃ ಎನುತಲಿ ಕೆಮ್ಮಲಾರೆ || ಹರಹರಾ 3 ಗದ್ದಲ ಮನದಿಂದ ತಿದ್ದಲಾರದೆ ಹೋದೆಗಾವಿಲ ನಾನಾದೆ ಕರುಳನಾದೆಗಿರಿಜೇಶ ನೀ ಕೇಳು ಪ್ರಳಯಕ್ಕೆ ಒಳಗಾದೆ ಉಳಿದು ಕೊಂಡರೆ ನಿಮ್ಮ ಮರೆಯೆನೆಂದು |ಗೀತ ಹಾಡಿದರೇನು ನಾಥನನು ಕೊಳಲಿಲ್ಲ ಪ್ರೀತಿಗಳು ನಡಲಿಲ್ಲ ಗುರುವಿನಲ್ಲಿ | ಗುಣಕರ್ಮಕಾಡುತಿದೆ ಗೂಳಿಯನೆ ಮಾಡುತಿದೆ ಗೆಲವ ಹಾದಿ ಬಯಲ e್ಞÁನವಿಲ್ಲ |ಗೈಯಾಳ ತನದಿಂದ ಹೈಯಾಲಿಕೆಗೆ (ಹುಯಿಲಿಕೆಗೆ) ಬಿದ್ದು ಗೊಡ್ಡತನ ಎಷ್ಟೆಂತು ಹೇಳಲಯ್ಯಗೌಪ್ಯದ ಮನೆಯೊಳಗೆಗಂಭೀರತನ ಬಿಟ್ಟುಗಃ(ಗಾಹ)ಳ ಹರಿಸೊ ಬಹಳ ಕೃಪೆಯಿಂದಲಿ || ಹರಹರಾ 4 ಘ(ಗ)ಳಿಸಲಾರೆನು ಪರವುಘಾ(ಗಾ)ಳಿಯಾಗಿದೆ ಮನಸುಘಿಲಕೆಂದರೆ ಬೆದರಿಘೀರಿಡುತಲಿಘುಮ್ಮರಿ ಸಿಕ್ಕುತದಘೂ(ಗೂ)ಳಿ ಸೊಕ್ಕಿದ ಹಾಗೆ ಘುರಘೂರಿಯ ತಪ್ಪಿಸಿ ಹರವ ಮಾಡು ||ಘೇರಿ ಬಂದೆರಗಿತುಘೃರಿಸುವರಿನ್ನಾರುಘೋರದಲಿ ಮುಳುಗಿದೆ ತಾರಿಸಯ್ಯಘೌ(ಗೌ)ರವನು ಮಾಡೆನಗೆಘಂಮನೆ ವರವಿತ್ತುಘಃ(ಘಾ)ಸಿಯಾಗಿಸಬೇಡ ಯಮನ ಬಾಧೆಯಲಿ || ಹರಹರಾ 5 ಸಾರ ಗುಹ್ಯ e್ಞÁನಿ ಸಂಗದ ಗೋಷ್ಟಿe್ಞÁನಿಗೇ ಪರಿಪಾಟಿe್ಞÁನಿಯೆಂದರೆ ಕೋಟಿ ಕೋಟಿ ಪುಣ್ಯ e್ಞÁನಕ್ಕೆ ಸರಿಯಿಲ್ಲe್ಞÁನಿಯಾದವ ಬಲ್ಲe್ಞÁನಿಯೆಂದರೆ ಕಲ್ಲು ಹಾಕುತಾರೆ || ಹರಹರಾ 6 ಚರಣವನು ಪಿಡಿಯಾದೆಚಾರ್ವಾಕ ನಾನಾದೆಚಿರಕಾಲ ಬದುಕುವಚೀ(ಚಿ)ಹ್ನ ವಿಲ್ಲ ಚುಲಕ ಬುದ್ಧಿಯ ಹಿಡಿದುಚೂಕ (ಚುಕಾ)ರಾದೆನು ಬಹಳಚೇರಿಗೇಡಿತನವನು ಬಿಡಿಸು ದೇವಾ |ಚೈತನ್ಯನೆಂಬವನು ಒಳ ಹೊರಗೆ ಐದಾನೆಚೋರತನವನು ಮಾಡಿ ಕದ್ದನನ್ನಚೌಖಂಡಿ ಒಡೆದನೊಚಂನಾಗಿ ಹಗಲವೆಚಃ(ಚಾ)ಡಿ ನೋಡುತಲಿದ್ದೆ ಉಲವಿಲ್ಲವು ಹರಹರಾ 7 ಛಲದ ಬುದ್ದಿಯ ಹಿಡಿದುಛಾನಸ ನಾನಾದೆಛಿಛೀ ಎಂದರು ಸಾಧು ಜನರುಛುಲಕತನಕೆಲ್ಲಛೂರಿಯನೆ ಹಾತುತಲಿಛೇದಿಸಲು ತಡವಿಲ್ಲಛೈ ತಾಳಿಸಿಛೋದವನು ಬಡುವರು ಭಕ್ತರಾದವರೆಲ್ಲಛೌಕಂಠ ನಮ್ಮಯ್ಯ ಕೂಡಿಕೊಂಡಛಂದಾಗಿ ಸಲಹಯ್ಯ ಆನಂದ ಪದವಿಯ ಕೊಟ್ಟು ಛತ್ರವನು ಮೇಲಿಟ್ಟು ಛಃ(ಛಾ)ಯ ವಾಗೋ ಹರಹರಾ 8 ಜಪ ತಪಗಳ ನಾ ಮಾಡಿಜಾಗ್ರತ ನಾನಾದೆಜಿತೇಂದ್ರಿಯಾದೆನೊಜೀವದಿಂದ ಜುಗಳನೆಲ್ಲವನುಜೂಜನಾಡಿ ಗೆದ್ದೆಜೇನವನಿಕ್ಕಿದೆ ನೆಲಕಬ್ಬಿಗೆಜೈ ಜಯಾಕಾರವನು ಜಗವೆಲ್ಲ ಮಾಡುವರುಜೋಗುಳ ಹಾಡುವರು ಪ್ರೇಮದಿಂದಜೌನಾಗಳೆ (ಯೌವನಾಗಲೆ) ಹೋಗಿಜಂಬುಲಿಂಗನ ಕೂಡಿ ಜಃ(ಹ)ಜ ನಾಡಿ ಹರಹರಾ 9 ಝ(ಜ)ಳಕವನು ಮಾಡಿದೆಝಾರಿ ಬ್ರಹ್ಮನ ಕೈಯ ಉದಕವೇ ಉಷ್ಣವನು ಬಿಡಿಸಿತಲ್ಲಝಿಂಜ ಬೀಜ ಮಲ ತೊಳೆದುಝೀ ಎಂಬ ಖಣಿಯೊಳಗೆಝುಣಿಝೂಣಿಸುವನಾದಝೇಲಿಸಿಕೊಂಡಝೈಯ ರಾಗದ ಯೋಗಝೋತಿ ಮಾಡಲಿ ಬೇಕುಝೌಗರದ ಒಳ ಮೊಲಿಯ ಭಾರಿಡುತಲಿ ಝಂಮನೊದಗಿತು ಮೇಘ ಝಳಮಳ ಮಿಂಚೇರಿಝಃಗ ಝಗಿಸುವ ದಿವಾ ರಾತ್ರಿಯಲಿ ಹರಹರಾ 10 ಕೊಂಡ ಹೊತ್ತರು ಆತ್ಮe್ಞÁನಿಗಳು ಟೀಕು ಆಯಿತು ಹೀಗೆಟುಕಿಲಿ ತಿಳಕೊಳ್ಳಿಟೂಕ ಮಾಡಲಿ ದೇಹ ಮೋಕ್ಷವಿಲ್ಲ ಟೇಕದ ಮೇಲೇರಿ ಜಾರಿ ಬಿದ್ದರೆ ಕೇಡುಟೈಳತನದಲಿಟೊಂಕ ಮುರಿದುಕೊಂಡಟೌಕರಕ ಗತಿಗಾಣಟಂಮನೆ ಕೆಲಸಕ್ಕೆಟಃ(ಟಾ)ಹ ಬಡೆವವರಿಲ್ಲ ಹುಟ್ಟಮೂಕಗೆ ಹರಹರಾ 11 ಲಂಡ ಸಾಕುಸಾಕುಠೊಂಬಿಯ ಮತದವನುಠೌಳಿಕಾವನು ಬದ್ಧಠಂಮೆಂದರೆ ನಮ್ಮರಸು ಸಿಕ್ಕಠಃ (ಠಾ)ವು ಬಲ್ಲಿದವನಲ್ಲ ಠಾಣೇ ಕುಳಿತವನಲ್ಲ ಠಾಕುರಾಯಿ ಕಾದು ಗೋವ ನಾದ ಹರಹರಾ 12 ಡಗಳ ಮುದ್ರಿಯ ಹಾಕಿಡಾಗಿನ ಪಶುವಾಗಿಡಿವರಿ ಎಂದರೆ ಖೋ ಎನುತಲಿ ಡೀಂಗರಿಗಲ್ಲದೆಡುರುಕು ಹಾಕುತಲಿದೆಡೂ(ಡು)ಳಿಕಿಸುತಲಿಹ ಸೊಕ್ಕಿನಲ್ಲಿ ಡೇಗಣಿ ಕಟ್ಟದೆಡೈಳತನ ಹೋಗದುಡೊಂಗ ತಟ್ಟಿದ ಬಳಿಕ ನೋಡು ಅಳುಕಡೌಲಿಸಿದ ಮಡವಿನಲಿ ನೀರ ಕುಡಿಯಲು ಹೋಗಿಡಂಕ ಮೊಸಳಿಯ ಕಂಡುಡಃ(ಡ)ಳಮಳಿಸಿತು ಹರಹರಾ 13 ಢಣಿಢಣಿಸುವ ಜ್ಯೋತಿಢಾಳಾಗಿ ತೋರುತದೆಢಿಳಿಗ್ಯಾತಕ ಹೋದಿ ಇಲ್ಲಿ ನೋಡು ಢೀಗು ಬಿದ್ದ ಮುನ್ನೆಢುಮಿಢೂಮಿಗುಟ್ಟುತಲಿಢೇಕರವ ಕೊಟ್ಟುಂಡು ತೃಪ್ತನಾಗೊ ಢೈಯಾಳಿತನದಿಂದಢೋಗರ ಬೀಳಲಿ ಬೇಡಢೌಳಿ (ಡೌಲು) ಮಾಡಲಿ ಬೇಡ ಸಾಧುರೊಳಗೆ ಢಂಮನಾಗಿರ ಬೇಡ ಅಹಂಕಾರ ತಲೆಗೇರಿಡಃ(ಢಾ)ಣಕ ನೀಗವಲ್ಲದೆ ಬಳಲುವಿ ಹರಹರಾ 14 ತುಂಬಿ ಕೊಂಡಿದೆ ನೋಡುತೂ (ತು)ಳಕುವ ತೆರೆ ನೋಡುತೇಲಿ ಬರುತದೆ ನೋಡುತೈ ಧಾಂಗೆ (ತೆಯ್ಧಾಂಗೆ)ತೊಳೆದ ಮುತ್ತನು ನೋಡುತೌರಮನೆಯನು (ತವರಮನೆಯನು) ಕೂಡುತಂದೆ ಶಿವರಾಯನ ಆನಂದ ನೋಡುತಃ(ತಾಹ) ಕುಡುತದೆ ನೋಡು ಬಹಳ ಅಭ್ಯಾಸ ಮಾಡು ದೇಹವಳಿದು ಆತ್ಮನೊಡಗೂಡು ಹರಹರಾ 15 ಥರ ಗೊಳಿಸುವ e್ಞÁನ ಸ್ಥಾ(ಸ್ಥ)ಳವ ಶುದ್ಧ ಮಾಡು ಸ್ಥಿರವಾದ ಮನಸಿನ ಸೂತ್ರವಿಡಿದು ಸ್ಥೀ(ಸ್ಥಿ)ತಿ ಉತ್ಪತ್ತಿ ಪ್ರಲಯ ಮೀರಿದ ಮುಹೂರ್ತದಲಿ ಕೇಸರಗಳ ಹಾಕಿದರು ಯೋಗಿಗಳು ಉಪ್ಪಾರ ಈಶ್ವರಣ್ಣ ಬಡಿಗೇರ ಬೊಮ್ಮಣ್ಣ ಕಟ್ಟಲೀ ಜಾಣರು ಸೃಷ್ಟಿರಚನಾ ಮುಟ್ಟಿತು ಮುಗಿಲಿಗೆ ದಟ್ಟಿಸಿತು ಭೂಮಿಗೆ ಪಟ್ಟದರಸನು ನಮ್ಮ ಗುರುರಾಯನು ಹರಹರಾ 16 ದಗಿಯ ಬೀಳಲಿ ಬೇಡದಾ(ದ)ಯದ ಮನೆಯನು ಗಳಿಸುದಿನ ದಿನಕ ಭಕ್ತಿಯಿಂದೀರ್ಘವಾಗಿದುಗುಣಿಸಿದ ಪ್ರೇಮಗಳುದೂರ ಬೀಳದ ಹಾಗೆದೇವರಿಗೆ ಅರ್ಪಿಸಿದೈವ ಪಡೆಯೊ ದೊರಕೊಂಬ ತಡವೇನುದೌಲಿತನ ಹೋದರೆದಂಭವೆಂಬುದು ಎಲ್ಲದಃ(ಹ)ನವಾಗಿ ದಾವ ದರಶನದೊಳಗೆ ದೇವದರ್ಶನ ಮೇಲು ನೀನ್ಯಾಕ ಕೊಳವಲ್ಲಿ ಏನು ಬಂತೋ ಹರಹರಾ... 17 ಧನಕೆ ಹೆಣಗಲಿ ಬೇಡಧಾರುಣಿಗಂಜ ಬೇಡಧಿಗಿ ಧಿಗಿಗೊಳ ಬೇಡಧೀರನಾಗೊಧುಗಿ ಧುಗಿಸಲಿ ಬೇಡಧೂಳಿ ಕೂಡಲಿ ಬೇಡಧೇನು ಕರೆವುತಲಿದೆ ಸಂತರಲ್ಲಿಧೈರ್ಯವನು ಬಿಡಬೇಡ ಧೊ(ದೊ)ರೆಗೆ ಶರಣೋಗ ಬೇಡಧೌತ ರಂಗದ ಬಿರುದುಧಂಮ ಧಂಮಿಸುತಧಾ(ಧಃ)ಹಕಿಲ್ಲ ಮೃತ್ಯುವಿನ ಸೋಂಕಿಲ್ಲ ಜನ್ಮದ ಏಕಾಂತ ದಲಿರುತಿಹ ಶಿವಶರಣನು ಹರಹರಾ 18 ನರದೇಹಿ ಆದುದಕೆನಾಗಭೂಷಣನ ಭಜಿಸು ನಮ್ಮನಿª6Éಲ್ಲರಿಗೆ ಮೋಕ್ಷ ನೀರ ಮುಣುಗಲಿ ಯಾಕೆನುಡಿಯ ಬಂಧನವ್ಯಾಕೆನೂರಾರ ಶರಣ್ಯಾಕೆ ಬೆಂಡಾಗುತನೇಮ ಕೊಳಬೇಕ್ಯಾಕೆನೈಷ್ಠಿಯ ಕಟ್ಟಲ್ಯಾಕೆನೊಗನ ಹೊತ್ತಾನಂತ ನೆನಿಸಲ್ಯಾಕೆನೌಸರದ (ನವಸಿಗರ) ಪರಿಯಾಕೆನಂಮಯ್ಯನಗಲಲ್ಯಾಕೆನಃ(ನಾ)ನಾತ್ವವನಳಿದರೆ ಅಷ್ಟೇ ಸಾಕು ಹರಹರಾ 19 ಮೂರ್ತಿ ಶರಣು ಶರಣು ಪೇತು ಪತಿಗೆ ಶರಣುಪೈಜ ಗೆದ್ದವಗೆ ಶರಣುಪೊಡವಿ ಕೈಲಾಸದ ನಿಧಿಗೆ ಶರಣುಪೌರೋಹಿತನೆ ಶರಣುಪಂಥ ದುರಿತನೆ ಶರಣುಪಃ(ಪಾ)ರ್ವತಿ ಕಾಂತನ ಪಾದಕ್ಕೆ ಶರಣು ಹರಹರಾ 20 ಫಲವ ಬಯಸಲಿ ಬೇಡಫಾಸಿ (ಪಾಶದಿ) ಬೀಳಲಿ ಬೇಡಫಿರ್ಯಾದಿಗಳ ಹಳಿತಲ ಬೇಡಫೀ (ಫಿ)ತವಿ ಮಾಡಲಿ ಬೇಡಫುಗಸಾಟಿ ಕೆಡಲಿ ಬೇಡಫೂರಸೊತ್ತಿತೆನಬೇಡ ಶಿವ ಶಿವಗೆ ಫೇಡಿ ಮಾಡಲಿ ಬೇಡಫೈಣ್ಯ ಹೂಡಲಿ ಬೇಡಫೋಡಣಿ ಕೊಡಬೇಡ ಸಮುದ್ರಕೆಫೌಗೊಂಡ ಹೂವಿನಫಂಗಡಿಯನೆ ತಂದುಪಃ(ಫಾ)ರ ಪರಮಾತ್ಮಂಗೆ ಅರ್ಪಿಸಯ್ಯ ಹರಹರಾ 21 ಭರವಸವು ನಿನಗೇನುಭಾಗ್ಯ ಬಂದೀತೆಂದುಭಿಕ್ಷೆ ಬೇಡುವಗಿನ್ನುಭೀತಿಯಿಲ್ಲ ಭುವನದೊಳಗಿದಿರಿಲ್ಲಭೂತಾಳ ಕೆಳಗಿರಲಿಭೇದವಿಲ್ಲದೆಭೈರವನು ಕಾವ ಭೋಜನಂಗಿರುತಿಹನುಭೌತ್ಯ ವ್ಯಾಳೆ ಬಂದದಕೆಭಂಗ ಬಡಿಸಿಲಕಿಲ್ಲ ಸಂಗ ಸಿಲುಕಿ ಭಃ(ಭಾ)ಲ ಲೋಚನ ಚಂದ್ರಶೇಖರನ ಸ್ಮರಣೆಗೆ ಭಾರನಿಳುಹಿ ಭೂಮಿಯ ಹೊರಗಾಗಿ ಹರಹರಾ 22 ಮರಣ ಬರುತದೆ ಕೊಮಾರಗಳ ಹಾಕುತಲಿಮಿ (ಮೀ)ರಲಿಕ್ಕಲಿದುಮೀ(ಮಿ)ಥ್ಯಾವಲ್ಲ ಮುನಿಯು ಆದರೆ ಏನುಮೂರು ಕಣ್ಣಿರಲೇನುಮೇರು ಸಹಿತಾಗಿದು ನುಂಗುತದೆ ಮೈಯ ತಾಳಿದ ಬಳಿಕಮೋಕ್ಷ ಪಡೆಯಲು ಬೇಕುಮೌನವ ಹಿಡಿದಂಗೆ ದೇಶ ಭಂಗಮಃ(ಮ)ಹಾ ಪ್ರಲಯಕೆ ಹೊಂದದ ಮಹಾತ್ಮಂಗೆ ಭಯವೇನು ಮಹಾದೇವನ ಮೈಯ ಕೂಡಿಕೊಂಡ ಹರಹರಾ 23 ಯದಿಯ (ಎದೆಯ) ಬಲ್ಲಿದನಾಗುಯಾತ್ಯಾತಕಂಜದೆಯಿ(ಈ) ತನೆಯೀ(ಈ)ಶ್ವರನು ಈಶ ಗುಣದಿ ಯುವತಿ ಇದ್ದರು ಏ£4ಯೂ(ಯು)ಗದ ಅಂಜಿಕೆ ಏನುಯೇ(ಏ)ಸೊಂದು ಗ್ರಹಗಳು ಬಂದರೇನುಯೈ(ಐ)ದಿಸಿ ಸಾಯೋಜ್ಯಯೋಗಿಯಾದ ಬಳಿಕಯೌವನಾಗಿರುತಿರಲಿ ಬಹು ವೃದ್ಧನುಯಂ(ಎಂ)ಮ ಬಸವನ ತಮ್ಮನಾಗಲಿಕೆ ಪರಬೊಮ್ಮಯಃಕಾಕಸಾರೆ ನಿಮ್ಮಯೇಕಾಕನಂದ ಹರಹರಾ 24 ರಮಣ ನಾಯಕತೆಯರುರಾಗವನೆ ಮಾಡುವರು ಸ-ರಿಗದಲಿ (ಸರಿಗಮದಲಿ) ಹಾಡುವರುರೀತಿಯಿಂದರುಣಿ ಝಣಿಸುವ ತಂತಿರೂಪದ ಮೃದಂಗರೇಖ್ಯಕೊಳಗಾಗದೆರೈಷಕೂಡಿರೋಮಾಂಚ ಗುಡಿಗಟ್ಟಿರೌದ್ರಾವತಾರದಲಿರಂಗ ದಾರಿಗೆ ಸಿಲುಕಿರಃ(ರಾ)ಹಣ ಒದಗಿ ರಾಯಪಂಚಾಕ್ಷರವ ಪರಶಿವನ ಕೊಂಡಾಡಿ ವರವ ಪಡೆದರು ಪ್ರತ್ಯಕ್ಷವಾಗಿ ಹರಹರಾ 25 ಲವಲವಿಕೆ ನನಗೆ ಹುಟ್ಟಿಲಾವಕೆ ಹೆಣಗಿದೆಲಿಂಗವನು ಗಳಿಸಿದೆಲೀಲೆ ಗಮನೆಲುಪ್ತವಾದೀತೆಂದುಲೂಟನೆ ಮಾಡಿದೆಲೇಸು ಲೇಸೆಂದರು ಭಕ್ತರೆಲ್ಲ ಲೈಕ್ಯದ ಹೆಸರೇನುಲೋಕದಂತಾಗದೆಲೌಸಡಿಯಿಲ್ಲದೆಲಂಭತನವೇ ಶಂಭುಶಂಕರ ನಿಮ್ಮಲಃ(ಲಾ)ಹಣೆವು ನರಗುಂಟು ಲೋಹ ಪರಿಸಕೆ ತಾ ಸೋಂಕಿದಂತೆ ಹರಹರಾ 26 ವಶವಾದ ಪರಬ್ರಹ್ಮವಾಸವಾಗಿರಲಿಕ್ಕೆವಿಷಯ ತಪ್ಪಿಸಿದೆನುವೀ(ವಿ)ಪರೀತ ಕೇಳಾ ವು(ಉ)ದಾಸವಿಲ್ಲದೆವೂ(ಉ)ಪರತಿಯ ಹೊಂದದೆವೇದವನು ಫುಂದದೆವೈದಿಕನೆ ಓದಿದ ಫಲವೇನುವೌಂ(ವಂ)ಶಿತ ನಾಗದೆವಂಮನವ ಬೀರದೆ ದೊಡ್ಡತನವೇ ವಃ(ವೋಹ)ಳ ಸೋಹಳವುಂಟು ತಾಮಕರ ದಾಮ ನಂಟು ವಾಸುದೇವನ ಗಂಟು ಕಟ್ಟಿಕೊಳ್ಳಿ ಹರಹರಾ 27 ತಿಮಿರ ನಿದ್ರಿ ಕಣ್ಣು ತೆರೆದ ಹರಹರಾ 28 ಸಕಲ ಶಾಸ್ತ್ರವನೋದಿಸಾಕಾರ ತಿಳಿಯದು ನಿರಾಕಾರ ಎಂಬುದು ಬಹಳ ದೂರಸಿದ್ಧವಾಗಿದ್ದದ್ದುಸೀ(ಸಿ)ಕ್ಕದು ಕೈಯೊಳಗೆಸುಳವಿಲ್ಲ ಕಳವಿಲ್ಲಸೂಕ್ಷ ಘನವು ಸೇರಿ ಬಾರದ ನುಡಿಗೆಸೈರಾವೈರಾವೆಲ್ಲಸೊನೆ ಸೊನೆ........ಸನ್ನಿಹಿತನುಸೌರಸಾ(ಸುರಸ)ವಾದನುಸಂಮ್ಯಗ್ e್ಞÁನವು ಬಲ್ಲಸಃ(ಸಹ)ಜಾನಂದ ತುಂಬನು ಲೌಕಿಕಕ್ಕೆ ಹರಹರಾ 29 ಹರ ಹರಾ ಎನುತಲಿ ಶಿವನಹಾಡಿಕೊಂಡೆಹಿತವು ತೋರಿತು ಘನಾಹೀ(ಹಿ)ತಕಾರಿಗೆಹುಗವರಿ ಕೇಳೊಲ್ಲಹೂ(ಹು)ಸಿಯ ತೀರ್ಥ3ಮಿಂದುಹೇತುವರ್ಜಿತನೆಂದು ಫಲವು ಕೊಂಡಹೈಯೆಂದು ನಿಂತಿತುಹೊಂಗಲ್ಲವಾ ಹಾಡುಗಳುಹಂಸ ಅರಿತುದಿಲ್ಲ ಬಲ್ಲ ತನವೇ ಹಮ್ಮು ನಡಿಯದು ಇಲ್ಲಿಹಃ(ಹಾಹಾ)ಕಾರ ಮಾಡಿದರೆ ಹಸಿದವನು ಉಣಬೇಕು ಬ್ರಹ್ಮರಸವ ಹರಹರಾ 30 ಕ್ಷಣ ಕ್ಷಣಕೆ ಶಿವನಿನ್ನಕ್ಷಾ (ಖ್ಯಾ)ತಿ ಕೊಂಡಾಡಿದಕ್ಷಿತಿಯ ಮೇಲಿಹುದುಕ್ಷೀರ ಉದಧಿಕ್ಷುದ್ರ ಕರ್ಮಿಗಳುಕ್ಷೂ(ಕ್ಷು)ದ್ರನೆ ಎನಿಸುವರುಕ್ಷೇಮ ಕಲ್ಯಾಣವ ಪಡೆಯರೆಂದೂಕ್ಷೈ(ಕ್ಷಯ) ವ್ಯಾಧಿ ಹೊಡೆದವನುಕ್ಷೋಭೆಯನು ಬಡುವನುಕ್ಷೌತಿಯನು ಕೂಡುತಿಹ ಜನ್ಮ ಜನ್ಮಕ್ಷಂ(ಕ್ಷೇ)ಮ ಸಾಯೋಜ್ಯಕ್ಕೆಕ್ಷಃ(ಕ್ಷಾ)ಳ ಸಕಲಪಾಪ ಪರಮಾತ್ಮ ಗತಿಗೆ ಕೋಪ ಪರಮ ಸಾಧು ಹರಹರಾ 31 ಅಮೃತ ಬಿಂದು ಪ್ರಕಾಶ ತಾನು ಶರಣರಿಗೆ ಇದು ಬೇಕು ಚರಣ ಸಾರಿದ ಟೀಕುಪರಬ್ರಹ್ಮದಾ ತೂರು ತೂಗಿಕೊಳ್ಳಿ 32 ಹರಹರಾ ಮಹಾದೇವ ಶಿವ ಶಿವಾ ಮಹಾದೇವಶಂಕರಾ ಮಹಾದೇವ ದೇವ ದೇವಾ ||
--------------
ನರಸಿಂಹ
ಅಧ್ಯಾಯ ಐದು ಶ್ರೀ ಕಾಲಿಯ ಫಣಾರ್ಪಿತ ಪಾದಾಂಬುಜಾಯನಮ ಶ್ರೀ ಗುರುಭ್ಯೋನಮಃ ಪದ, ರಾಗ ಸೌರಾಷ್ಟ ತಾಳ ತಿವಿಡೆ ಸ್ವರ ಋಷಭ ಬಿಡದೆ ಕೃಷ್ಣನ ಅಪ್ಪಿ ತಾಯಿಯು ನಡದಳಾ ಗೃಹಕಾರ್ಯದಲ್ಲೆ ನಡೆದವನು ಜೋಡ್ಯರಡು ಮತ್ತೀ ಗಿಡಗಳಿದ್ದಲ್ಲೇ ನಡೆದವುಗಳ ಮತ್ತವು ತಡದು ಅಡ್ಡಾಯಿತು ಊಲೂಬಲ ಕಡಕಡೆನುತಲಿ ಕಡದು ಬಿದ್ದವುಗಿಡಗಳವು ಎರಡು|| 1 ಪತಿತ ವೃಕ್ಷಗಳಿಂದ ಹೊರಟರು ಅತಿಸುರೂಪರು ಅತಿ ಮದೋನ್ಮತ್ತರು ಕುಬೇರನ ಸುತರು ಮಂಚೆವರು| ಪೃಥಿವಿಯಲಿ ತರುಜನ್ಮಕೊಂಡರು ಪ್ರಥಮ ನಳಕೂಬರನು ಎನಿಸುವ ದ್ವಿತಿಯ ಮಣಿಗ್ರಿವಾ|| 2 ವೃಕ್ಷ ಜನ್ಮದಿ ಮುಕ್ತರಾದರಧೋಕ್ಷಜನ ದಯದಿಂದ ಇಬ್ಬರು ವೃಕ್ಷ ಶಬ್ದವ ಕೇಳಿ ನೆರೆದರು ಆ ಕ್ಷಣಕೆ ಜನರು ಲಕ್ಷ್ಮಿ ಇಲ್ಯಲ್ಲರಿಗೆ ಹರಿ ಪುತ್ಯಕ್ಷ ಅಲ್ಲಿರಲು|| 3 ತನ್ನ ಮಗನಾಟವನು ತಿಳಿಯದೆ ಚನ್ನಿಗನು ಆನಂದಗೋಪನು ಮುನ್ನವನು ಕರಕೊಂಡು ನಡಿದನು ಕಣ್ಣಿಯನು ಬಿಟ್ಟಿ|| ಆದಾವೆಂದು ಚಿಂತಿಸಿ ತನ್ನ ಮನದೊಳಗೆ 4 ಹೂಡಿ ಭಂಡಿಗಳನ್ನು ಮರುದಿನ ಮಾಡಿಸಿದ್ಧವು ಎಲ್ಲರಿಂದಲಿ ಕೂಡಿ ವೃಂದಾವನಕ ಪೋಗುತ ಮಾಡಿದಾಶ್ರಯವು | ನೋಡಿ ಆ ವೃಂದಾವನ ಸ್ಥಳ ಗಾಢ ಹರುಷದಲಿ ಬಾಲರೆಲ್ಲರು ಕೂಡಿದರು ಕುಣಿದಾಡಿದರು ಙಡ್ಯಾಡಿದರು ಅಲ್ಲೆ5 ಸ್ವಚ್ಛ ಯಮುನಾ ತೀರದಲಿ ತನ್ನಿಚ್ಛಿಯಿಂದ ವಿಚಾರ ಮಾಡುವ ವತ್ಸಗಳ ಕಾಯುವನು ತಾ ಶ್ರೀ ವತ್ಸಲಾಂಧನನು| ವಂತ್ಸರೂಪದಿ ಬಂದ ಅಸುರನ ಪುಚ್ಛ ಹಿಂಗಾಲ್ಹಿಡದು ತಿರಿಗಿಸಿ ಉತ್ಸವದಿ ಮ್ಯಾಲೊಗೆದ ಬಿದ್ದಾವತ್ಸಹತವಾಗಿ|| 6 ನಳಿನನಾಭನು ಮುಂದ ಆತರಗಳಿಗೆ ತಾ ನೀರಕುಡಿಸಿ ತೀರದ ಮಳಲಿನೂಳಗಾಡುವನು ಮತ್ತಾ ಗೆಳೆಯರನ ಕೂಡಿ| ಖಳ ಅಸುರ ಬಕಪಕ್ಷಿ ರೂಪದಿ ಸುಳದು ಮೆಲ್ಲನೆ ಬಂದು ಬಾಲಕರೂಳಗಿರುವ ಕೃಷ್ಣನ್ನ ತಾ ಬಾಯ್ವಳಗ ನುಂಗಿದನು||7 ಸುಡುವ ಕೃಷ್ಣನ ಉಂಡು ದಕ್ಕಿಸಿಕೊಳದೆ ಘಾಬರಿಗೊಂಡು ಕಾರಿದನು| ತುಂಡು ಮಾಡಿಯೊಗದಾ||8 ಘಾಸಿ ಆಗದೆ ಉಳದನೆಂದು ತೀಸವಾಗ್ಯಲ್ಲಾರು ಬಹಳುಲ್ಹಾಸವನು ಬಟ್ಟು ಏಸುಕಾಲಕೆ ಬಿಡದೆ ನಮ್ಮನ್ನು ಘಾಸಿಮಾಡದೆ ಗುರು ಅನಂತಾದ್ರೇಶ ರಕ್ಷಿಸುವೋನು ಎಂದು ಆ ಸಮಯದಲ್ಲಿ 9 ಪದ್ಯ ಸಾಧು ಹಿತಕರ ಕೃಷ್ಣಯಾದವರಲ್ಯವ ತರಿಸಿ ಐದು ವರ್ಷಾದ ಮ್ಯಾಲ್ಕಾಯ್ದನು ಆಕಳುಗಳನು ಆದರದಿ ಮತ್ತು ರಾಮಾದಿಗಳಕೂಡಿ ಬೇಕಾದ ಆಟಗಳಾಡಿ ಅನುಸರಿಸಿ ಆ ಧೇನುಕಗಳ ಕೂಡಿ ಸ್ವಾದು ಫಲಗಳು ಕೋಮಲಾದ ತೃಣ ಇದ್ದಲ್ಲೆ ಆದಿಯಲಿ ಬಲರಾಮ ಹಾದಿಯನು ಮಾಡಿ ಮುಂಧೋದ ಆ ಸ್ಥಳಕ್ಕೆ || 1 ನೋಡ್ಯಲ್ಲೆ ತಾಳಾಖ್ಯ ಪ್ರೌಢ ವೃಕ್ಷಗಳನ್ನು ಆ ಫಳಗಳನ್ನು ಪ್ರೌಢಫಲಗಳು ನೋಡಿ ಅಬ್ಬರದಿಂದ ಓಡಿ ಬಂದನು ಅಸುರ ಕೂಡಿ ತನ್ನವರಿಂದ ಕಾಡ ಖರರೂಪಿ ಅವ ಮಾಡಿ ಕ್ರೂರಧ್ವನಿಯ ಮಾಡಿದನು ಮೂಢಧೇನುಕನು 2 ಖಡುಕೋಪದಲಿ ರಾಮ ಹಿಡಿದು ಹಿಂಗಾಲುಗಳ ತಡಿಯದಲೆ ತಿರಿವ್ಯಾಡಿ ಗಿಡದ ಮ್ಯಾಲೊಗದ ಆ ಗಿಡಕ ಭಾರಾಗ್ಯವನು ಗಿಡಸಹಿತ ಪ್ರಾಣ ವನು ಬಿಡುತಲೆ ಬಿದ್ದನು ತೆಳಗೆ ತಡವು ಇಲ್ಲದಲೆ| ಬಿಡದೆ ವಸುದೇವಜರು ಬಿಡಿ ಮೆಂದಿಗಳ ಕೊಂಡು ಖಡು ಹರುಷದಿಂದಲ್ಲೆ ಬಿಡದೆ ಗೋಪಾಲರಿಂದೊಡಗೂಡಿ ಎಲ್ಲಾರು ಖಡು ರುಚಿಕರಾಗಿರುವ ಗಿಡದ ಫಲಗಳ ತಿಂದು ನಡದರಾಲಯಕೆ|| 3 ಬಂದು ದಿನದಲಿ ದಿವಿಜವಂದಿತನು ಶ್ರೀ ಕೃಷ್ಣವಂದಿಸ್ಯಗ್ರಜಗ ಅವನ ಮಂದಿರದಲಿಟ್ಟು ಬಹು ಛಂದವಾಗಿರುವ ಕಾಳಿಂದಿಯಾ ತೀರದಲಿ ಬಂದÀ ಗೋಗೋಪಾಲ ವೃಂದವನು ಕಾಲಂದಿಯಲಿ ವಿಷಜಲವು ಛಂದಾಗಿ ಕುಡದುಮರಣ ಬದಿಕಿಸಿದ ಗೋವಿಂದ ಎಲ್ಲಾರನಾ|| 4 ಚಾರು ಕಾಲಿಂದಿಯಲಿ ನೀರು ವಿಷವಾದಕ್ಕೆ ಕಾರಣ ಹುಡುಕುವೆನೆಂದ ಶೌರಿಸುತ ಶ್ರೀಕೃಷ್ಣಸಾರ ಕಡಹಾಲ ಮರನೇರಿ ಆ ಮಡಿವಿನಲಿ ಹಾರಿದಾಕ್ಷಣಕ್ಕೆ ಉಕ್ಕೇರಿದಳು ಸಾರ ಮದಗಜದಂತೆ ನೀರೊಳಗೆ ಗಡಬಡಿಸಿ ಸಾರ ಸರ್ಪನ ಹಿಡಿದ ಕ್ರೂರನವ ಮೈಮ್ಯಾಲೇರಿ ಕಚ್ಚುತ ತನ್ನ ಶರೀರಪಾಶದಿ ಹರಿ ಶರೀರ ಸುತ್ತಿದನು||5 ದುಷ್ಟಾಹಿಯಿಂದ ನಿಶ್ಚೇಷ್ಟನಾದನು ಕೃಷ್ಣದೃಷ್ಟಿಯಿಂದಲಿ ನೋಡಿ ಅಷ್ಟು ಗೋಗಳು ಮತ್ತೆ ಅಷ್ಟೆಗೋಪಾಲಕರು ಕಷ್ಟವನು ಬಟ್ಟು ಉತ್ಕøಷ್ಟ ತಾಪದಲೆ ನಿಶ್ಬೇಷ್ಟರಾದರು ಅಲ್ಲೆ ಕಾಷ್ಟಮೂರ್ತಿಗಳಂತೆ ಸ್ಪಷ್ಟತೋರಿದರು| ಗೋಷ್ಟದಲಿ ಮತ್ತೆಲ್ಲ ದುಷಚಿನ್ಹವು ಕಂಡು ಶೇಷ್ಠ ನಂದಾದಿಗಳು ಕÀಷ್ಟದನು ಬಟ್ಟಸಂತುಷ್ಟರಾಮನ ಕೂಡಿ ಅಷ್ಟೂರು ನಡದರಾ ವೃಷ್ಣಿಕುಲ ತಿಲಕ ಶ್ರೀಕೃಷ್ಣ ಇದ್ದಲ್ಲೆ||6 ಮುಂದವನ ತಾಯಿ ಆಕಂದನಾ ಕಂಡು ಕಾಳಿಂದಿಯಲಿ ಧುಮುಕಬೇಕೆಂದು ಧಾವಿಸಲಾಗಿ ಮಂದಗಮನಿಯರೆಲ್ಲ ಹಿಂದಕ್ಕ ಸರಿಸಿದರು ನಂದಗೋಪನ ಹಿಡಿದು ಹಿಂದಕ್ಕ ಸರಿಸಿದನು óಛಂದದಲಿ ರೋಹಿಣಿಯ ಕಂದ ಬಲರಾಮಾ| ಮುಂದೆರಡು ಫಳಿಗಿ ಮ್ಯಾಲೆ ಛಂದಾಗಿ ಎಚ್ಚÀ್ಚರಿಕಿಯಿಂದ ಸರ್ಪನ ಹಿಡಿದು ಹಿಂದೊತ್ತಿ ಹೆಡಿಮೇಲೆ ಛóಂದಾಗಿ ಮಂದ ಹಾಸ್ಯದಿ ನಗುತ ನಂದಸುತ ಕುಣಿದ ಆನಂದದಿಂದಾ|| 7 ಪದ, ರಾಗ:ಆನಂದ ಭೈರವಿ ಆದಿತಾಳ ರಂಗ ಕುಣಿದ ಕಾಳಿಂಗನ ಹೆಡಿಮ್ಯಾಲ ಕಂಗಳಿಂದಲಿ ನೋಡಿ ಹಿಂಗದೆ ಸುರಕಿಲ್ಲ ಸಂಗೀತ ಸಹಿತ ಸಾರಂಗ ಮೃದಂಗ ತಾಲಂಗಳ ನುಡಿಸಿದರು ಹಿಂಗದಲೆ||ಪ ಹಿಂಗದೆ ಯಮುನಿ ತರಂಗಗಳಿಂದಲೆ ಮಂಗಳಾಂಗನ ಪಾದಂಗಳ ತೊಳುವಳು | ಅಂಗಾಲಿಲ್ಯವನು ಕಾಳಿಂಗನ ಮರ್ದಿಸಿ ಮಂಗಳ ಕೂಡುವ ಜಗಂಗಳಿಗೆ | ಮಂಗಳಕರ ಪುಷ್ಟಂಗಳ ದೃಷ್ಟಿಯ ರಂಗಗ ಮಾಳ್ಪರು ಹಿಂಗದೆ ದಿವಿಜರು ಭೃಂಗಕೋಕಿಲ ಮಯೂರಂಗಳು ಮಾಳ್ಪವು ರಂಗನ ಸಂಗಾತ ಸಂಗೀತವು|| 1 ಮುನ್ನಾಗಿ ಬಹುವರ್ಷ ತನ್ನ ಸಂದರ್ಶನವನ್ನು ಬಯಸುವಂಥ ಮಾನ್ಯಾದ ಮುನಿಗಳಿಗೆ ಚೆನ್ನಾಗಿ ಶ್ರೀಹರಿ ತನ್ನ ಕೃಷ್ಣರೂಪವನ್ನು ತೋರಿಸುತ ಪ್ರಸನ್ನನಾಗಿ| ಉನ್ನತವಾಗಿಹ ಪನ್ನಗಾಧೀಶನ ಉನ್ನತವಾಗಿಹ ಘನ್ನ ಹೆಡಿಗಳಲ್ಲಿ| ರನ್ನದಂಥೊಳುವಂಥಾ ತನ್ನ ಪಾದಗಳಟ್ಟು ತನ್ನಂಗಡ ಧಿನ್ನಂ ಗಡ ಧಿಕ್ಕಡ ಥೌ ಎಂದು|| 2 ಎಂತು ವರ್ಣಿಸಲಿ ಅನಂತ ಮಹಿಮಿಯು ಎಂಥವರಿಗೆ ಬಹಿರಂತವ್ರ್ಯಾಪತನಾಗ್ಯನಂತ ಪ್ರಾಣಿಗಳಲ್ಲಿ ನಿಂತಿರುವಾ| ಅಂತ್ಹತ್ತಗುಡದೆ ತನ್ನಂತೆ ತಾ ಕುಣಿದಾಡುವಂಥದಗನ್ಯ ದೃಷ್ಟಾಂತವೆಂಬುದಿಲ್ಲ ಇಂಥ ಎಲ್ಲರು ಭ್ರಾಂತರಾಗಿ|| 3 ಆರ್ಯಾ ಪದ, ರಾಗ :ಜಾಂಗಲಾ ಶ್ರೀ ಪತಿಯೇ ನಮ್ಮ ಪ್ರಾಣಪತಿಯ ಪಾಲಿಸು ಶ್ರೀ ಪತಿಯೆ|| ಪ ಪತಿಯು ಪಾವಿತನಾದ ಹಿತವಾಯಿತು||1 ಫಣಿಯ ಫಣಗಳಲ್ಲಿ ಪ್ರಣಯದಲಿ ಕಾಲಿಟ್ಟ ಶುಣಿಕುಣಿ ದಾಡಿದ್ದು ಗುಣವಾಯಿತು|| 2 ಮುದ್ದು ಮುಖದ ಅನಂತಾದ್ರೀಶ ದುಃಖ ಸಮುದ್ರದಿಂದ ನಮ್ಮನ್ನು ಉದ್ಧಾರ ಮಾಡು 3 ಆರ್ಯಾ ಕೃಷ್ಣ ವೇಣಿಯರ ಕಷ್ಟನೋಡಿ ಶ್ರೀ ಕೃಷ್ಣ ಅವನ ಬಿಟ್ಟನುಬ್ಯಾಗೆ| ಕೃಷ್ಣನೇ ಸಾಕ್ಷಾದ್ದಿಷ್ಣುನೆಂದು ಆ ಕೃಷಸರ್ಪ ನುಡಿದನು ಹೀಂಗೆ|| 3 ಭಕುತಿಯ ಕೊಡು ಮೋಹನಾ|| ಪ ಚನ್ನಾಗಿಕೊಡು ನೀನಿನ್ನಲ್ಲಿ ಧ್ಯಾನಾ||1 ಲೋಕನಾಥನೆ ನಿನ್ನ ತೋಕನೆಂದರಿತು|| 2 ಹರಿಯೆ ಅನಂತಾದ್ರಿ ದೊರಿಯೆ ಎಂದೆಂದು|| 3 ಆರ್ಯಾ ಕಾಳಿಯ ನುಡಿಯನು ಕೇಳುತ ಶ್ರೀ ಪತಿ ಭಾಳ ಪ್ರೇಮದಲಿ ಹೀಗೆಂದಾ | ಹೇಳುವೆ ಕಾಳಿಯ ಕೇಳ್ಯನ್ನಯ ವಚನಾ ಏಳು ಶೀಘ್ರದಲಿ ಇಲ್ಲಿಂದಾ|| 1
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ನಾಲ್ಕು ತೃಣಾವರ್ತ ಪ್ರಾಣಾಪಹತ್ರ್ತೇ ನಮಃ ಶ್ರೀ ಗುರುಭ್ಯೋ ನಮಃ ಪದ ರಾಗ:ದೇಶಿ ಅಟತಾಳ ಸ್ವರ ಷಡ್ಜ ಛಂದಾದುತ್ಸವ ಬರಲು ಆನಂದದಿಂದಿರುತಿಹಳು|| 1 ದ್ವಿಜವೃಂದಕ್ಕ ಭೋಜನವು|| ಕೊಂಡವರಿಂದ ಆಶೀರ್ವಾದವು|| 2 ಖಡುನಿದ್ರಿ ನೋಡಿದಳು| ಭಂಡಿಯ ಬುಡಕಮಲಗಿಸಿದಳು 3 ಮತ್ತ ಪೂಜಿಸುತಿಹÀಳು|| ಮತ್ತುಡಿತುಂಬಿದಳು|| 4 ಭಾಳಾಗಿ ರೋದನವು | ಕೇಳಲಿಲ್ಲ ಶಬ್ದವು|| 5 ಕಾಲಿಲೆ ಒದ್ದನಾಗೆ| ಬುಡಮೇಲಾಗಿಬಿದ್ದಿತಾಗೆ|| 6 ಕಡ ಶಬ್ದ ಮಾಡುತಲೆ|| ಕೊಡಗಳು ಒಡದವಲ್ಲೆ||7 ನೆರೆದು ಮಾತಾಡಿದರು| ಮುರಿದಂಥವರು ದಾರಿರದೆ ಭಂಡಿಯುತಾನೆ ಮುರದಿತು ಹ್ಯಾಗೆಂದರು|8 ಬಾಲಕರಂದರಾ ಕಾಲಕ್ಕೆ ಈ ಕೂಸಿನ ಕಾಲಿಲೇ ಒದ್ದಿತ್ತೆಂದು| ಬಾಲರನುಡಿಗೆ ಗೋಪಾಲರು ನಕ್ಕರು ಬಾಲರ ಮಾತೆನ್ಯಂದು|| 9 ಗೋಪಿ ಬಿಡದಪ್ಪಿ ಕೂಂಡಳಾಗೆ || ಬಿಡದೆ ಆಡಿಸಿದಳಾಗೆ|| 10 ಧಿಟ್ಟನಂದಗೋಪ ಥಟ್ಟನೆ ಭಂಡಿಯ ಮುಚ್ಚಿ ಪೂಜಿಸುತಿಹನು| ದಿಟ್ಟಾಗಿ ದ್ವಿಜರಿಗೆ ಕಟ್ಟ ಇಲ್ಲದಲೆ ಕೊಟ್ಟಾನು ಗೋಗಳನು||11 ಕಜ್ಜಲಾದಿಗಳಿಂದ ದುರ್ಜನದೃಷ್ಟಿ ವಿಸರ್ಜನ ಮಾಡಿಸುವಾ| ಸಜ್ಜನರಿಂದ ಸುಪೂಜ್ಯ ಮಂತ್ರಿಗಳಿಂದ ಮಾರ್ಜನ ಮಾಡಿಸುವಾ||12 ಖಳರನ್ನು ಕೊಲುವನು| ಬೆಳುವಾನಂತಾದ್ರೀಶನು||13 ಪದ್ಯ ಮಂದ ಗಮನಿಯು ತನ್ನ ಕÀಂದನ ಎತ್ತಿ ಆನಂದದಿಂದಾಡಿಸಲು ಕಂದನಾದನು ಭಾರದಿಂದ ಬೆಟ್ಟದ ಘಾಳಿಯ ರೂಪದಿಂದಲಿ ತೃಣಾವರ್ತ ಮುಂದ ಚಕ್ರದ ಕಂದನಾ ಎತ್ತಿ ತ್ವರದಿಂದ ಬಿಡದಲೆ ವೈದ ಮುಂದ ಗಗನಕ್ಕೆ|| 1 ತಿಳಿವುತಲೆ ಮರ್ತೆಲ್ಲ ಚಿಂತಿಗಳ ಮರ್ತಳಾಗೆ|| 2 ಶ್ರೀಕಾಂತನಾ ಜನನಿ ತೋಕ ಗೋವಿಂದನು ಮೊಲಿಯು ತಾ ಕುಡುತಲಿರುತಿರಲು ಆ ಕಾಲದಲ್ಯವನು ಆಕಳಿಸಿದನು ಬಾಲ ಆಕ್ಯವನ ಬಾಯ ಒಳಗೆ ತಾಕಂಡಳೆಲ್ಲ ಭೂಲೋಕ ಬಿಸ್ತರವು| ಆ ಮ್ಯಾಲಕೊಂದು ದಿನ ಆ ಮಹಾತ್ಮನು ಗರ್ಗನೇಮಿಷ್ಯಲ್ಲಿಗೆ ನಾಮಕರಣವ ಮಾಡಿ ನೇಮಿಸ್ಹೇಸರಿಟ್ಟ ಬಲರಾಮ ಕೃಷ್ಣೆಂದು|| 3 ಸಂಭ್ರಮದಿ ಮುಂದವರು ಅಂಬಿಗಾಲಿಕ್ಕಿ ಬಹಳ್ಹಬಲವತೋರಿ ಆಯತ ತಾಯಿ ಎಂಬುವರು ತೊಡಿಯ ಅವಲಂಬಿಸಲು ನೋಡುವರು ಸಂಭ್ರಮದಿ ಎತ್ರದ್ಯಕೊಂಬುವರು ಬ್ಯಾಗೆ| ಅಂಬುಜೋದ್ಭವಪಿತನು ಸ್ತಂಭಾದಿಗಳನು ಅವಲಂಬಿಸುತ ನಡಿದಾಡಿ ಹಂಬಲಿಸಿ ಮುಂದ ತನ್ನ ನಂಬಿದ್ದ ಗೆಳೆಯರನ ನಂಬಿಗೋಕುಲದಲ್ಲಿ ತುಂಬೆ ಓಡ್ಯಾಡಿದನು ಅಂಬುಜಾಕ್ಷಾ|| 4 ಮುಂದ ಬಹು ಮಂದಿಗಳ ಮಂದಿರದ ಒಳಘೋಗಿ ಸಂದೇಹ ಇಲ್ಲದಲೆ ಛಂದಾದ ಬೆಣ್ಣಿಯನು ತಿಂದಿರುವ ತಿಂದು ಇಲ್ಲಂದಿರುವ ಮನಿಯಲ್ಲಿ ಬಂದಿರುವ ಕಲಹವನು ತಂದಿರುವ ನಿತ್ಯಾ| ನಂದನಂದನವ ಒಂದೂಂದು ಅಪರಾಧವನು ನಂದ ಪತ್ನಿಗೆ ತಿಳಿಯತಿಂದು ಮನದಲಿ ಮಾಡಿ ಒಂದು ದಿನ ಎಲ್ಲಾರು ಒಂದಾಗಿ ಮನಿಮುಟ್ಟ ಬಂದು ಗೋಪಿಯರು ಹೀಗೆಂದರಾಗೆ|| 5 ಪದ, ರಾಗ :ಶಂಕರಾಭರಣ ತಾಳ ತ್ರಿವಡಿ ಅಟ್ಟುಳಿ ಕುಡುವನೋಡಮ್ಮಾ| ಈ ಕೃಷ್ಣ ನಿನ್ನ ಮಗ| ಅಟ್ಟುಳಿ ಯಥೇಷ್ಟ ಇರುವದು ಸ್ಪಷ್ಟ ನಾನಿನಗೆಷ್ಟು ಪೇಳಿದರಷ್ಟೆ ತಾ ಮತ್ತಿಷ್ಟು ಮಾಡುವಾ|| ಪ ಸಿಕ್ಕ ಮನಿಮನಿ ಹೊಕ್ಕು ನೋಡುವನೆ| ತಾ ಸಿಕ್ಕದಿರುವವ ತತ್ಕ ತುಡಗಿವ ಠಕ್ಕನಾಗಿಹನೆ ಅಕ್ಕಕೇಳ್ಬಹಳಕ್ಕರದಿ ಕೈಯಿಕ್ಕಿ ಕಡದಿಹ ಚೊಕ್ಕ ಬೆಣ್ಣಿÂಯ ಚಿಕ್ಕ ಬಾಲಕರಿಗಿಕ್ಕಿ ತಿಂಬುವ ಮಿಕ್ಕ ಬೆಣ್ಣಿಯ ಬೆಕ್ಕಿಗ್ಹಾಕುವಾ|| 1 ಅಡಗಿ ಮನಿಯಲಿ ಅಡಗಿ ಕೊಂಡಿರುವಾ | ಅಲ್ಲಿರುವ ಭಾಂಡವು ಬುಡವು ಮೇಲಾಗ್ಯಾಡಕಲೇರಿಸುವಾ| ಅಡಿಗಳನು ಅಲ್ಲಿಡುತ ನೆಲೆವಿನಲಿಡುವ ಪಾಲ್ಮಸರ್ಕುಡುವ ಗೆಳೆಯರಿಗಿಡುವ ತೀರಲು ಬಿಡದೆ ಮತ್ತಾ ಗಡಗಿಯನು ನಿಂತು ನಗುವನಂತಾದ್ರೀಶನು 2 ಆರ್ಯಾ ಪರಿ ಗೋಪಿ ಯಶೋದಿಯು ತಾ ನಕ್ಕು|| ಕೋಪಿಸಲಿಲ್ಲವು ವ್ಯಾಪಕನಾಗಿಹ ಆ ಪುತ್ರನ ಸ್ನೇಹದಿ ಸಿಕ್ಕು|| 1 ಪದ್ಯ ಒಂದು ದಿನದಲಿ ಸ್ನೇಹದಿಂದ ರಾಮಾದಿಗಳು ಛಂದಾಗಿ ಕೊಡಿ ಆನಂದ ದಿಂದಾಡುತಿರೆ ಮುಂದವರು ತಾಯಿಯ ಮುಂಧೇಳಿದರು ನಿನ್ನ ಕಂದ ಕೃಷ್ಣನು ಮಣ್ಣು ತಿಂದನೆಂದು ಅಂದ ಮಾತನು ಕೇಳಿ ಮಂದಗಮನಿಯು ತಾನು ಕಂದನಾ ಕೈ ಹಿಡಿದು ಮುಂದಕ್ಕೆ ಕರದು ಭಯದಿಂದ ಇರುವವನ ಕಣ್ಲಿಂದ ನೋಡುತಲೆ ಅಂದಳೀಪರಿಯು ಹಿತದಿಂದ ಬಣ್ಣೆಸುತಾ|| 1 ಪದ, ರಾಗ:ಶಂಕರಾಭರಣ ತಾಳ:ತ್ರಿವಿಡಿ ಮಣ್ಣ್ಯಾಕ ತಿಂಬುವಿಯೋ| ಅಪ್ಪಯ್ಯಾ ಕೃಷ್ಣಾ| ಮಣ್ಣ್ಯಾಕ ತಿಂಬುವಿ ಉಣ್ಣಂದರವಲ್ಲಿ|| ಪ ಅನ್ನದೊಳಗ ಸವಿ ಬೆಣ್ಣಿಯೊಳಗ ಸವಿ ಹಣ್ಣಿನೊಳಗ ಸವಿ ಮಣ್ಣೇನು ಸವಿ ಕೃಷ್ಣ|| 1 ಮಣ್ಣುತಿಂದಿಹನೆಂದು ಸಣ್ಣವರ್ಹೇಳೋರು ಕಣ್ಣತಿ ಕಂಡು ನಿಮ್ಮಣ್ಣ ಹೇಳುವ ಮತ್ತ|| 2 ಸಣ್ಣಕ್ಕಿ ಅನ್ನವು ಬೆಣ್ಣೆ ಕಾಶಿದ ತುಪ್ಪ ಉಣ್ಣೊ ಮತ್ತಿಷ್ಟು ನಮ್ಮಣ್ಣಾನಂತಾದ್ರೀಶಾ|| 3 ಆರ್ಯಾ ಜನನಿಯ ನುಡಿ ಸಜ್ಜನರೊಡಿಯನು ತಾ ಅನುಸರಿಸುತ ಮನಸಿಗೆ ತಂದು| ಜನನ ರಹಿತ ಆ ಜನನಿಗೆ ನುಡದನು ಅನುಮಾನವಿಲ್ಲದೆ ಹೀಗೆಂದ|| 1 ಪದ, ರಾಗ:ಶಂಕರಾಭರಣ ಮಣ್ಣು ತಿಂದಿಲ್ಲವÀಮ್ಮ| ತಿಂದಿಲ್ಲ ಮಣ್ಣು ಎಂದ್ಯಂದಿಲ್ಲವಮ್ಮ ಪ ಬಟ್ಟಹಚ್ಚಿಕೈಲೆ ಮುಟ್ಟಿಲ್ಲವಮ್ಮಾ| ಧಿಟ್ಟಾಗಿ ಹೆಜ್ಜೆ ಹೊರಗಿಟ್ಟಿಲ್ಲವಮ್ಮಾ|| 1 ಎಲ್ಲೆ ಹೋಗದೆ ನಾ ಇಲ್ಲಿದ್ದೇನಮ್ಮಾ | ಎಲ್ಲಾರು ಈ ಪರಿ ಸುಳ್ಳಾಡೋರಮ್ಮ|| 2 ಆಣಿ ಕಾಣಮ್ಮ|| 3 ಪದ್ಯ ಕಾಯಜನಪಿತ ತನ್ನ ಬಾಯಲೀ ಪರಿಯನಲು ತಾಯಿ ಆ ಕಾಲದಲಿ ಬಾಯಿನೋಡುವೆನೆನಲು ತಾಯಿ ನೀ ನೋಡೆಂದು ಆ ಯಶೋದಿಯ ಮುಂದ ಆ ಎಂದು ಬಾಯದೆಗೆದ ಆಯತಾಕ್ಷಾ| ಬಾಯವಳಗೆ ಕಂಡಳಾ ತಾಯಿ ಲೋಕಗಳೆಲ್ಲಾ ಬಾಯಿವಳಗ ಗೋಕುಲವು ತಾಯಿಇರುವಳಲ್ಲೆ ಭ್ರಮಿಸಿದಳು ಮಾಯವೊ ಇದು ಸ್ವಪ್ನ ಪ್ರಾಯವೂ ಬುದ್ಧಿ ವ್ಯವಸಾಯವೊ ಎಂದು|| 1 ಲಗಬಗಿಯ e್ಞÁನಚಕ್ಷುಗಳಿಂದ ನೋಡಿ ರೋಮಗಳುಬ್ಬಿ ಗಂಟಲವು ಬಿಗಿದು ಸಂತೋಷದಲಿ ಮಗನಲ್ಲ ಇವ ಸರ್ವ ಜಗದೊಡೆಯನೆಂತೆಂದು ಬಗಿಬಗಿಯ ಸ್ತುತಿಮಾಡಿ ಕೈಮುಗಿದಳಾಗೆ | ಜಗದೀಶ ಮತ್ತ ಲಗಬಗಿಯ ಮೋಹಪಾಶ ಬಿಗದು ಕಟ್ಟಿದನಾಗೆ ಮಗನೆಂದು ತಿಳಿದಾಕಿ ಬಿಗಿದಪ್ಪಿ ಮುದ್ದಾಡಿ ಹಗಲಿರುಳು ತಾನು ಕಾಲವನು ಕಳದಳಾ ಮಗನಾ ಸಂಭ್ರಮದಿ|| 2 ಖಡುನಂದಗೋಪನಾ ಮಡದಿ ಒಂದಿನದಲಿ ಬಿಡದೆ ದಾಸಿಯಕಿಲ್ಲ ಬಿಡಿಗೆಲಸ ಮಾಡುತಿರೆ ಖಡು ಹರುಷದಲಿ ದೂಸರು ಕಡವುವಳು ತಾನೇವ ನಡುವೆ ಕೃಷ್ಣನ ಲೀತಿ ನುಡುವುತಿಹಳು| ಧಡಿಯ ಪೀತಾಂಬರವು ಶಡಗರದಿ ಉಟ್ಟಿಹಳು ಮಡಿಯ ಕುಪ್ಪಸವು ಬಿಗಧಿಡದು ತೊಳ್ಳಿಹಳು ಆ ಮಡಿಯ ಕುಪ್ಪಸದೊಳಗ ಅಡಗಿರುವ ಶುಚವೆರಡು ಬಿಡದೆ ಮಗನಲಿ ಸ್ನೇಹ ತೊಡಕಿ ತೊರದಿವಹು|| 3 ನಡವಿನೊಡ್ಯಾಣ ಬಡನಡುವಿನಲಿ ಇಟ್ಟಿಹಳು ಕಡಗ ಶಂಕಣ ಕೈಲೆ ಕಡಗೋಲಧಗ್ಗವನು ಹಿಡಿದೆಳೆದು ಶ್ರಮದಿಂದ ಕಡುವಂಥ ಕಾಲದಲಿ ನಡುಗುತಿಹವೆರಡೂ ಕುಚ\ ಬಡನಡವು ಬಳಕುವುದು ಬಿಡದೆ ಮುಖದಲ್ಲಿ ಬೆವರು ಬಿಡುವುದದು ತುರಬಿನಲಿ ಮುಡಿದ ಮಲ್ಲಿಗಿ ಹೂವು ಸಡಲುತಿಹವು| ಗಡಬಡಿಸಿ ಕೃಷ್ಣ ಮಲಿ ಕುಡಿಯ ಬೇಕೆನುತ ಆ ಕಡುವ ಕಾಲಕ ಬಂದು ದೃಢವಾಗಿ ಕಡಗೋಲು ಹಿಡಿದು ಮಾತಾಡಿದನು| ಕಡುವ ಈ ಕೆಲಸ ನೀ ಬಿಡು ಅಮ್ಮ ಎನಗಮ್ಮಿ ಕೂಡು ಬ್ಯಾಗ ಎಂದು|| 4 ಬಿಟ್ಟು ಆ ಕೆಲಸವನು ಥಟ್ಟನೆ ಆ ಮಗನ ಘಟ್ಟ್ಯಪ್ಪಿಕೂಂಡು ಮುದ್ದಿಟ್ಡು ಮುಖ ನೋಡುತಲೆ ದಿಟ್ಟಾಗಿ ತೂಡೆಯ ಮ್ಯಾಲಿಟ್ಟು ಬಹುಸಂಭ್ರಮ ಬಟ್ಟು ತೊರದಿಹÀ ಮೊಲಿಯ ಕಟ್ಟಕಡಿಗ್ಯಾಪಾತ್ರ ಬಿಡ್ಹೊರಗ ಛಲ
--------------
ಅನಂತಾದ್ರೀಶ - ಕಥನಕಾವ್ಯಗಳು
ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು e್ಞÁನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವe್ಞÁನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಆತನೇ ಪರಮಾತ್ಮ ಪರತತ್ತ್ವ ಪ್ರಣವನೆಂ-ದರಿತು ಪೂಜಿಸಬಾರದೆಆತನಾ ಪದತೋಯ ಶಿರಸಾ ವಹಿಸಿ ಪಾನ-ದಿಂದಧಿಕರಾದರು - ಜೀವಿಗಳು ಮನುಜ ಪ ದಾನಮುಖದಲಿ ಬಲಿಯ ಬೇಡಿ ಭುವನವನೊಂದುಪದದಿ ಅಳೆದವನಾವನುಮಾನದಾನವನ ನಾಲ್ಮೈಯ ಮುಡಿಗಟ್ಟಿವನಮಾನ ಉಳುಹಿದನಾವನುಮಾನ ಮರುಳಾದವನ ಮರ್ದಿಸಿದ ಬ್ರಹ್ಮಹತ್ಯೆಮಹಿಗೆ ಇಳುಹಿದನಾವನುಭಾನು ಮೊದಲಾದಖಿಳ ಬ್ರಹ್ಮಾಂಡಗಳಿಗೊಂದುಪಾದ ಹೊದಿಸಿದನಾವನು ? 1 ಕೊಟ್ಟ ವರಗಳನೆಲ್ಲ ಕೊಡಹಿ ಬಹು ದನುಜರನುಕುಟ್ಟಿ ಹಾಕಿದನಾವನುದಿಟ್ಟವರ ಕಾಲಾಂಣ(?) ಕಟ್ಟಿ ಮುನಿ ದೈವಗಳ ಪಟ್ಟದರಸು ಅದಾವನುಬೆಟ್ಟದಾತ್ಮಜೆ ಬೆನಕ ಪೆಸರ್ಗೊಂಡು ತನ ನಾಮಗುಟ್ಟಿನಲಿ ನೆನೆಸಿದುದಾವನುಗಟ್ಟಿಯಾಗಿ ಮುನಿಪೆಣ್ಗೆ ಕೊಟ್ಟಿದ್ದ ಶಾಪವನುಬಿಟ್ಟೋಡಿಸಿದನಾವನು ? 2 ಅಖಿಳ ಮಹಿ ನಟಿಸುವ ಮಹಾತ್ಮಕನಾದ ಸಾತ್ತ್ವಿಕನಾವನುಆದಿಯಲಿ ಜಗಗಳಿರದಂದು ವಟಪತ್ರಶಯನನಾದ ಮೂಲವದಾವನುಆದಿಕೇಶವ ದೈವವಲ್ಲದಿನ್ನಿಲ್ಲವೆಂದುಆಗಮವು ನುಡಿವುದಾವನನು ? 3
--------------
ಕನಕದಾಸ
ಆರೋಗಣೆಯ ಮಾಡು ಸಾರಸುಖದೊಡೆಯ ಪ. ಸತ್ಯವಾದ ಜಗಕೆ ಕರ್ತುಕಾರಣ ನೀನೆ ಮುಕ್ತಿದಾಯಕ ನಿತ್ಯತೃಪ್ತನಹುದೈ ಸತ್ಯವಾದವತಾರ ಸಕಲಗುಣ ಪರಿಪೂರ್ಣ ಸಿರಿ ಪರಮ ದಯಾಳು1 ಅಣುರೋಮಕೂಪದಲಿ ಅಂಡಜಾಂಡಗಳಿರಲು ಘನಕೃಪಾಂಬುಧಿ ನಿಮ್ಮ ಪೊಗಳಲಳವೆ ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ ಘನಭಕುತಿಲ್ಯಜಭವರು ಪೂಜೆಮಾಡುವರು 2 ಗಂಗೆಗೋದಾವರಿ ತುಂಗಭದ್ರೆ ಯಮುನೆ ರÀಂಗಸನ್ನಿಧಿಯಾದ ಕಾವೇರಿಯು ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ ಅಂಗಜನಯ್ಯ ಭಾಪೆಂದು ಪೊಗಳೆ 3 ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ ಚೆನ್ನಾಗಿ ನೈವೇದ್ಯವನ್ನೆ ಮಾಡುವರು 4 ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ ಮುಂದೆ ಕುಂಕುಮದ ಕೇಸರಿಯ ಲೇಪ ಚೆಂದದ ಕೇದಿಗೆ ಮುಡಿವಾಳ ಸಂಪಿಗೆ ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ 5 ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ ನಸುನಗುತ ಇಂದಿರಾದೇವಿ ಬಡಿಸೆ 6 ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ ನಾರು ಬಣ್ಣದ ಚಿನ್ನದ್ಹರಿವಾಣವು ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ ಮೇರುಗಿರಿಯೆಂಬೊ ದೀಪಗಳು ಬೆಳಗೆ 7 ಘೃತ ಸೂಪ ಲೋಕಪತಿಗನುವಾದ ದಿವ್ಯಾನ್ನವು ಬೇಕಾದ ಪಂಚಭಕ್ಷ್ಯ ರಸಾಯನವ ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ 8 ಖಳರಕುಲವೈರಿಗೆ ತಿಳಿನೀರುಮಜ್ಜಿಗೆ ಎಳನೀರು ಪಾನಕ ಸೀತಳುದಕ ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು 9
--------------
ವಾದಿರಾಜ
ಈ ಧರೆಯೊಳಗಿಂಥಾ ಸೊಬಗ ಕಾಣೆನೋ ಪ ಕಂತುಪಿತ ತನ್ನ ಕಾಂತೇಯರೊಡಗೂಡಿ | ನಿಂತು ಮಜ್ಜನಗೊಂಡು ಸಂತಸವಾಂತಪರಿಅ.ಪ ನಂದಾವ್ರಜದಿ ಇಂದ್ರನೂ | ಕುಪಿತನಾಗಿ | ಅಂಧವೃಷ್ಟಿಯ ಕರೆಯಲು | ಸಿಂಧೂಶಯನ ಗಿರಿಯ | ಮಂದಹಾಸದಿ ನೆಗಹಿ | ಸುಂದರ ಗೋವ್ಗಳನೆ | ಚೆಂದಾದಿಂದಲೆ ಪೊರೆಯೆ | ಅಂದು ತೋರಿದುಪಕೃತಿಯ ನೆನೆದು ಗೋ | ವೃಂದಗಳೈ | ತಂದಿಂದಿರೆಯರಸಗೆ | ಮಿಂದು ಮಧುರಕ್ಷೀರಧಾರೆಯ ಕರೆಯಲು | ನಂದಕುವರಾನಂದವ ಬೀರಿದ 1 ಕಿರಿಯರೊಡನೆ ಕೂಡುತ | ಗೋಪಾಲನು | ಮುರಲಿನಾದವ ಗೈಯುತ | ಹರಿಣಾಕ್ಷಿಯರಮನೆ | ಹರುಷದಿಂದಲೇ ಪೊಕ್ಕು | ಪರಿಪರಿ ಲೀಲೆಯಿಂ | ಬೆರಗು ಮಾಡುತಲಿರೆ | ವರ ಧದಿಘೃತ ಭಾಂಡಗಳನೊಡೆದು | ಯದುವರನಾಲೈಸುತ ಬರುವರ ಸುಳಿವನು | ಸರಸದಿ ಕಂಡಾಕ್ಷಣದಿಂದೋಡಲು | ಸುರಿದುದು ಶಿರದಲಿ ದಧೀಘೃತಧಾರೆಯು 2 ಕರುಣಾಸಾಗರ ಹರಿಯು | ಮೋಹದಿ ವರ | ಭೈಷ್ಮಿಭಾಮೇರ ಕೂಡುತಾ | ಭರದಿ ಕುಣಿಯಲವರ ಶಿರದಿ ಮುಡಿದ ಸುರಗೀ | ಅರಳುಮಲ್ಲಿಗೆಯೊಳು | ಸೆರೆಬಿದ್ದ ಮಧುಪಗಳ | ನೆರೆದು ಝೇಂಕರಿಸುತ | ಹರುಷದಿ ಸುರಿಸಲು ಸುರ ಸಂದೋಹವು | ಪರಿ 3 ಅಂಗಳದೊಳು ಆಡುತ | ಮಂಗಳಮೂರ್ತಿ | ಸಂಗಡಿಗರ ಸೇರುತಾ | ಮುಂಗುರುಳ್ಗಳ ಮೇಲೆ | ಕೆಂದೂಳಿಯನೇ ಧರಿಸಿ | ಗೋಪಿ ರಂಗನ್ನಪ್ಪಿದಳು ಮುದದೀ || ಅಂಗನೆ ರುಕ್ಮಿಣಿ ಭಂಗಿಯ ನೋಡಲು | ಅಂಗಜ ಪಿತನನು | ಪಿಂಗದೆ ಬೇಡಲು | ಮಂಗಳಾಂಗಿ ಮನದಿಷ್ಟವ ಸಲಿಸಲು | ಸಿಂಗರಗೊಂಡನು | ಸಕ್ಕರೆ ಸುರಿಸುತೆ 4 ಸುರನದೀ ಜನಕ ತಾನೂ | ಕುಂಜವನದಿ | ಸರಸಿಜಾಕ್ಷೇರ ಕೂಡುತ | ಸರಸವಾಡುತಲಿರೇ | ಪರಮ ಸಂತೋಷದಿ | ತರುಲತೆಗಳು ಹರಿಯ ಚರಣ ಸೇವೆಯಗೈಯ್ದು | ಕದಳಿಗಳುದುರಿಸೆ | ಗಳಿತ ಫಲಂಗಳು | ಸರಸಿಜನಾಭನು ಕರುಣಿಸಿ ಭಕುತರ | ಶಿರಿಯಾಳಪುರದೊಳು ಮೆರೆದನು ವಿಭವದಿ 5 ವ್ಯಾಸರಾಜರ ಪೀಠದೀ | ರಂಜಿಪ ಲಕ್ಷ್ಮೀಶತೀರ್ಥರಿಂ ಸೇವಿಪ ಭವ | ಪರಿಪರಿ ನರಳುವ ದಾಸರ ಸಲಹಲಿನ್ನು | ಸಾಸಿರ ಶಂಖದಿ ಪೂಜೆಯಗೊಳುತಿರೆ | ದೇಶದೇಶದ ಜನರಾಲಿಸಿ ಬರುತಿರೆ | ಶ್ರೀಶಕೇಶವ ತನ್ನ ಮಹಿಮೆಯ ತೋರಿದ 6
--------------
ಶ್ರೀಶ ಕೇಶವದಾಸರು