ಗಂಡ ಬಂದರೇನೆಲೋ ರಂಗಾ ಯನ್ನ
ಗಂಡ ಬಂದರೇನೆಲೋ ರಂಗ ಪ
ಒಗೆತನ ಭಂಗಾ ಯನ ಗಂಡ ಅ.ಪ.
ಬಾಗಿಲ ತೆಗೆಯೆಂದಾರ್ಭಟದಿಂದಲಿ
ಕೂಗುವ ಧ್ವನಿ ಕೇಳೈ ಇದಕೋ
ಹ್ಯಾಗೆ ಮಾಡಲಿ ಹಾದಿಯ ಮನೆ ಯೆನ -
ಗಾಗದವರು ಬಂದೀಗ ನಗುವರೆನ್ನ1
ನಂದಗೋಕುಲದಿ ನಾನೇ ಗರತಿ -
ಯೆಂದು ಮೆರೆಯುತ್ತರಲೀಗ
ಬಂಧು ಬಳಗದೊಳು ಬಂಡಳಾಗಿಯೆಂ-
ದೆಂದಿಗೂ ತಲೆಯೆತ್ತಿ ತಿರುಗದಂತೆ ಯನ್ನ 2
ದಕ್ಕಲಿಲ್ಲ ಮನದೊಳಗೆ ಮಾಡಿಕೊಂ -
ಡಕ್ಕರ ತೀರಲಿಲ್ಲ ಮುನ್ನಾ
ಗಕ್ಕನೆ ಗೋವಳ ಬರಬಹುದೆ ಖಳ
ಸಿಕ್ಕಿದೇವÀಲ್ಲವೊ ಶ್ರೀದವಿಠಲ ಯನ್ನ 3