ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಭಕುತಿಯಲಿ ಮನವಸ್ಥಿರವ ಗೊಳ್ಳಲಿಬೇಕು ಅರತು ಸದ್ಭಾವದಲಿ ದೃಢಗೊಳ್ಳಬೇಕು ಧ್ರುವ ನಿಶ್ಚಯವಿಡಬೇಕು ದುಶ್ಚಲವ ಬಿಡಬೇಕು ನಿಶ್ಚಿಂತದಲಿ ನಿಜಸುಖ ಪಡೆಯಬೇಕು 1 ನಂಬಿನಡಿಯಬೇಕು ಡಂಭಕವ ಬಿಡಬೇಕು ಹಂಬಲಿಸಿ ಅಂಬುಜಾಕ್ಷನ ನೋಡಬೇಕು 2 ವಿಶ್ವಾಸವಿಡಬೇಕು ವಿಷಗುಣವ ಬಿಡಬೇಕು ವಿಶ್ವವ್ಯಾಪಕನ ವಿಶ್ವದಿ ನೋಡಬೇಕು 3 ರತಿ ಪ್ರೇಮ ಬಿಡಬೇಕು ಅತಿ ಹರುಷ ಪಡಬೇಕು ಸ್ತುತಿಸ್ತವನವನು ಪಾಡಿಗತಿ ಪಡೆಯಬೇಕು 4 ಆರು ಜರಿಯಬೇಕು ಮೂರು ಹರಿಯಬೇಕು ಅರಿತು ಗುರುಪಾದ ಮಹಿಪತಿಬೆರೆಯಬೇಕು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಂತರೆನ ಬಹುದೈಯ್ಯಾ ಇಂಥವರಿಗೇ | ಅಂತರಂಗದ ಹರಿ ಏಕಾಂತ ಭಕುತರೀಗೇ ಪ ಸುಖಕ ಮೈಯ್ಯವ ಮರಿಯಾ | ದುಃಖಗಳಿದಿಂದೇ ನೋಯ | ಚಕಿತನಾಗನು ಕುಮತಿ ವಿಕಳ ನುಡಿಗೆ | ಪ್ರಕಟ ಸೌಖ್ಯಕ ಹಿಗ್ಗ | ಸಕಲರೊಳು ಹರಿಯೇ ವ್ಯಾಪಕ ವರಿದು ನಿರ | ಹಂಕೃತಿಯನುಳ್ಳರಿಗೇ 1 ಪರಮ ಭಾಗವತೆನಿಸಿ | ಪರರ ಮನಿಗಳಿಗ್ಹೋಗಿ | ಪಿರಿದು ವಿದ್ಯವ ತೋರಿ ಪೊರೆಯ ನೋಡಲಾ | ಪರಧನಕ ಕರವಿಕಲ | ಪರಸತಿಯರಿಗೆ ಕುರುಡ | ಪರರ ನಿಂದೆಗೆ ಮೂಕ ಪರವಶ್ಯಾದರಿಗೆ 2 ವೇಷಡಂಭಕವಿಲ್ಲಾ | ಕ್ಲೇಶ ಕರ್ಮಗಳಿಲ್ಲಾ | ಈ ಸಿರಿಯ ಸುಖದ ಮನದಾಶೆಯಿಲ್ಲಾ | ವಾಸುದೇವನ ಪದ | ಧ್ಯಾಸದನುಭವದಿ ನಟ | ಪರಿ ಸಂಸಾರ ಲೇಶ ದೋರ್ವರಿಗೆ 3 ಹರಿಯ ನಾಮವ ನೆನೆದು | ಹರಿಯ ಕೀರ್ತನೆಯಲ್ಲಿ | ಹರುಷಗುಡಿಗಟ್ಟಿ ತನು ಮರದು ನಿಂದು | ಬರುವ ಪ್ರೇಮಾಂಜಲಿಯ | ಭರಿತಲೋಚನನಾಗಿ | ತರಿಸಿ ತಾರಿಸುವ ಘನಕರುಣವಂತರಿಗೆ 4 ಇಂತು ದುರ್ಗಮವಿರಲು | ಸಂತರಾವು ನೀವೆಂದು | ಸಿಂತರವ ಹೋಗಿ ಜನ ಸಿಂತರಿಸುವಾ | ಭ್ರಾಂತ ಮೆಚ್ಚುವನಲ್ಲಾ | ಶಾತಗುರು ಮಹಿಪತಿ ಸ್ವಂತನುಜಗೆಂದಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹೀಗಿದ್ದರೆ ಲೇಸು ಜ್ಞಾನಿಗೆಹೀಗಿದ್ದರೆ ಲೇಸು ಪ.ಸತಿಇದ್ದರೆ ಸಮಹಿತದವಳಾಗಿಸುತನಿದ್ದರೆ ನಿಜಮತದವನಾಗಿ 1ಧನವಿದ್ದರೆ ಸಜ್ಜನಕೆ ವಿಭಾಗಮನೆ ಇದ್ದರೆ ಮಧ್ಯಾಹ್ನಕನ್ನತ್ಯಾಗ 2ಭಕುತಿ ಇದ್ದರೆ ಡಂಭಕವನಳಿದು ವಿರಕುತಿದ್ದರೆ ಭವದಾಶೆಯ ಕಳೆದು 3ಮತಿ ಇದ್ದರೆ ಶುಭಮತಿಯವನಾಗಿಧೃತಿ ಇದ್ದರೆ ದುಷ್ಕøತಿಗಳನೀಗಿ4ಪ್ರಸನ್ವೆಂಕಟೇಶನ ಪ್ರಸಾದವನುಣುತವಿಷಮ ಜನನ ಮೃತಿ ಗಸಣೆ ತಪ್ಪಿಸುತ 5
--------------
ಪ್ರಸನ್ನವೆಂಕಟದಾಸರು