ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆತ್ಮನಿವೇದನೆಯ ಹಾಡುಗಳು ಡಂಭಕದ ಭಕುತಿಯನು ಬಿಡು ಕಂಡ್ಯ ಮನವೆ ಪ ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು ಅ.ಪ. ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆಅಹಿಕ ಫಲವಲ್ಲದೆ ಮೋಕ್ಷವುಂಟೆ ?ವಿಹಿತಾ ವಿಹಿತವ ತಿಳಿದು ಸತ್ಕರ್ಮ ಕಿಂಚಿತು ಮಾಡೆದಹಿಸುವುದು ಅಘರಾಶಿ ಅಹಿಶಾಯಿ ಒಲಿವ 1 ವರ ವೈಷ್ಣವರು ಬಂದು ನಿಲಲು ವಂದಿಸದಲೆಹರಿ ಪೂಜೆ ಮಾಳ್ಪೆನೆಂದು ಕುಳಿತುಕೊಂಬೆಅರಿಯದ ಊರೊಳಗೆ ಅಗಸರ ಮಾಳಿಯೇಹಿರಿಯ ಮುತ್ತೈದೆಯು ಎಂದು ಕರೆಸುವಂತೆ 2 ಜಪವ ಮಾಡುವೆನೆಂದು ಮುಸುಕನಿಟ್ಟು ಕುಳಿತುತಪಿಸುವೆ ಒಳಗೆ ನೀ ಧನದಾಸೆಯಿಂದೆಕುಪಿತ ಬುದ್ಧಿಯ ಬಿಟ್ಟು ಮೋಹನ್ನ ವಿಠ್ಠಲನಗುಪಿತ ಮಾರ್ಗದಿ ಭಜಿಸಿ ಸುಪಥವನುಸರಿಸೆ 3
--------------
ಮೋಹನದಾಸರು
ದಾಸರೆಂದರೆ ಪುರಂದರದಾಸರಯ್ಯ ಪ ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಅ.ಪ ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತಕಾಸುಗಳಿಸುವ ಪುರುಷನವ ದಾಸನೇ 1 ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದಲೆತಂಬೂರಿ ಮೀಟಲವ ಹರಿದಾಸನೇ 2 ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟುಗಾಯನವ ಮಾಡಲವ ದಾಸನೇನೈಯ3 ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿಕೂಟ ಜನರ ಮನವ ಸಂತೋಷಪಡಿಸಿಗೂಟ ನಾಮಗಳಿಟ್ಟುಕೊಂಡ್ಹಿರಿಯ ತಾನೆನುತ,ತೂಟಕವ ಮಾಡಲವ ದಾಸನೇನೈಯ4 ಪುರಂದರ ದಾಸರಿವರೈಯ 5
--------------
ವ್ಯಾಸರಾಯರು
ನೇಮವಿಲ್ಲದ ಹೋಮವೇತಕೆರಾಮನಾಮವಿರದ ಮಂತ್ರವೇತಕೆ ಪ ನೀರ ಮುಣುಗಲು ಏಕೆ ನಾರಿಯಳ ಬಿಡಲೇಕೆವಾರಕೊಂದುಪವಾಸ ಮಾಡಲೇಕೆನಾರಸಿಂಹನ ದಿವ್ಯನಾಮವನು ನೆನೆದರೆಘೋರ ಪಾತಕವೆಲ್ಲ ತೊಲಗಿ ಹೋಗುವುದು 1 ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆಡಂಭಕದ ವೃತ್ತಿಯಲಿ ಇರಲೇತಕೆಅಂಬುಜನಾಭನನು ಭಾವದಲಿ ನೆನೆದರೆಇಂಬುಂಟು ವೈಕುಂಠವೆಂಬ ಪುರದೊಳಗೆ 2 ಬಂಧದೊಳಗೆ ಬಿದ್ದು ಹರಿಯನೆ ನೆನೆಯುತಿರೆಬೆಂದು ಹೋಗುವುವು ದುರಿತಂಗಳೆಲ್ಲಬಂದ ದುಃಖಗಳೆಲ್ಲ ನಿಲ್ಲದಲೆ ಕಳೆಯುವವುಚೆಂದಾಗಿ ನೆಲೆಯಾದಿಕೇಶವನ ನೆನೆಯೆ3
--------------
ಕನಕದಾಸ
ಕೇಳನೊಹರಿ ತಾಳನೋ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ಪ.ತಂಬೂರಿ ಮೊದಲಾದಅಖಿಳ ವಾದ್ಯಗಳಿದ್ದುಕೊಂಬು ಕೊಳಲ ಧ್ವನಿಸಾರವಿದ್ದು ||ತುಂಬುರು ನಾರದರ ಗಾನ ಕೇಳುವಹರಿನಂಬಲಾರ ಈ ಡಂಭಕದ ಕೂಗಾಟ 1ನಾನಾಬಗೆಯಭಾವ ರಾಗ ತಿಳಿದು ಸ್ವರಜಾÕನ ಮನೋಧರ್ಮ ಜಾತಿಯಿದ್ದು ||ದಾನವಾರಿಯ ದಿವ್ಯ ನಾಮರಹಿತವಾದಹೀನ ಸಂಗೀತ ಸಾಹಿತ್ಯವ ಮನವಿತ್ತು 2ಅಡಿಗಡಿಗಾನಂದ ಬಾಷ್ಪ ಪುಳಕದಿಂದನುಡಿನುಡಿಗೂ ಶ್ರೀ ಹರಿಯೆನ್ನುತ ||ದೃಢಭಕ್ತರನು ಕೊಡಿ ಹರಿಕೀರ್ತನೆಯ ಪಾಡಿಕಡೆಗೆ ಪುರಂದರವಿಠಲನೆಂದರೆ ಕೇಳ್ವ 3
--------------
ಪುರಂದರದಾಸರು