ಬಂತೆಂದ್ಹಿಗ್ಗ ಬೇಡೆಲೊ ಖೋಡಿ ಹೋ
ಯ್ತೆಂದಳಬೇಡೆಲೆ ಖೋಡಿ ಪ
ಬಂತುಹೋಯ್ತೆಂಬುದರಂತರ ತಿಳಕೊಂ
ಡಂದಕನನುವಿಗೆ ತ್ವರೆ ಮಾಡಿ ಅ.ಪ
ಬಂದು ನಿನಗಾಗುವುದೇನೋ ಮತ್ತು ಹೋದರೆ
ನಿಂತ್ಹೋಗುವುದೇನೋ
ಮಂದನಾಗದೆ ನೀ ಬಂದ ಖೂನ ತಿಳಿ
ದೊಂದಿ ಭಜಿಸಿ ಹರಿದಯ ಪಡಿ1
ಎಂಥಸಮಯವನು ನೀ ಪಡೆದು ಭವ
ಸಂತೆಯೊಳಗೆ ನಿಂತಿ ಮೈಮರೆದು
ಸಂತೆಯ ತಂತ್ರಕೆ ಸೋಲದೆ
ಕಂತು ಪಿತನನೆನಿ ಲಗುಮಾಡಿ 2
ಕ್ಷಿತಿಯ ಸುಖವು ನಿನಗೊಂದಿಲ್ಲ ನಿಜ
ಭವ ಮೂಳ
ಸತತದಿ ಭಕುತಹಿತ ಶ್ರೀರಾಮನನ್ನು
ನುತಿಸಿ ಮುಕ್ತಿ ಸುಖ ಪಡಿಬೇಡಿ 3