ಕಾಲ ಕಳೆಯಬೇಡ ಮನವೇ
ಮೂಳನಾಗಬೇಡ ಪ
ಕಾಳು ಕತ್ತಲೆಂಬ ಹಾಳು ಸಂಸಾರ ಮಾಯಾ
ಜಾಲ ಮೋಹಿಸಿ ಹೊತ್ತು ಹಾಳುಮಾಡಿಕೊಂಡು ಅ.ಪ
ನಿನ್ನೊಳು ಹುಡುಕಾಡಿ ಹರಿಯ
ಉನ್ನತಕೃಪೆ ಪಡಿ
ಕಣ್ಣುಮುಚ್ಚಿ ಪರರ್ಹೆಣ್ಣಿನ ಹೊಲೆಮೈ
ಬಣ್ಣಕೆ ಮನಸೋತು ಠೊಣ್ಯನೆನಿಸಿಕೊಂಡು 1
ನೋಡಿ ತಿಳಿದು ಭವಮೂಲ ಹುಡುಕಾಡಿ
ಹಿಡಿಯೋ ನಿಜವ
ರೂಢಿಸುಖಕೆ ಮನನೀಡಿ ಸನ್ಮಾರ್ಗದ
ಜಾಡು ತಿಳಿಯದೆಮತಾಡಣೆಗೊಳಪಟ್ಟು 2
ಅರಿತು ಶ್ರೀರಾಮಚರಣ ನಿರುತದಿ
ಗುರುತು ಹಿಡಿಯೋ ಜಾಣ
ಪರಲೋಕ ಸಾಧನ ಸುರತು ಷರತು ಮಾಡಿಕೊಂಡು
ಪರಕೆ ಪರಮ ಪರತರ ಮುಕ್ತಿ ಸುಖ ಸುರಿ 3