ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕದವರ ತಳ್ಳಿ ಕಾಲಿಗೆಸುತ್ತಿದ ಬಳ್ಳಿ ಶೋಕಮಯಸಂಕೋಲೆ ಸಾಕು ಹರಿ ಕಡಿ ಕೀಲಿ ಪ ದಮ್ಮನಿದ್ದರೆ ಠೊಣ್ಯನೆಂಬುವರು ತೆಳ್ಳಗಿದ್ದರೆ ಬಡಕನೆಂಬುವರು ರಮ್ಯನುಡಿಯೆ ಬಾಯ್ಬಡಕನೆಂಬುವರು ಸುಮ್ಮನಿದ್ದರೆ ಗುಸುಕನೆಂಬುವರು 1 ಜಮ್ಮಾಸಿ ಉಂಡರೆ ಜೋಗಿಯೆಂಬುವರು ಕಮ್ಮಿ ಉಂಡರೆ ರೋಗಿಯೆಂಬುವರು ದಿಮ್ಮಾಕೆಂಬುವರು ಜಳಜಳವಿದ್ದರೆ ಸಮ್ಮತಬಡರು ಹೊಲಸುಕಂಡರೆ 2 ಮಾಡಿ ಉಂಡರೆ ನೋಡಿ ಸಹಿಸರು ಬೇಡಿ ಉಂಡರೆ ಹೇಡಿಯೆಂಬುವರು ಗಾಢಮುಕ್ತಿಪದ ಕೊಡುವ ಶ್ರೀರಾಮನ ಹಾಡಿ ಪಾಡಿದರೆ ನಿಂದೆ ಮಾಡುವರು3
--------------
ರಾಮದಾಸರು