ಒಟ್ಟು 6 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲ ಕಳೆಯಬೇಡ ಮನವೇ ಮೂಳನಾಗಬೇಡ ಪ ಕಾಳು ಕತ್ತಲೆಂಬ ಹಾಳು ಸಂಸಾರ ಮಾಯಾ ಜಾಲ ಮೋಹಿಸಿ ಹೊತ್ತು ಹಾಳುಮಾಡಿಕೊಂಡು ಅ.ಪ ನಿನ್ನೊಳು ಹುಡುಕಾಡಿ ಹರಿಯ ಉನ್ನತಕೃಪೆ ಪಡಿ ಕಣ್ಣುಮುಚ್ಚಿ ಪರರ್ಹೆಣ್ಣಿನ ಹೊಲೆಮೈ ಬಣ್ಣಕೆ ಮನಸೋತು ಠೊಣ್ಯನೆನಿಸಿಕೊಂಡು 1 ನೋಡಿ ತಿಳಿದು ಭವಮೂಲ ಹುಡುಕಾಡಿ ಹಿಡಿಯೋ ನಿಜವ ರೂಢಿಸುಖಕೆ ಮನನೀಡಿ ಸನ್ಮಾರ್ಗದ ಜಾಡು ತಿಳಿಯದೆಮತಾಡಣೆಗೊಳಪಟ್ಟು 2 ಅರಿತು ಶ್ರೀರಾಮಚರಣ ನಿರುತದಿ ಗುರುತು ಹಿಡಿಯೋ ಜಾಣ ಪರಲೋಕ ಸಾಧನ ಸುರತು ಷರತು ಮಾಡಿಕೊಂಡು ಪರಕೆ ಪರಮ ಪರತರ ಮುಕ್ತಿ ಸುಖ ಸುರಿ 3
--------------
ರಾಮದಾಸರು
ಛೀ ನಿನ್ನ ಮೋರೆ ಮೇಲೆ - ಠೊಣ್ಯಛೀ ನಿನ್ನ ಮೋರೆ ಮೇಲೆ ಪ ನಿತ್ಯ ಪರಿ ಆಯುಷ್ಯವ ವ್ಯರ್ಥ ಕಳೆಯುತಿದ್ದೆ ಠೊಣ್ಯ 1 ಕಂಡ ಕಂಡಲ್ಲಿಗೆ ಪೋಗಿ ಧನಂಗಳ ಕೊಂಡು ಬರುತ್ತಲಿದ್ದೆಹೆಂಡಿರು ಮಕ್ಕಳು ಹಿತದವರೆಂದು ಕೊಂಡಾಡುತಲಿದ್ದೆಖೋಡಿ ಮಾತುಗಳನು ಹೇಳಿ ಮಂದಿಯ ಕುಂಡೆ ಚಿವುಟುತಿದ್ದೆಭಂಡ ಬಾಳು ಇದು ರಂಡೆ ಗಂಡ ಕಂಡ್ಯ ಯಮನ ಬಾಧೆ ಠೊಣ್ಯ2 ಮಾನವ ಜನ್ಮಕೆ ಬಂದು ಪುಣ್ಯ ಮತ್ತೇನೂ ಮಾಡದೆ ಹೋದೆದಾನವಾಂತ ಸತ್ಪಾತ್ರರಿಗೆ ನೀ ದೀನತ್ವವ ಪಡೆದೆಜ್ಞಾನಶೂನ್ಯ ಮದವೇರಿದ ಸೊಕ್ಕಿದ ಕೋಣಕೆ ಹುಟ್ಟಿದ್ದೆದೀನರಕ್ಷಕಾದಿಕೇಶವ ವಿಠಲಂಗೆ ನೀನತಿ ದೂರಾದೆ ಠೊಣ್ಯ 3
--------------
ಕನಕದಾಸ
ಲೋಕದವರ ತಳ್ಳಿ ಕಾಲಿಗೆಸುತ್ತಿದ ಬಳ್ಳಿ ಶೋಕಮಯಸಂಕೋಲೆ ಸಾಕು ಹರಿ ಕಡಿ ಕೀಲಿ ಪ ದಮ್ಮನಿದ್ದರೆ ಠೊಣ್ಯನೆಂಬುವರು ತೆಳ್ಳಗಿದ್ದರೆ ಬಡಕನೆಂಬುವರು ರಮ್ಯನುಡಿಯೆ ಬಾಯ್ಬಡಕನೆಂಬುವರು ಸುಮ್ಮನಿದ್ದರೆ ಗುಸುಕನೆಂಬುವರು 1 ಜಮ್ಮಾಸಿ ಉಂಡರೆ ಜೋಗಿಯೆಂಬುವರು ಕಮ್ಮಿ ಉಂಡರೆ ರೋಗಿಯೆಂಬುವರು ದಿಮ್ಮಾಕೆಂಬುವರು ಜಳಜಳವಿದ್ದರೆ ಸಮ್ಮತಬಡರು ಹೊಲಸುಕಂಡರೆ 2 ಮಾಡಿ ಉಂಡರೆ ನೋಡಿ ಸಹಿಸರು ಬೇಡಿ ಉಂಡರೆ ಹೇಡಿಯೆಂಬುವರು ಗಾಢಮುಕ್ತಿಪದ ಕೊಡುವ ಶ್ರೀರಾಮನ ಹಾಡಿ ಪಾಡಿದರೆ ನಿಂದೆ ಮಾಡುವರು3
--------------
ರಾಮದಾಸರು