ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಿರಬಹುದೀತ ಗೆಳತೀ ಯಾರಿರಬಹುದೀತ ಪ ಯಾರೆಂದರಿಯದೆ ಪೋಗದೆ ಕೊರತೆ ಯಾರಿರಬಹುದೀತ ಅ.ಪ ಸಾವಿರ ಸಂಖ್ಯೆಯ ಗೋವಳರಿದ್ದರೂ ಯಾವನಿಗೀ ವಿಧ ಠೀವಿಯಿರುವುದೇ ಹಾವಭಾವಗಳ ನೋಡಲು ಈತನ ಗೋವಳ ವೇಷವದಾವ ಕಾರಣವೋ 1 ನಮಗೇತಕೆ ಈತನ ಗೋಜೆಂದರು ಕಮನೀಯನ ನೋಡುತ ನೋಡುತ ಬಲು ಮಮತೆಯು ಮನದಲಿ ಏರುತಲಿರುವುದು ಕಮಲನಯನೆ ನಾ ನಮಿಸುವೆ ಪೇಳೆ 2 ಸರಳನೋ ದುರುಳನೋ ಅರಿಯುವುದೆಂತೇ ಕರೆಯದೆ ಹೋದರೆ ಜರಿಯಲುಬಹುದೇ ಮುರಳಿಯ ನಾದದ ಕರೆ ಬಂದರೆ ನಾ ಬರವೆನೆಂದರು ಹೇ ಸರಸ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು