ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೊಡಕ ಹರವ ಮಾಡಿಕೊಳ್ಳಿರೊ ಹುಟ್ಟಿ ಬಾಹ್ವ ಮನುಜರೆಲ್ಲ ಧ್ರುವ ನಾನು ನನ್ನದೆಂದು ಜ್ಞಾನಹೀನನಾಗಿ ಬಾಳುತಿಹ್ಯ ಗಾಣ-ದೆತ್ತಿನಂತೆ ಮುಂದೆಗಾಣದಿಹ್ಯ ಭ್ರಮೆಯದ 1 ಜೀವ ಶಿವ ದಾವದೆಂದು ಠಾವಿಕಿಲ್ಲ ದಿಹ್ಯದಾಗಿ ನಾವು ನೀವು ಎಂದು ಹ್ಯಾವ ಹೊಮ್ಮಿ ಹೊಡೆದಾಡುವ 2 ಸಂಚಿತ ಪ್ರಾರಬ್ಧ ಕ್ರಿಯಮಾಣದೊಳು ಸಿಲ್ಕಿ ಪ್ರ ಪಂಚ ಪರಮಾರ್ಥ ದಾವದೆಂದು ಮುಂಚೆ ತಿಳಿಯದ 3 ತನವು ತಾನೆಂದು ಘನವು ಮರೆದು ದಣಿದು ತಿರುಗುತಿಹ್ಯ ಮನದ ಮಾಯದೊಳು ಸಿಲ್ಕಿ ತನಗೆ ತಾಂ ತಿಳಿಯದೆ 4 ತೊಡಕು ಹರವ ಮಾಡಿಗೊಳ್ಳಿ ಪಡದು ಙÁ್ಞನಭಕ್ತಿಯಿಂದ ಮೂಢ ಮಹಿಪತಿಯನ್ನೊಡೆಯ ಬಿಡದೆ ನೆಲೆಗೊಳ್ಳುವ್ಹಾಂಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಿಡೋ ಬಿಡು ಮನುಜ ಭ್ರಾಂತಿಯ ಪಡಕೊ ನಿನ್ನೊಳು ತಿಳಿಯುವ್ಹಾಂಗ ಸದ್ಗುರು ಭಕ್ತಿಯ ಧ್ರುವ ಬುಡದಲಿ ಫಲವಿರಲಿಕ್ಕೆ ಅಡರುವದ್ಯಾಕೊ ತುದಿಗೆ ಪಡಬ್ಯಾಡೋ ನಾನಾ ಸಾಯಾಸ ತೊಡಕಿ ಬೀಳುವ 1 ಕಾಶಿಗೆ ಹೋಗಬೇಕೆಂದು ಕಾಸಿನ ಚಾಲವರಿಕ್ಯಾಕ ಆಸಿ ಅಳಿದರೊಂದೇ ಸಾಕು ಭಾಸುದು ತನ್ನೊಳಗೆ 2 ದೇವರೆ ತಾ ದೂರಿದ್ದರೆ ಆವದೊ ನಿನ್ನ ಕಾವ ದೈವ ಠಾವಿಕಿ ಮಾಡಿಕೊಳ್ಳೊ ಸಾವಧ ವಾಗಿ 3 ಹೇಳಿಕೊಡುವ ಸ್ವಾಮಿ ಬೆಳಗ ತಾ ಝಾಡಿ 4 ಸಾಯಾಸವಿಲ್ಲದೆ ಮಹಿಪತಿಗೆ ಶ್ರಯದೋರಿತು ಗುರುವಾಕ್ಯದಲಿ ಆಯಿತು ಮಾಡಿದ ಗುರು ತಾಯಿತಂದೆನಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಸ್ತು ಒಂದೆ ಅದೆ ಅನಾದಿಯಿಂದ ಸ್ವಸ್ತ ಮಾಡಿಕೊಳ್ಳಿ ಗುರುಮುಖದಿಂದ ಧ್ರುವ ಹೂವಿಲ್ಲದೆ ಫಲವಾಗುವ ಕಾಯಿ ಠಾವಿಲ್ಲದೆ ಮ್ಯಾಲೆ ಮುಚ್ಯಾದೆ ಮಾಯಿ ಭಾವಿಕರಿಗಾದೆವು ಪಾಯಿ ಠಾವಿಕಿ ಮಾಡಿಕೊಬೇಕು ತಾಯಿ 1 ಬೀಜಿಲ್ಲದೆ ಫಲ ನಿಜವಾಗ್ಯದೆ ಮೂಜಗದೊಳು ರಾಜಿಸುತ್ತದೆ ಸೂಜಿಮೊನೆಗಿಂತ ಸಣ್ಣವ್ಯಾಗದೆ ವಾಜಿಹೀನರ ವರ್ಜಿಸುತದೆ 2 ನೋಡೇನೆಂದರೆ ನೋಟಕತೀತ ಹಿಡಿದೇನಂದರೆ ಸಿಕ್ಕದು ಸ್ವಸ್ಥ ಪಡೆದುಕೊಂಡವರಿಗೈದೆ ಆಯಿತ ಮೂಢ ಮಹಿಮತಿ ಗುರು ನಿಜಹಿತ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು